ಮಹಿಳೆಯರ ಒಳ ಉಡುಪು ಕದ್ದು ವಿಕೃತಾನಂದ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಸೈಕೋ ಯುವಕ
ಕಳ್ಳರ ಕೆಲಸವೇ ಕಳ್ಳತನ ಮಾಡುವುದು. ಹಣ ಬರುತ್ತೆ ಅಂದರೆ ಏನು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಚಿನ್ನ-ಬೆಳ್ಳಿ, ಹಣ, ಬೈಕ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ಗ್ಯಾಂಗ್ ಮಾಡುವುದನ್ನ ನೋಡಿದ್ದೇವೆ. ಅಲ್ಲದೇ ಚಪ್ಪಲಿ ಕಳ್ಳರು ಸಹ ಇದ್ದಾರೆ. ಆದ್ರೆ, ಇತ್ತೀಚೆಗೆ ಮಹಿಳೆಯರ ಒಳ ಉಡುಪು ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ.

ಬೆಂಗಳೂರು, (ಜನವರಿ 20): ಇತ್ತೀಚೆಗೆ ಕರ್ನಾಟಕದಲ್ಲಿ (Karnataka) ಬ್ಯಾಂಕ್, ಎಟಿಎಂ ದರೋಡೆ ಪ್ರಕರಣಗಳು ನಡೆದಿವೆ. ಇದರ ಜೊತೆಗೆ ಮಹಿಳೆಯರ ಒಳ ಉಡುಪು ಕಳ್ಳತನ ಪ್ರಕರಣಗಳು ಸಹ ಬೆಳಕಿಗೆ ಬರುತ್ತಿವೆ. ಕಳೆದ ಸೆಪ್ಟೆಂಬರ್ ನಲ್ಲಿ ಹುಬ್ಬಳ್ಳಿಯಲ್ಲಿ (Hubballi) ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಸೈಕೋ ಕಳ್ಳ ಸಿಕ್ಕಿಬಿದ್ದಿದ್ದ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲೂ ಸಹ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಹೌದು… ಮಹಿಳೆಯರು ಮತ್ತು ಯುವತಿಯರ ಒಳ ಉಡುಪುಗಳನ್ನು ಕದ್ದು ವಿಲಕ್ಷಣವಾಗಿ ವರ್ತಿಸುತ್ತಿದ್ದ ‘ಸೈಕೋ’ ಕಳ್ಳ ಇದೀಗ ಬೆಂಗಳೂರಿನ (Bengaluru) ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೇರಳ ಮೂಲದ ಅಮಲ್(23) ಬಂಧಿತ ಆರೋಪಿ.
ಕೇರಳ ಮೂಲದ 23 ವರ್ಷದ ಅಮಲ್, ಮನೆ ಮಹಡಿ, ಹಾಗೂ ಆಚೆ ಒಣಹಾಕಿರುವ ಮಹಿಳೆಯರ ಒಳಉಡುಪುಗಳನ್ನು ಕದಿಯುತ್ತಿದ್ದ. ಹೊರಗಡೆ ಸುತ್ತಾಡಿ ಮನೆಗಳನ್ನು ದೂರದಿಂದಲೇ ಪರಿಶೀಲನೆ ಮಾಡುತ್ತಿದ್ದ. ನಂತರ ಯಾರು ಇಲ್ಲದ ವೇಳೆ ನುಗ್ಗಿ ಒಳ ಉಡುಪುಗಳನ್ನು ಕದ್ದೊಯ್ಯುತ್ತಿದ್ದ. ಬಳಿಕ ಅವುಗಳನ್ನು ತಾನು ಧರಿಸಿಕೊಂಡು ಫೋಟೋ ತೆಗೆದುಕೊಂಡು ವಿಕೃತ ಆನಂದ ಪಡುತ್ತಿದ್ದ.
ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕದ್ದು ವಿಕೃತಾನಂದ: ಹುಬ್ಬಳ್ಳಿಯಲ್ಲಿ ಸೈಕೋ ವ್ಯಕ್ತಿ ಅಂದರ್
ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ವಿಕೃತ ಕಾಮಿ ಅಮಲ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಕದ್ದ ಒಳ ಉಡುಪುಗಳನ್ನು ಧರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಮೊಬೈಲ್ನಲ್ಲಿ ಪತ್ತೆಯಾಗಿವೆ. ಹಾಗೇ ಅಮಲ್ ವಾಸವಿದ್ದ ಮನೆಯಲ್ಲಿಯೂ ಸಹ ಮಹಿಳೆಯರ ಒಳ ಉಡುಪುಗಳನ್ನ ಸಂಗ್ರಹಿಸಿ ಇಟ್ಟುಕೊಂಡಿರುವುದು ಕಂಡುಬಂದಿದೆ. ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:57 pm, Tue, 20 January 26