BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸಿ ಹಣ ಪೀಕುತ್ತಿದ್ದ ನಾಲ್ವರು ಕಂಡಕ್ಟರ್ ಸಸ್ಪೆಂಡ್

'ಶಕ್ತಿ ಯೋಜನೆ' ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ರೆ,ಇತ್ತ ಬಿಎಂಟಿಸಿಯ ಕೆಲ ಕಿಲಾಡಿ ಕಂಡಕ್ಟರ್ ಗಳು ಮಾತ್ರ ಅನ್ನ ತಿಂದ ಮನೆಗೆ ಖನ್ನ ಹಾಕಿ ಕೆಲಸ ಕಳೆದುಕೊಂಡಿದ್ದಾರೆ. ಟಿವಿ9 ಸುದ್ದಿ ಪ್ರಸಾರ ಮಾಡುತ್ತಿದ್ದಂತೆಯೇ ಬಿಎಂಟಿಸಿ ಸಂಸ್ಥೆ ನಡೆಸಿದ ತನಿಖೆಯಲ್ಲಿ ಕಂಡಕ್ಟರ್​ಗಳ ಕಳ್ಳಾಟ ಬಟಾಬಯಲಾಗಿದೆ.

BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸಿ ಹಣ ಪೀಕುತ್ತಿದ್ದ ನಾಲ್ವರು ಕಂಡಕ್ಟರ್ ಸಸ್ಪೆಂಡ್
ಪ್ರಾತಿನಿಧಿಕ ಚಿತ್ರ
Edited By:

Updated on: Jan 20, 2026 | 10:43 PM

ಬೆಂಗಳೂರು, (ಜನವರಿ 20): ಚಿಲ್ಲರೆ ಸಮಸ್ಯೆ ತಪ್ಪಿಸಲು ಪ್ರಯಾಣಿರಿಗೆ ಅನುಕೂಲವಾಗಲಿ ಎಂದು ಬಿಎಂಟಿಸಿ ಕೂಡ ಬಸ್​ಗಳಲ್ಲಿ (BMTC Bus)  ಕ್ಯೂರ್ ಕೋಡ್ ಅಳವಡಿಸಿದೆ. ಆದ್ರೆ, ಇದು ಪ್ರಯಾಣಿಕರಿಗೆ ಉಪಯೋಗವಾದ್ರೆ, ಕಂಡಕ್ಟರ್​ಗಳು ಮಾತ್ರ ದುರುಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹೌದು.. ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಬಿಎಂಟಿಸಿ ನಿಗಮ ಯುಪಿಐ ಸ್ಕ್ಯಾನರ್ ಗಳನ್ನು ಹಾಕಿದೆ. ಆದರೆ ಕೆಲ ಕಿಲಾಡಿ ಕಂಡಕ್ಟರ್ ಗಳು ಬಿಎಂಟಿಸಿ ಬಸ್ ನಲ್ಲಿರುವ ಯುಪಿಐ ಸ್ಕ್ಯಾನರ್ ಗಳನ್ನು ಕಿತ್ತು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್ ಗಳನ್ನು ಹಾಕಿ ತಮ್ಮ ಬ್ಯಾಂಕ್ ಅಕೌಂಟ್ ಗೆ ಲಕ್ಷಾಂತರ ರುಪಾಯಿ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಟಿವಿ9 ವರದಿ ಬಿತ್ತರಿಸಿದ ಬೆನ್ನಲ್ಲೇ ಬಿಎಂಟಿಸಿ ನಿಗಮ ನಡೆಸಿದ ತನಿಖೆಯಲ್ಲಿ ಕಂಡಕ್ಟರ್ ಗಳ ಕಳ್ಳಾಟ ಬಯಲಿಗೆ ಬಂದಿದ್ದು, ಈ ಸಂಬಂಧ ನಾಲ್ವರು ಕಂಡಕ್ಟರ್​​ಗಳನ್ನು ಸಸ್ಪೆಂಡ್ ಮಾಡಲಾಗಿದೆ. ಮಂಚೇಗೌಡ, ಸುಪ್ರೀತ, ಅಶ್ವಕ್ ಖಾನ್, ಸುರೇಶ್ ಅಮಾನತುಗೊಂಡ ನಿರ್ವಾಹಕರು.

ಮಂಚೇಗೌಡ, ಸುಪ್ರೀತ, ಅಶ್ವಕ್ ಖಾನ್, ಸುರೇಶ್ ಎನ್ನುವರು ಕನ್ನಡ ಬಾರದವರಿಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡಿ ತಮ್ಮ ಮೊಬೈಲ್ ಯುಪಿಐ ಸ್ಕ್ಯಾನರ್ ನೀಡಿ ಹಣ ಪೀಕಿದ್ದಾರೆ. ಶಕ್ತಿ ಯೋಜನೆಯ ಫ್ರೀ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಫ್ರೀ ಟಿಕೆಟ್ ಎಂದು ಪ್ರಿಂಟ್ ಮಾಡಲಾಗಿದೆ. ಇಂಗ್ಲಿಷ್ ನಲ್ಲಿ ಫ್ರೀ ಟಿಕೆಟ್ ಎಂದು ಪ್ರಿಂಟ್ ಮಾಡಿಲ್ಲ, ಇದನ್ನು ಬಂಡವಾಳ ಮಾಡಿಕೊಂಡು ಕನ್ನಡ ಬಾರದ ನಾರ್ಥ್ ಇಂಡಿಯನ್ಸ್, ಸೌತ್ ಇಂಡಿಯನ್ಸ್ ಗೆ ಶಕ್ತಿ ಯೋಜನೆಯ ಫ್ರೀ ಟಿಕೆಟ್ ನೀಡಿ ಹಣ ತಮ್ಮ ವೈಯಕ್ತಿಕ ಅಕೌಂಟ್​​ಗೆ ಹಾಕಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ಅಕೌಂಟ್ ಪರಿಶೀಲನೆ ಮಾಡಿದಾಗ  ನಾಲ್ವರು ಕಂಡಕ್ಟರ್​ಗಳು ಸೇರಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಹಣ  ಪ್ರಯಾಣಿಕರಿಂದ ಹಾಕಿಸಿಕೊಂಡಿರುವುದು ತನಿಖೆಯಿಂದ ಬಯಲಿಗೆ ಬಂದಿದೆ.

ಇದನ್ನೂ ಓದಿ: BMTC ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಂಡಕ್ಟರ್​ಗಳು: ತನಿಖೆ ವೇಳೆ ಕಳ್ಳಾಟ ಬಯಲು

ಯಾಱರ ಖಾತೆಗೆ ಎಷ್ಟೆಷ್ಟು ಹಣ

ಡಿಪೋ 3ರ ಕಂಡಕ್ಟರ್ ಮಂಚೇಗೌಡ ಖಾತೆಗೆ 51 ಸಾವಿರ ಜಮಾ ಆದ್ರೆ, ಡಿಪೋ 11ರ ಕಂಡಕ್ಟರ್ ಸುಪ್ರೀತ ಖಾತೆಗೆ 30 ಸಾವಿರ ರೂ, ಡಿಪೋ 14ರ ಕಂಡಕ್ಟರ್ ಅಶ್ವಕ್ ಖಾನ್ ಖಾತೆಗೆ 3 ಸಾವಿರ ಹಾಗೂ ಡಿಪೋ 51ರ ಕಂಡಕ್ಟರ್ ಸುರೇಶ್ ಅಕೌಂಟ್​​ಗೆ 45 ಸಾವಿರ ರೂ ಜಮೆ ಆಗಿದೆ.

ತಮ್ಮ ಖಾತೆಗೆ ಹೇಗೆ ಹಣ ಹಾಕಿಸಿಕೊಳ್ಳುತ್ತಿದ್ರು?

ಇನ್ನೂ ಈ ಕಿಲಾಡಿ ಕಂಡಕ್ಟರ್ ಗಳು ಡಿಪೋದಿಂದ ಬಸ್ ಗಳು ಹೊರಗೆ ಬರ್ತಿದ್ದಂತೆ, ಬಸ್ ನಲ್ಲಿರುವ ಬಿಎಂಟಿಸಿ ನಿಗಮದ ಯುಪಿಐ ಸ್ಕ್ಯಾನರ್ ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರಂತೆ.ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕಂಡಕ್ಟರ್ ಗಳ ಬಳಿ ಕೇಳಿದಾಗ, ತಮ್ಮ ಮೊಬೈಲ್ ನಲ್ಲಿರುವ ಸ್ವಂತ ಅಕೌಂಟಿನ ಸ್ಕ್ಯಾನರ್ ಗಳನ್ನು ನೀಡಿ ಪ್ರಯಾಣಿಕರಿಂದ ತಮ್ಮ ಸ್ವಂತ ಅಕೌಂಟ್ ಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯುರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್ ಗಳು ಸಿಕ್ಕಿಬಿದ್ದಿದ್ದರು. ಇನ್ನೂ ಟಿವಿ9 ಈ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಬಿಎಂಟಿಸಿ ಎಂಡಿ, ನಾಲ್ಕು ಜನ ಕಂಡಕ್ಟರ್ ಗಳನ್ನು ಮಾಡಿ ಆದೇಶ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ