BMTC Ticket Fare: ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಳ; ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್
BMTC Bus Ticket Rate; ಇಂಧನ ಬೆಲೆಯ ನಿರಂತರ ಏರಿಕೆ ಹಿನ್ನಲೆ ಇದೀಗ ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಿದೆ.
ಬೆಂಗಳೂರು: ಹೆಚ್ಚುತ್ತಿರುವ ಇಂಧನ ಬೆಲೆಯ ಹಿನ್ನಲೆ, ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ವನ್ನ ಹೆಚ್ಚಿಸುವ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ಶಾಕ್ ನೀಡಿದೆ. ಹೊಸ ವರ್ಷದ ಮೊದಲ ವಾರದಿಂದಲೇ ಬಿಎಂಟಿಸಿ ಪ್ರಯಾಣಿಕರಿಗೆ ನಿರಾಸೆ ಮೂಡಿಸಿದೆ. ಬಿಎಂಟಿಸಿ ಸಂಸ್ಥೆಯ ಆರ್ಥಿಕ ನಷ್ಟ ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜೊತೆಗೆ ಮಾಸಿಕ ಪಾಸ್ ತೆಗೆದುಕೊಂಡವರಿಗೆ ಮತ್ತೊಂದು ಶಾಕ್ ನೀಡಿದ್ದು, ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರ ಪಾಸ್ ಬಳಸಿ ಉಚಿತ ಪ್ರಯಾಣ ಮಾಡುವಂತಿಲ್ಲ.
ಮೊದಲು ಬಸ್ ಪಾಸ್ ದರ ಎಷ್ಟಿತ್ತು ಈಗ ಎಷ್ಟಿದೆ?
ವಜ್ರ ( ವೋಲ್ವೋ) ಪ್ರಸ್ತುತ ಮಾಸಿಕ ದರ 1428+ ಜಿಎಸ್ಟಿ 72 ಒಟ್ಟು 1500 ರೂಪಾಯಿಗಳಿತ್ತು, ಸದ್ಯ ಪರಿಷ್ಕೃತ ವಜ್ರ ಮಾಸಿಕ ಪಾಸಿನ ದರ 1714.29 ಪೈಸೆ + ಜಿಎಸ್ಟಿ 85.71= ಒಟ್ಟು 1800 ರೂಪಾಯಿಯಾಗಿದೆ.
ವಜ್ರ ವೋಲ್ವೋ ಪ್ರಸ್ತುತ ದೈನಿಕ ಪಾಸಿನ ದರ 95+ ಜಿಎಸ್ಟಿ 5 = 100 ರೂಪಾಯಿ ಇತ್ತು, ಪರಿಷ್ಕೃತ ದರ 114.29+ 5.21= 120 ರೂಪಾಯಿಗೆ ಹೆಚ್ಚಳವಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:19 am, Fri, 30 December 22