BMTC: ಟಿಕೆಟ್ ಪಡೆಯದೆ ಪ್ರಯಾಣ; ಬಿಎಂಟಿಸಿಯಿಂದ ಜುಲೈನಲ್ಲಿ 2,67,950 ರೂ. ದಂಡ ವಸೂಲು

| Updated By: ganapathi bhat

Updated on: Aug 25, 2021 | 3:20 PM

ಮಹಿಳೆಯರಿಗೆ ಮೀಸಲಿರಿಸಿದ ಸೀಟ್​ನಲ್ಲಿ ಪ್ರಯಾಣ ಹಿನ್ನೆಲೆ, ನಾಲ್ವರು ಪುರುಷ ಪ್ರಯಾಣಿಕರಿಂದ 400 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಈ ಬಗ್ಗೆ, ಬಿಎಂಟಿಸಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

BMTC: ಟಿಕೆಟ್ ಪಡೆಯದೆ ಪ್ರಯಾಣ; ಬಿಎಂಟಿಸಿಯಿಂದ ಜುಲೈನಲ್ಲಿ 2,67,950 ರೂ. ದಂಡ ವಸೂಲು
ಬಿಎಂಟಿಸಿ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಟಿಕೆಟ್ ಪಡೆಯದೆ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದವರಿಂದ ಬಿಎಂಟಿಸಿ ದಂಡ ವಸೂಲಿ ಮಾಡಿದೆ. ಜೊತೆಗೆ ಟಿಕೆಟ್ ನೀಡದ ನಿರ್ವಾಹಕರ ವಿರುದ್ಧ, ಮಹಿಳೆಯರಿಗೆ ಮೀಸಲಿರಿಸಿದ ಸೀಟ್​ನಲ್ಲಿ ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಹೀಗೆ ಬಿಎಂಟಿಸಿ ದಂಡ ವಸೂಲಿ ಮಾಡಿಕೊಂಡಿದೆ. ಆ ಮೂಲಕ, ಜುಲೈ ತಿಂಗಳಲ್ಲಿ ಬಿಎಂಟಿಸಿಯಿಂದ 2,67,950 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಒಟ್ಟು 17,799 ಟ್ರಿಪ್ ತಪಾಸಣೆ ನಡೆಸಿದ ಬಿಎಂಟಿಸಿ ತನಿಖಾ ತಂಡ ಇಷ್ಟು ಮೊತ್ತದ ದಂಡ ವಸೂಲಿ ಮಾಡಿಕೊಂಡಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದವರಿಂದ 2,67,950 ರೂಪಾಯಿ ದಂಡ ಪಡೆದುಕೊಂಡಿದೆ. ಟಿಕೆಟ್ ನೀಡದ ನಿರ್ವಾಹಕರ ವಿರುದ್ಧ 1188 ಕೇಸ್ ದಾಖಲು ಮಾಡಲಾಗಿದೆ. ಮಹಿಳೆಯರಿಗೆ ಮೀಸಲಿರಿಸಿದ ಸೀಟ್​ನಲ್ಲಿ ಪ್ರಯಾಣ ಹಿನ್ನೆಲೆ, ನಾಲ್ವರು ಪುರುಷ ಪ್ರಯಾಣಿಕರಿಂದ 400 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಈ ಬಗ್ಗೆ, ಬಿಎಂಟಿಸಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ; ಬಿಎಂಟಿಸಿ ಸೇವೆಯಿಂದ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರು ವಜಾ

ಬಸ್‌ ಹತ್ತುವ ಮುನ್ನ ಇರಲಿ ಎಚ್ಚರ; ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳ್ಳತನ