ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ನಿಂದ ಬಿಎಂಟಿಸಿ ಬಸ್​ ಕಾರ್ಯಾರಂಭ

|

Updated on: Jul 03, 2023 | 1:12 PM

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಸಂಚಾರ ಆರಂಭವಾಗಿದೆ.

ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ನಿಂದ ಬಿಎಂಟಿಸಿ ಬಸ್​ ಕಾರ್ಯಾರಂಭ
ಕೆಐಎನ ಟರ್ಮಿನಲ್​ 2 ನಿಂದ ಬಿಎಂಟಿಸಿ ಬಸ್​ ಸಂಚಾರ ಆರಂಭ
Follow us on

ಬೆಂಗಳೂರು: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಉದ್ಘಾಟಿಸಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 (T2) ನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ಸಂಚಾರ ಆರಂಭವಾಗಿದೆ. ಹೌದು ಟರ್ಮಿನಲ್ 2 ನಿಂದ ಬಿಎಂಟಿಸಿಯ ವಾಯು ವಜ್ರ ಬಸ್‌ಗಳು ಕಾರ್ಯಾರಂಭ ಮಾಡಿವೆ. ಸುರಕ್ಷಿತ, ಆರಾಮದಾಯಕ ಮತ್ತು ಕೈಗೆಟುಕುವ ಪ್ರಯಾಣಕ್ಕಾಗಿ ಬಿಎಂಟಿಸಿ ಸೇವೆಗಳನ್ನು ಆರಿಸಿಕೊಳ್ಳಿ. ನಿಮ್ಮ ಮನೆ ಬಾಗಿಲಿಗೆ ನಮ್ಮ ಸೇವೆಯನ್ನು ತರುತ್ತಿದ್ದೇವೆ ಎಂದು ಬಿಎಂಟಿಸಿ ಭಾನುವಾರ ಟ್ವಿಟ್ ಮಾಡಿದೆ.

ಇದನ್ನೂ ಓದಿ: Namma BMTC: ಕೊನೆಗೂ ಅಸ್ತಿತ್ವಕ್ಕೆ ಬಂತು ‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್

ಟರ್ಮಿನಲ್​ 2ನಿಂದ ಜನವರಿ 15, 2023 ರಿಂದ ದೇಶಿ ವಿಮಾನಗಳು ಕಾರ್ಯಾಚರಣೆ ಪ್ರಾರಂಭವಾಯಿತು. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಟರ್ಮಿನಲ್ 1ನಿಂದ ಟರ್ಮಿನಲ್​ 2ಗೆ ಸ್ಥಳಾಂತರಿಸಲಾಗುವುದು. ಇನ್ನು ಟರ್ಮಿನಲ್​ 1ನಿಂದ ದೇಶಿ ವಿಮಾನಗಳು ಕಾರ್ಯಾಚರಣೆ ಆರಂಭಿಸುತ್ತವೆ ಎಂದು ಟೈಮ್ಸ್ ಆಫ್ ಇಂಡಿಯಾ ಜೂನ್ 8 ರಂದು ವರದಿ ಮಾಡಿತ್ತು.

BMTC ಯ ಟ್ವೀಟ್​ಗೆ ತಿಕ್ರಿಯಿಸಿದ ನಿಹಾರ್ ಠಕ್ಕರ್ ಎಂಬುವರು ಎಲ್ಲ ಮಾರ್ಗಗಳ ಬಸ್​​​ಗಳು ಟರ್ಮಿನಲ್​​1 ಮತ್ತು ಟರ್ಮಿನಲ್​​2ನಲ್ಲಿ ನಿಲ್ಲುತ್ತವೆಯೇ ಅಥವಾ ಕೆಲವು ಮಾತ್ರವೇ ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಿ ಎಂದಿದ್ದಾರೆ. ಇನ್ನು ಅನೇಕರು ಬಸ್​ ಸೇವೆಗಳ ವೇಳಾಪಟ್ಟಿಯನ್ನು ಕೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Mon, 3 July 23