ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಪತ್ರಕರ್ತ ನಾಗೇಶ ಹೆಗಡೆ

‘ಬಡತನದ ನೋವು, ಹಸಿವು, ಅವಮಾನದಿಂದ ಸಿಡಿದು ಸಿಡಿಮಿಡಿಗುಟ್ಟುವ ಮಾಮೂಲು ಪ್ರತಿರೋಧದ ದನಿಯ ಬದಲು ಇಲ್ಲಿ, ಸಮಾಜದ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂಬ ತುಡಿತದಿಂದ ಕೆಲಸ ಮಾಡಿದ ಅನುಭವಗಳು ಆಪ್ತವಾಗಿವೆ. ಕನ್ನಡದ ಮಟ್ಟಿಗೆ ‘ಹಾದಿಗಲ್ಲು’ ಅಪರೂಪದ ಸಾಹಿತ್ಯವಾಗಿದೆ.’ ಎಂದಿದ್ದಾರೆ ನಾಗೇಶ ಹೆಗಡೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ‘ದಲ್ಲಿ ಪತ್ರಕರ್ತ ನಾಗೇಶ ಹೆಗಡೆ
ಪತ್ರಕರ್ತ, ಲೇಖಕ ನಾಗೇಶ ಹೆಗಡೆ
Follow us
TV9 Web
| Updated By: ganapathi bhat

Updated on:Apr 06, 2022 | 11:07 PM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಹಿರಿಯ ಪತ್ರಕರ್ತ, ಲೇಖಕ ನಾಗೇಶ ಹೆಗಡೆ ಅವರ ಆಯ್ಕೆಗಳು ಹೀಗಿವೆ.

ಕೃ: ಹಾದಿಗಲ್ಲು (ಆತ್ಮಕಥೆ) ಲೇ: ಕೆ.ಎ. ದಯಾನಂದ ಪ್ರ: ಸಮನ್ವಿತ ಪ್ರಕಾಶನ

ಇದು ಐಎಎಸ್ ಅಧಿಕಾರಿ ಕೆ.ಎ. ದಯಾನಂದ ಅವರ ಆತ್ಮಕಥೆಯ ಮೊದಲ ಭಾಗ. ತುಂಬ ಆತ್ಮೀಯವಾಗಿದೆ. ಗ್ರಾಮೀಣ ಬಡ ಕುಟುಂಬದಿಂದ ಬಂದ ದಯಾನಂದ, ಮೇಸ್ತ್ರಿ ಕೆಲಸ ಮಾಡುತ್ತಲೇ ಬಿಎ ಎಮ್ಎ ಮುಗಿಸಿ, ಎಲ್ಲೋ ಗುಮಾಸ್ತನಾಗಿ, ನಂತರ ಶಿಕ್ಷಕನಾಗಿ, ಆಮೇಲೆ ಕೆಎಎಸ್ ಅಧಿಕಾರಿಯಾಗಿ ತಮ್ಮ ದಕ್ಷ ಮತ್ತು ಪ್ರಾಮಾಣಿಕ ಕೆಲಸದಿಂದಾಗಿ ಐಎಎಸ್ ಅಧಿಕಾರಿಯಾಗಿ ಪದೋನ್ನತಿ ಪಡೆದವರು. ಒಬ್ಬ ಆಡಳಿತಾಧಿಕಾರಿಯಾಗಿ ಗ್ರಾಮೀಣ ಬದುಕಿನ ಚಿತ್ರಣವನ್ನು ಸೊಗಸಾಗಿ, ತೀರ ಅಪರೂಪದ ಆಪ್ತ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಕಥನದಲ್ಲಿ ಅವರ ಬಾಲ್ಯದ ಹಳ್ಳಿ ಬದುಕಿನ ಅನುಭವಗಳ ಜೊತೆಜೊತೆಗೇ ಸರಕಾರಿ ಅಧಿಕಾರಿಯೊಬ್ಬನ ದೃಷ್ಟಿಕೋನವೂ ಇರುವುದರಿಂದ ಇದುವರೆಗೆ ಕನ್ನಡದಲ್ಲಿ ಬಂದ ಗ್ರಾಮೀಣ ಚಿತ್ರಣಕ್ಕಿಂತ ವಿಭಿನ್ನವಾದ ದೃಷ್ಟಿಕೋನವನ್ನು ಕಾಣಬಹುದಾಗಿದೆ. ಎಮ್ಮೆ ಬಾಲ ಹಿಡಿದು ಈಜು ಕಲಿತಿದ್ದು, ಕೋಳಿ ಕದಿಯಲು ಹೋಗಿ ಹೈರಾಣಾಗಿದ್ದು, ನಕ್ಸಲ್ ಸರೋಜಳ ಊರಿಗೆ ಕರೆಂಟ್ ಕೊಡಿಸಿದ್ದು ಓತಪ್ರೋತವಾಗಿ ಇಲ್ಲಿ ಬಂದಿವೆ. ಬಡತನದ ನೋವು, ಹಸಿವು, ಅವಮಾನದಿಂದ ಸಿಡಿದು ಸಿಡಿಮಿಡಿಗುಟ್ಟುವ ಮಾಮೂಲು ಪ್ರತಿರೋಧದ ದನಿಯ ಬದಲು ಇಲ್ಲಿ, ಸಮಾಜದ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂಬ ತುಡಿತದಿಂದ ಕೆಲಸ ಮಾಡಿದ ಅನುಭವಗಳು ಆಪ್ತವಾಗಿವೆ. ಕನ್ನಡದ ಮಟ್ಟಿಗೆ ಅಪರೂಪದ ಸಾಹಿತ್ಯವಾಗಿದೆ.

ಕೃ: ಊರೆಂಬ ಉದರ ಲೇ: ಪ್ರಮೀಳಾ ಸ್ವಾಮಿ ಪ್ರ: ಅಕ್ಷರ ಪ್ರಕಾಶನ

ಜೀವನದ ಮುಖ್ಯಭಾಗವನ್ನು ಕುಪ್ಪಹಳ್ಳಿ ಎಂಬ ಸುಸಂಸ್ಕೃತ ಹಳ್ಳಿಯಲ್ಲಿ ಕಳೆದ ಹಿರಿಯ ಮಹಿಳೆ ಪ್ರಮೀಳಾ ಸ್ವಾಮಿ ಕೊನೆಗೆ ಬೆಂಗಳೂರಿನ ಮಗಳ ಮನೆಯಲ್ಲಿ ಕೂತು ನೆನಪಿಸಿಕೊಳ್ಳುವ ತಂಪು ಕಥನ ಇಲ್ಲಿದೆ. ತಾನು ಬಿಟ್ಟು ಬಂದ ಹಳ್ಳಿಯ ಜನ, ನಡೆನುಡಿ, ಚಿಕ್ಕಪುಟ್ಟ ಕಥನಗಳ ಜೊತೆಗೆ ಅಡುಗೆ ರಿಸಿಪಿಯೂ ಇದರಲ್ಲಿದೆ. ಮರೆಯಲಾಗದ ಹಾಡು-ಹಸೆ, ಮರೆಯಬಾರದ ಅಡುಗೆ ವಿಧಾನ, ಹೊಳೆ ಊಟ, ಪುಳ್ಳಂಗಾಯಿ ಉಂಡೆ, ದೇವರ ದೀಪಕ್ಕಾಗಿ ಹಿಪ್ಪೆ ಎಣ್ಣೆ ತಯಾರಿಸುವುದು, ಗರುಡಮಚ್ಚೆಯ ಮೇಷ್ಟ್ರೂ, ನಾಗರಪಂಚಮಿಯಂದು ಮರದ ಮೇಲೆ ನಿಜದ ಹಾವು ತೂಗಾಡಿದ್ದು, ಎಲ್ಲವೂ ಒಂದಕ್ಕೊಂದು ಆಪ್ಯಾಯಮಾನವಾಗಿ ಹೆಣೆದುಕೊಂಡಿವೆ.

ಹಿರಿಯ ಜೀವವೊಂದು ತನ್ನೆಲ್ಲ ಕರ್ತವ್ಯಗಳನ್ನು ಮುಗಿಸಿ ಜಗುಲಿಯಲ್ಲಿ ಕೂತು ಗತಕಾಲದ ಮಾಯೆಯನ್ನು ಮೆಲುಕುವಂತೆ ರಚಿತವಾದ ಈ ಕೃತಿ ‘ಮುಂದಿನ ಪೀಳಿಗೆಗೆ ದಾಟಿಸುವ ಸಿರಿ ಅರಿವಿನಂತೆ’ ಎಂದು ವೈದೇಹಿ ಬಣ್ಣಿಸಿದ್ದಾರೆ. ಇದು ಸಂಸ್ಕೃತಿ ಕಥನವೂ ಹೌದು, ಬೇರುಮೂಲದಲ್ಲಿ ವಿಸ್ತರಿಸಿಕೊಂಡ ಜೀವಿವೈವಿಧ್ಯದ ಪರಿಸರ ಕಥನವೂ ಹೌದು. ಕನ್ನಡ ಸಾಹಿತ್ಯಕ್ಕೆ ಅಪರೂಪವಾಗಿ ಬಂದ ಒಂದು ರುಚಿಕರ ಕಲಸು ಮೇಲೋಗರ ಇದು.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಲೇಖಕ ದಸ್ತಗೀರ ಸಾಬ ದಿನ್ನಿ

Published On - 5:03 pm, Thu, 31 December 20

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ