ಬೆಂಗಳೂರು: ರಾಜಧಾನಿಯಲ್ಲಿ ಎಮ್ಡಿ 15 ಹೆಸರಿನ ಬಿಎಂಟಿಸಿಯ (BMTC) 20 ಬಸ್ಗಳು ಪ್ರಾಯೋಗಿಕ ಸಂಚಾರ ನಡೆಸಿವೆ. ಶೇ 15 ಪ್ರತಿಶತದಷ್ಟು ಮೆಥನಾಲ್ನ್ನು ಡೀಸೆಲ್ನಲ್ಲಿ ಮಿಶ್ರಣ (Methanol-Diesel MD 15) ಮಾಡಲಾಗಿರುವ ಬಸ್ಗಳಿಗೆ ಇತ್ತೀಚಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಚಾಲನೆ ನೀಡಿದ್ದರು. ನಗರದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲು ಮೂರು ತಿಂಗಳ ಅವಧಿಗೆ ಬಿಎಂಟಿಸಿಯ ಕೆಲವು ಬಸ್‌ಗಳನ್ನು ಅಶೋಕ್ ಲೇಲ್ಯಾಂಡ್‌ಗೆ ನೀಡಲಾಗಿದೆ ಎಂದು ಹೇಳಿದರು.
ಮೆಥನಾಲ್ ಬಳಕೆಗೆ ಉತ್ತೇಜನ ನೀಡುವುದರಿಂದ 16 ಲಕ್ಷ ಕೋಟಿ ರೂಪಾಯಿ ವೆಚ್ಚದ ಇಂಧನ ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಅಲ್ಲದೆ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ. ಪ್ರತಿ ಲೀಟರ್ ಮೆಥೆನಾಲ್‌ಗೆ 25 ರಿಂದ 26 ರೂ., ಡೀಸೆಲ್‌ಗೆ 110 ರೂ.ಗಳಿರುವುದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ತಿಳಿದರು.
ಇದನ್ನೂ ಓದಿ: ಮಾ. 21ರಿಂದ ಸಾರಿಗೆ ನೌಕರರ ಮುಷ್ಕರ, ರಸ್ತೆಗೆ ಇಳಿಯಲ್ಲ KSRTC ಬಸ್ಗಳು
What are MD15 buses recently inaugurated in Bengaluru?
These are methanol-diesel blended buses. BMTC will now run 20 buses on 15% methanol-blended fuel.
India’s first 100% methanol-run truck (M100) also launched by Ashok Leyland.
India’s methanol economy is growing. pic.twitter.com/19KxOyDKV1
— Anshul Saxena (@AskAnshul) March 13, 2023
“MD15 ಅನ್ನು ಯಾವುದೇ ಮಾರ್ಪಾಡು ಇಲ್ಲದೆ ಡೀಸೆಲ್ ವಾಹನಗಳು ಅಳವಡಿಸಿಕೊಳ್ಳಬಹುದು ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಬಳಸಬಹುದು. ಭಾರತದಲ್ಲಿ ಸದ್ಯ 34 ಕೋಟಿ ವಾಹನಗಳಿದ್ದು, ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಶೇಕಡಾ 12 ರಷ್ಟು ಇದೆ. ಇದಕ್ಕೆ ಎಲ್ಲ ರೀತಿಯಲ್ಲೂ ಮೆಥನಾಲ್ ಬಳಕೆ ಅವಶ್ಯವಾಗಿದೆ. ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಬಳಸಿ ಮೆಥೋನಾಲ್, ಅಮೋನಿಯಂ ನೈಟ್ರೇಟ್, ಯೂರಿಯಾವನ್ನು ಉತ್ಪಾದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಂಗಾಲದ ಹೊರಸೂಸುವಿಕೆಯು ದೊಡ್ಡ ಸಮಸ್ಯೆಯಾದ ಹಿನ್ನೆಲೆ ಭಾರತವು ಮೆಥನಾಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಮೆಥನಾಲ್ ಎಥೆನಾಲ್ ತಂತ್ರಜ್ಞಾನವು ಸ್ಥಳೀಯವಾಗಿದ್ದು. ಇದರ ಬಳಕೆಯ ವಾಹನಗಳನ್ನು ವಿದೇಶಕ್ಕೆ ರಫ್ತು ಮಾಡಲಿದ್ದೇವೆ ಈ ಎಲ್ಲ ವಿಚಾರದಲ್ಲಿ ನೀತಿ ಆಯೋಗಗಳ ಕೊಡುಗೆ ಮತ್ತು ಸಮರ್ಪಣೆ ಅಪಾರ ಎಂದರು.
ವಿಶ್ವದಲ್ಲಿ ಅನಿಲ ಸೂಸುವಿಕೆಯಲ್ಲಿ ಭಾರತದ ಪಾಲು ಶೇ 7 ರಷ್ಟಿದೆ ಅದರಲ್ಲಿ 14 ರಷ್ಟು ಸಾರಿಗೆಯ ಪಾಲಿದೆ. ಮಾಲಿನ್ಯದ ಪರಿಣಾಮವು ತೀವ್ರವಾಗಿದೆ. ಆದರೆ ಮೆಥನಾಲ್ ಶೇ 28 ರಷ್ಟು ಕಡಿಮೆ ಮಾಲಿನ್ಯಕಾರಕವಾಗಿದೆ. ಎಂ.ಡಿ 15 ಭಾರತವನ್ನು ಹೊಸ ದಿಕ್ಕಿನೆಡೆಗೆ ಮುನ್ನೆಡಸಲಿದೆ. ಒಟ್ಟು ದೇಶದ 15 ಸಂಸ್ಥೆಗಳು ಈ ತಂತ್ರಜ್ಞಾನದ ಬಳಕೆಗೆ ಪ್ರಮುಖ ಪಾತ್ರ ವಹಿಸಿವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:10 am, Wed, 15 March 23