ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಲಿಕಾನ್ ಸಿಟಿ (Silicon City) ಜನರ ಪಾಲಿಗೆ ಜೀವನಾಡಿಯಾಗಿದೆ. ನಗರದ ಯಾವುದೇ ಭಾಗಗಕ್ಕು ಸಂಪರ್ಕ ಕಲ್ಪಿಸತ್ತಿದ್ದು, ಸಾಕಷ್ಟು ಅನುಕೂಲಕಾರಿಯಾಗಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಪರಿಸರ ಸ್ನೇಹಿ ಬಸ್ಗಳು (ಎಲೆಕ್ಟ್ರಿಕ್ ಬಸ್)ಗಳು ಸಂಚರಿಸುತ್ತಿವೆ. ಬಿಎಂಟಿಸಿಯ ಇವಿ ಬಸ್ಗಳು (Electric Bus) ಟೋಲ್ (Toll) ಹಣ ಕಟ್ಟಲು, ಫಾಸ್ಟ್ ಟ್ಯಾಗ್ನಲ್ಲಿ ಚಾರ್ಜ್ ಇಲ್ಲದೆ ಟೋಲ್ ಬಳಿಯೇ ನಿಂತ ಘಟನೆ ದೊಡ್ಡಬಳ್ಳಾಪುರದ ಬಳಿ ಇರುವ ಮಾರಸಂದ್ರ ಟೋಲ್ ಗೇಟ್ ಬಳಿ ನಡೆದಿದೆ. ಇದರಿಂದ ಪ್ರಯಾಣಿಕರು ಪರಾದಾಡುವಂತಾಯಿತು.
ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ
ಖಾಸಗಿಯವರ ಸಹಭಾಗಿತ್ವದಲ್ಲಿ ರಸ್ತೆಗೆ ಇಳಿದಿರುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ಗಳು (EV Bus) ನಿನ್ನೆ (ಮಾ.7) ರಂದು ಸಂಜೆ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರುತ್ತಿದ್ದವು. ಮಾರಸಂದ್ರ ಟೋಲ್ ಬಳಿ ಬರುತ್ತಿದ್ದಂತೆ ಬಸ್ ನಿಂತುಹೋಗಿವೆ. ಬಸ್ನ ಎಲ್ಲ ಭಾಗಗಳು ಮತ್ತು ಬ್ಯಾಟರಿ ಚಾರ್ಜ್ ಸರಿಯಾಗಯೇ ಇತ್ತು. ಆದರೆ ಟೋಲ್ಗೆ ಹಣ ತುಂಬಲು ಫಾಸ್ಟ್ ಟ್ಯಾಗ್ನಲ್ಲಿ ಹಣ ಖಾಲಿಯಾಗಿತ್ತು. ಈ ರೀತಿ ಒಂದೆರಡು ಬಸ್ಗಳಲ್ಲ ಸರಿ ಸುಮಾರು 15ಕ್ಕೂ ಹೆಚ್ಚು ಬಸ್ಗಳು ಟೋಲ್ ಪಾಸ್ ಆಗಲು ಫಾಸ್ಟ್ ಟ್ಯಾಗ್ನಲ್ಲಿ ಹಣವಿಲ್ಲದೆ ಟೋಲ್ ಬಳಿಯೇ ನಿಂತಿವೆ.
ಬಸ್ಗಳು ಹೀಗೆ ಟೋಲ್ ಬಳಿ ನಿಂತುಕೊಳ್ಳುತ್ತಿದ್ದಂತೆ, ಪ್ರಯಾಣಿಕರು ಕೆಲ ಕಾಲ ಕಾದು ವಿಧಿಯಿಲ್ಲದೆ ಬೇರೆ ಬಸ್ಗೆ ಹತ್ತಿಕೊಂಡು ತಮ್ಮ ಮುಂದಿನ ಪ್ರಯಾಣ ಬೆಳಸಿದ್ದಾರೆ. ಬಿಎಂಟಿಸಿಯ ಈ ಎಡವಟ್ಟಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ