ಬಿಎಂಟಿಸಿ
ಬೆಂಗಳೂರು, ಜನವರಿ 8: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ಗಳು ಇನ್ನು ಮುಂದೆ ಮದುವೆ ಸಮಾರಂಭ, ಪ್ರವಾಸ ಇತ್ಯಾದಿಗಳ ಬಾಡಿಗೆಗೂ ದೊರೆಯಲಿವೆ. ಸಾಂದರ್ಭಿಕ ಒಪ್ಪಂದದ ಆಧಾರದ ಮೇಲೆ ವಿವಾಹ ಸಮಾರಂಭ, ಪ್ರವಾಸ ಇತ್ಯಾದಿಗಳಿಗೆ ಬಸ್ ಒದಗಿಸಲು ಸಂಸ್ಥೆ ಮುಂದಾಗಿದೆ. ವಿವಿಧ ಮಾದರಿಯ ಬಸ್ಗಳ ವಿವಿಧ ರೀತಿಯ ಬಾಡಿಗೆ ನಿಗದಿಪಡಿಸಿ ಬಿಎಂಟಿಸಿ ವಿವರ ಬಿಡುಗಡೆ ಮಾಡಿದೆ.
- ಬಿಬಿಎಂಟಿಸಿ ಪುಷ್ಪಕ್ (47 ಆಸನ) ಬಸ್ಸಿಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 55 ರೂಪಾಯಿ ನಿಗದಿ ಮಾಡಲಾಗಿದ್ದು, ಒಟ್ಟು 8,250 ದರ ನಿಗದಿ ಮಾಡಲಾಗಿದೆ.
- 12 ಗಂಟೆ ಅವಧಿಗೆ ಕಿಲೋ ಮೀಟರ್ಗೆ 50 ರೂಪಾಯಿಯಂತೆ ಬಾಡಿಗೆ ದರ 10 ಸಾವಿರ ನಿಗದಿ ಮಾಡಲಾಗಿದೆ.
- 24 ಗಂಟೆ ಅವಧಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 45 ರೂಪಾಯಿಯಂತೆ 11,250 ರೂ. ಬಾಡಿಗೆ ನಿಗದಿಯಾಗಿದೆ.
- 24 ಗಂಟೆಗೆ ನಗರದ ಹೊರಗಡೆ ಪ್ರಯಾಣಕ್ಕೆ ಕಿ.ಮೀಗೆ 45 ರೂಪಾಯಿಯಂತೆ 11,250 ರೂ. ಬಾಡಿಗೆ ನಿಗದಿಯಾಗಿದೆ.
- ಸಾಮಾನ್ಯ ಬಸ್ (44 ಆಸನ) ಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ಗೆ 50 ರೂಪಾಯಿಯಂತೆ ಒಟ್ಟು 7,500 ರೂ. ದರ ನಿಗದಿ ಮಾಡಲಾಗಿದೆ.
- 12 ಗಂಟೆ ಅವಧಿಗೆ ಕಿಲೋ ಮೀಟರ್ಗೆ 48 ರೂಪಾಯಿಯಂತೆ 9600 ರೂ. ಬಾಡಿಗೆ ದರ ನಿಗದಿಪಡಿಸಲಾಗಿದೆ.
- 24 ಗಂಟೆ ಅವಧಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 44 ರೂಪಾಯಿಯಂತೆ 11,000 ರೂ. ಬಾಡಿಗೆ ನಿಗದಿಪಡಿಸಲಾಗಿದೆ.
- 24 ಗಂಟೆಗೆ ನಗರದ ಹೊರಗೆ ಕಿ.ಮೀಗೆ 45 ರೂಪಾಯಿಯಂತೆ 11,250 ರೂ. ಬಾಡಿಗೆ ನಿಗದಿಪಡಿಸಲಾಗಿದೆ.
- ಬಿಎಂಟಿಸಿ ಮಿಡಿ (31 ಆಸನ) ಬಸ್ಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 47 ರೂಪಾಯಿಯಂತೆ ಒಟ್ಟು 7,050 ರೂ. ದರ ನಿಗದಿ ಮಾಡಲಾಗಿದೆ.
- 12 ಗಂಟೆ ಅವಧಿಗೆ ಕಿಲೋ ಮೀಟರ್ ಗೆ 45 ರೂಪಾಯಿಯಂತೆ 9000 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.
- 24 ಗಂಟೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 42 ರೂಪಾಯಿಯಂತೆ 10,500 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.
- 24 ಗಂಟೆಗೆ ನಗರದ ಹೊರಗೆ ಕಿ.ಮೀಗೆ 42 ರೂಪಾಯಿಯಂತೆ 12,600 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.
- ಬಿಎಂಟಿಸಿ ಬಿಎಸ್ 6 (41 ಆಸನ) ಬಸ್ಗೆ 8 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 60 ರೂಪಾಯಿ ನಿಗದಿ ಮಾಡಲಾಗಿದ್ದು, ಒಟ್ಟು 9000 ರೂ. ದರ ನಿಗದಿಪಡಿಸಲಾಗಿದೆ.
- 12 ಗಂಟೆ ಅವಧಿಗೆ ಕಿಲೋ ಮೀಟರ್ ಗೆ 55 ರೂಪಾಯಿಯಂತೆ 11,000 ರೂ, 24 ಗಂಟೆ ಅವಧಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಿ.ಮೀಗೆ 50 ರೂಪಾಯಿಯಂತೆ ಬಾಡಿಗೆ 11,500 ರೂ, 24 ಗಂಟೆಗೆ ನಗರದ ಹೊರಗೆ ಕಿ.ಮೀಗೆ 5 ರೂಪಾಯಿಯಂತೆ 15,000 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.
- 40 ಆಸನದ ಎಲೆಕ್ಟ್ರಿಕ್ ಬಸ್ಗೆ 24 ಗಂಟೆ ಅವಧಿಗೆ 15,000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ. 33 ಆಸನದ ಬಸ್ಗೆ 24 ಗಂಟೆ ಅವಧಿಗೆ 13,000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ.
- ಎಸಿ ಬಸ್ಗಳಿಗೆ 12 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 80 ರೂಪಾಯಿಯಂತೆ 14,000 ರೂ, 24 ಗಂಟೆ ಅವಧಿಗೆ ಪ್ರತಿ ಕಿಲೋ ಮೀಟರ್ ಗೆ 80 ರೂಪಾಯಿಯಂತೆ 20 ಸಾವಿರ ಬಾಡಿಗೆ ನಿಗದಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ