ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಅನುವಾದಕಿ ನಾಗರೇಖಾ ಗಾಂವಕರ

'ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅನಾಗರಿಕ ಜಗತ್ತು ಹೇಗೆ ಕ್ರೂರವಾಗಿ ವರ್ತಿಸಿ ಲೂಟಿಕೋರರಂತೆ ದೋಚುತ್ತದೆ ಎಂಬುದನ್ನು ಕಾದಂಬರಿ ಪರಿಣಾಮಕಾರಿಯಾಗಿ ನಿರೂಪಿಸಿದೆ. ಹೀಗೆ ವರ್ತಿಸಲು ಕಾರಣಗಳು ಏನಿರಬಹುದು ಎಂಬುದನ್ನು ಓದುಗನ ವಿಶ್ಲೇಷಣೆಗೆ ಕಾದಂಬರಿಕಾರರು ಬಿಡುತ್ತಾರೆ. ಇಂತಹ ಅನಾಗರಿಕ ಜಗತ್ತನ್ನು ಸೃಷ್ಟಿಸಿದ್ದು ನಾಗರಿಕ ಜಗತ್ತೇ ಎಂಬ ವಿಚಿತ್ರ ಸತ್ಯದ ಹೊಳಹೂ ಇಲ್ಲಿದೆ.‘ ಎನ್ನುತ್ತಾರೆ ನಾಗರೇಖಾ ಗಾಂವಕರ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಅನುವಾದಕಿ ನಾಗರೇಖಾ ಗಾಂವಕರ
ಕವಿ, ಅನುವಾದಕಿ ನಾಗರೇಖಾ ಗಾಂವಕರ
Follow us
ಶ್ರೀದೇವಿ ಕಳಸದ
|

Updated on:Dec 31, 2020 | 4:07 PM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕವಿ, ಅನುವಾದಕಿ ನಾಗರೇಖಾ ಗಾಂವಕರ ಅವರ ಆಯ್ಕೆಗಳು ಇಲ್ಲಿವೆ.

ಕೃ: ಮೃಗಶಿರ (ಕಾದಂಬರಿ) ಲೇ: ಶ್ರೀಧರ ಬಳಗಾರ ಪ್ರ: ಅಭಿನವ

ಶ್ರೀಧರ ಬಳಗಾರರ ಮೃಗಶಿರ ಕಾದಂಬರಿ ಮೆಚ್ಚುಗೆ ಆದದ್ದು ಅದು ಕಟ್ಟಿಕೊಟ್ಟ ಉತ್ತರಕನ್ನಡದ ಬದುಕು, ಅಲ್ಲಿಯ ದೇಸಿ ಭಾಷಾ ಸೊಗಡು, ಆ ಪರಿಸರದ ಸಹಜ ಜೀವನ ವಿಧಾನಗಳನ್ನು ಉತ್ಪ್ರೇಕ್ಷೆಯಿಲ್ಲದಂತೆ ಕಟ್ಟಿಕೊಟ್ಟ ರೀತಿಯಿಂದ, ಹಾಗೆ  ಸತ್ಯಕ್ಕೆ ಎರವಾಗದಂತೆ, ಭಾವನಾತ್ಮಕ ಸಂವೇದನೆಗಳ ಮೂಲಕವೇ ಸಾಗುತ್ತ, ಆ  ಸಂವೇದನೆಗಳನ್ನು ಮೀರಿ ಬೆಳೆಯುವ ಪಾತ್ರಗಳ ಕಟ್ಟಿಕೊಟ್ಟ ಕಾರಣಕ್ಕಾಗಿ ಕಾದಂಬರಿ ವಿಶಿಷ್ಟವೆನಿಸುತ್ತದೆ. ಹಾಗೇ ಕಥಾ ಸಾಂದರ್ಭಿಕತೆ ಸ್ವಾತಂತ್ರ್ಯ ಹೋರಾಟ ಕಾಲವಿದ್ದು, ಅದರ ನೇರ ಪರಿಣಾಮ ಸಾಮಾನ್ಯರ ಜೀವನದಲ್ಲಿ ಉಂಟುಮಾಡಿದ ಏರಿಳಿತದ ಕಾರಣ ಜೀವನ ಸಂಗ್ರಾಮದ ಚಿತ್ರಣವಿದೆ. ಜೀವನದ ನಿಜವಾದ ಅರ್ಥ ಯಾವುದರಲ್ಲಿದೆ. ಬಂಧನದಲ್ಲೋ, ಬಿಡುಗಡೆಯಲ್ಲೋ,ಸಂಸಾರದಲ್ಲೋ, ಸಾಧನೆಯಲ್ಲೋ, ಪ್ರೀತಿ-ವಿಶ್ವಾಸದಲ್ಲೋ, ದ್ವೇಷ-ನಿಷ್ಠುರತೆಯಲ್ಲೋ, ಇವೆಲ್ಲದರ ಹೊರತಾಗಿಯೂ ಕಾಡುವ ವಿಚಿತ್ರ ವ್ಯಾಕುಲತೆ, ಎಲ್ಲವನ್ನೂ ಮೀರಬೇಕೆನ್ನುವ ತುಡಿತದಲ್ಲೋ, ಇದಕ್ಕೆಲ್ಲ ಉತ್ತರ ಸಿಕ್ಕಿಲ್ಲ. ಇಂತಹ ತಾತ್ವಿಕ ಚಿಂತನೆ ಅನ್ನುವ ಲೌಕಿಕದ ಹೊರತಾದ ಭಿನ್ನ ಆಯಾಮದತ್ತ ಲೌಕಿಕದ ಸಂಗತಿಯ ಮೂಲಕವೇ ಹೊರಳುವ ಪ್ರಯತ್ನದಂತಿದೆ ಶ್ರೀಧರ ಬಳಗಾರರ ಮೃಗಶಿರ ಕಾದಂಬರಿ.

ಕೃ: ದಿ ಸ್ಕಾರ್ಲೆಟ್ ಪ್ಲೇಗ್ (ಕಾದಂಬರಿ) ಮೂಲ :  ಜ್ಯಾಕ್ ಲಂಡನ್ ಕನ್ನಡಕ್ಕೆ : ಚೆನ್ನಪ್ಪ ಕಟ್ಟಿ ಪ್ರ: ಪಲ್ಲವ ಪ್ರಕಾಶನ

1912ರಲ್ಲಿ ಅಮೆರಿಕಾದ ಕಾದಂಬರಿಕಾರ ಜಾಕ್ ಲಂಡನ್ ಬರೆದ  “ದಿ ಸ್ಕಾರ್ಲೆಟ್ ಪ್ಲೇಗ್” ಕಾದಂಬರಿ. ಅದನ್ನು ಶ್ರೀ ಚನ್ನಪ್ಪ ಕಟ್ಟಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾದಂಬರಿ Post apocalyptic ಮಾದರಿಯಿಂದ ಇಷ್ಟವಾಯ್ತು. ಸಾಹಿತ್ಯ ಭವಿಷ್ಯದ ಚಿಂತನೆಗಳಿಗೆ ಮುಖಾಮುಖಿಯಾಗುವುದು ಮುಖ್ಯ ಎಂಬಂತೆ ಸುಮಾರು ನೂರು ವರ್ಷಗಳ ಹಿಂದೆ ಬರೆದಿದ್ದು ಇಂದಿನ ಕೋರೋನಾ ಸಂದರ್ಭದಲ್ಲಿ ಪ್ರಸ್ತುತ ಎನಿಸಿದ್ದು ಮುಖ್ಯ.

ಕಾದಂಬರಿ ನಡೆಯುವುದು  2073ರ ಸಂದರ್ಭದಲ್ಲಿ. ಇದಕ್ಕೂ ಆರವತ್ತು ವರ್ಷಗಳ ಹಿಂದೆ 2013ರಲ್ಲಿ ಕ್ಯಾಲಿಫೋರ್ನಿಯಾವನ್ನು ತನ್ನ ಮುಷ್ಟಿಯಲ್ಲಿ ಬಂಧಿಸಿದ್ದ ‘ರೆಡ್ ಡೆತ್ ಅಥವಾ ಸ್ಕಾರ್ಲೆಟ್ ಪ್ಲೇಗ್’ ಎಂಬ ಸಾಂಕ್ರಾಮಿಕ ರೋಗದ ವಿಧ್ವಂಸಕ ಮುಖವನ್ನು ವಿವರಿಸುತ್ತದೆ. ಹಾಗೇ ಕಾದಂಬರಿ ಸಾಮಾಜಿಕ ನೆಲೆಯಲ್ಲಿ ಮನುಷ್ಯತ್ವದ ವಾಖ್ಯಾನವನ್ನು ವಿಭಿನ್ನ ರೀತಿಯಲ್ಲಿ ವಿಶ್ಲೇಷಿಸಿದೆ. ನಾಗರಿಕ ಸಮಾಜ ತನ್ನ ಅನುಕೂಲತೆಗೆ ಬೇಕಾದಂತೆ ಅನಕ್ಷರಸ್ಥ ಸಮೂಹವನ್ನು ಬೆಳೆಸುತ್ತದೆ. ಅವರಿಂದ ಉತ್ಪಾದಿತವಾದ ಆಹಾರವನ್ನು ಐಶಾರಾಮದಿಂದ ಕೂತು ತಿನ್ನುತ್ತದೆ. ಆದರೆ ಇಂತಹ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅನಾಗರಿಕ ಜಗತ್ತು ಹೇಗೆ ಕ್ರೂರವಾಗಿ ವರ್ತಿಸಿ ಲೂಟಿಕೋರರಂತೆ ದೋಚುತ್ತದೆ ಎಂಬುದನ್ನು ಕಾದಂಬರಿ ಪರಿಣಾಮಕಾರಿಯಾಗಿ ನಿರೂಪಿಸಿದೆ. ಹೀಗೆ ವರ್ತಿಸಲು ಕಾರಣಗಳು ಏನಿರಬಹುದು ಎಂಬುದನ್ನು ಓದುಗನ ವಿಶ್ಲೇಷಣೆಗೆ ಬಿಡುತ್ತಾರೆ. ಇಂತಹ ಅನಾಗರಿಕ ಜಗತ್ತನ್ನು ಸೃಷ್ಟಿಸಿದ್ದು ನಾಗರಿಕ ಜಗತ್ತೇ ಎಂಬ ವಿಚಿತ್ರ ಸತ್ಯದ ಹೊಳಹೂ ಇಲ್ಲಿದೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕಿ ಸುಮಾ ಸುಧಾಕಿರಣ

Published On - 4:05 pm, Thu, 31 December 20

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ