ಬಿಎಂಟಿಸಿಯಿಂದ ಚಿಕ್ಕಬಳ್ಳಾಪುರ ರೌಂಡ್ಸ್: ಈಶಾ ಫೌಂಡೇಶನ್​ ಸೇರಿದಂತೆ 5 ಪ್ರವಾಸಿ ತಾಣಗಳ ಸುತ್ತಾಟ

| Updated By: ವಿವೇಕ ಬಿರಾದಾರ

Updated on: Jul 17, 2024 | 10:44 AM

ಚಿಕ್ಕಬಳ್ಳಾಪುರ ತಾಲೂಕಿನ ಐದು ಪ್ರವಾಸಿ ತಾಣಗಳನ್ನ ತೋರಿಸುವ ಒಂದು ದಿನದ ಪ್ರವಾಸ ಪ್ಯಾಕೇಜ್ ಶುರುವಾಗಿದ್ದು, ಇದು ಯಶಸ್ಸು ಕಂಡಿದ್ದರೆ. ಹಾಗಿದ್ದರೆ ಈ ಪ್ಯಾಕೇಜ್​ನ ವಿಶೇಷತೆಗಳೇನು? ಪ್ರವಾಸದ ದರ ಎಷ್ಟು ಎಂಬ ಎಲ್ಲ ಮಾಹಿತಿ ಇಲ್ಲಿದೆ.

ಬಿಎಂಟಿಸಿಯಿಂದ ಚಿಕ್ಕಬಳ್ಳಾಪುರ ರೌಂಡ್ಸ್: ಈಶಾ ಫೌಂಡೇಶನ್​ ಸೇರಿದಂತೆ 5 ಪ್ರವಾಸಿ ತಾಣಗಳ ಸುತ್ತಾಟ
ಬಿಎಂಟಿಸಿ
Follow us on

ಚಿಕ್ಕಬಳ್ಳಾಪುರ, ಜುಲೈ 17: ಕೇವಲ 500 ರೂಪಾಯಿಗಳಲ್ಲಿ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಐದು ಪ್ರವಾಸಿ ತಾಣಗಳನ್ನ ತೋರಿಸುವ ಬೆಂಗಳೂರು ಮಹಾನಗರ ಸಾರಿಗೆ (BMTC)ಯ ಒಂದು ದಿನದ ಪ್ರವಾಸ ಪ್ಯಾಕೇಜ್ (One Day Package) ಯಶಸ್ಸು ಕಂಡಿದೆ. ಮೊದಲಿಗೆ ಎರಡು ಬಸ್​ಗಳಿಂದ ಆರಂಭವಾಗಿದ್ದ ಪ್ಯಾಕೇಜ್​ ಈಗ 30 ಬಸ್​ಗಳ ವರೆಗೆ ಬಂದು ನಿಂತಿದೆ.

ಬಿಎಂಟಿಸಿಯ ಹಾವಾನಿಯಂತ್ರಿತ ಓಲ್ವೋ ಬಸ್​ಗಳಲ್ಲಿ ಒಂದು ದಿನದ ಪ್ರವಾಸಕ್ಕೆ ಕೇವಲ 500 ರೂಪಾಯಿ ನಿಗದಿಗೊಳಿಸಿ ಒಂದು ದಿನದ ಪ್ಯಾಕೇಜ್ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡುವ ಬಸ್​ ಚಿಕ್ಕಬಳ್ಳಾಪುರ ತಾಲೂಕಿನ ಪ್ರವಾಸಿ ತಾಣಗಳಾದ ಕಣಿವೆಬಸವಣ್ಣ, ಬೋಗನಂದೀಶ್ವರ ದೇವಾಲಯ, ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ, ರಂಗಸ್ಥಳ ಸೇರಿದಂತೆ ಈಶಾ ಫೌಂಡೇಶನ್​ವರೆಗೆ ಹೋಗುತ್ತದೆ. ಮಧ್ಯಾಹ್ನ 12 ರಿಂದ ರಾತ್ರಿ 9:30ರ ವರೆಗೆ ಪ್ರವಾಸ ಇರುತ್ತೆ.

ಮೊದಲು ಎರಡು ಬಸ್ ಗಳಿಂದ ಆರಂಭವಾದ ಟೂರ್ ಪ್ಯಾಕೇಜ್ ಈಗ 30 ಬಸ್​ಗಳ ವರೆಗೆ ಬಂದು ನಿಂತಿದೆ. ವೀಕೆಂಡ್ ಸೇರಿದಂತೆ ರಜಾ ದಿನಗಳಲ್ಲಿ, ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ.

ರಾಜಧಾನಿ ಬೆಂಗಳೂರಿಂದ ಕಾರಿನಲ್ಲಿ ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಹೊರಟರೆ, ಹೆದ್ದಾರಿ ಟೊಲ್​ಗೆಂದೇ ಸುಮಾರು 500 ರೂಪಾಯಿ ಕಟ್ಟಬೇಕು. ಹಾಗೂ ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕು. ಆದರೆ ಬಿಎಂಟಿಸಿ ಹಾವಾನಿಯಂತ್ರಿತ ಓಲ್ವೋ ಬಸ್​ಗಳಲ್ಲಿ ಹಾಯಾಗಿ ಕೇವಲ 500 ರೂಪಾಯಿಯಲ್ಲಿ ಒಂದು ದಿನ ಪ್ರವಾಸ ಮಾಡಬಹುದು ಎಂದು ಪ್ರವಾಸಿ ಚಿನ್ಮಯಿ ಬಿಎಂಟಿಸಿ ಪ್ಯಾಕೆಜ್​ಗೆ ಪ್ರಶಂಸೆ ವ್ಯಕ್ತಪಡಿಸಿದರು.

ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ವಿಸ್ತರಣೆಯಾದಂತೆ, ಬಿಎಂಟಿಸಿ ಬಸ್​ಗೆ ಬೇಡಿಕೆ ಕಡಿಮೆಯಾಗುತ್ತಿದೆ, ಇದರಿಂದ ಬಿಎಂಟಿಸಿ ಉಳಿವಿಗಾಗಿ ದಿನನಿತ್ಯದ ಕಾರ್ಯಾಚರಣೆ ಜೊತೆಗೆ ಪ್ರವಾಸದ ಪ್ಯಾಕೇಜ್ ಮಾಡಿರೋದು ಲಾಭದಾಯಕವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ