ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ 6 ಕಡೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ. ನಗರದ 6 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದು ಇ-ಮೇಲ್ ಆಧರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅನಾಮಿಕ ಹೆಸರಿನಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ನಗರದ ಸೂಳಕುಂಟೆ ಬಳಿಯ ಡೆಲ್ಲಿ ಪಬ್ಲಿಕ್ ಶಾಲೆ ಮೇಲೂ ಬಂಬ್ ಬೆದರಿಕೆ ಇದ್ದು ಶಾಲೆಯ ಸುತ್ತ ಪೊಲೀಸರು ಜಮಾಯಿಸಿ ತನಿಖೆ ನಡೆಸುತ್ತಿದ್ದಾರೆ. ಶಾಲೆಯಲ್ಲಿದ್ದ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಬಾಂಬ್ ನಿಗ್ರಹ ದಳ ಶೋಧ ನಡೆಸುತ್ತಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ರಸ್ತೆಯಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಪವರ್ಫುಲ್ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಇ-ಮೇಲ್ ಬಂದಿದೆ. ಹೀಗಾಗಿ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಯುತ್ತಿದೆ. ಮೆಟಲ್ ಡಿಟೆಕ್ಟರ್ ತಂಡದಿಂದಲೂ ಶಾಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ. ಮಲಿಂದ ಬೊರೊನ್ ಇ-ಮೇಲ್ ಅಕೌಂಟ್ನಿಂದ ಮೇಲ್ ಬಂದಿದ್ದು ‘ದಿಸ್ ಇಸ್ ನಾಟ್ ಜೋಕ್’ ಎಂದು ವಾರ್ನಿಂಗ್ ಮಾಡಿದ್ದಾರೆ. ಇದು ತಮಾಷೆಯಲ್ಲ, ನಿಜವಾಗ್ಲೂ ಬಾಂಬ್ ಇಡಲಾಗಿದೆ. ತಡ ಮಾಡಬೇಡಿ, ನೂರಾರು ಜೀವ ಉಳಿಸಿ. ಎಲ್ಲವೂ ನಿಮ್ಮ ಕೈಯಲ್ಲಿ ಇಲ್ಲ ಎಂದು ಇ-ಮೇಲ್ ಮೂಲಕ ಬೆದರಿಸಲಾಗಿದೆ. ಮೇಲ್ ಸಿಕ್ಕ ಬಳಿಕ ಶಾಲೆ ವಿದ್ಯಾರ್ಥಿಗಳನೆಲ್ಲ ಬೇರೆಡೆಗೆ ಶಿಫ್ಟ್ ಮಾಡಲಾಗಿದ್ದು ವಿಷಯ ತಿಳಿದು ಪೋಷಕರು ಶಾಲೆ ಬಳಿ ಓಡೋಡಿ ಬರುತ್ತಿದ್ದಾರೆ. ಮೇಲ್ ಮೂಲಕ ಐದು ಶಾಲೆಗಳಲ್ಲಿ ಬಾಂಬ್ ಬೆದರಿಕೆ ಹಾಕಲಾಗಿದ್ದು ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿರುವ ಕಾರಣ ಶಾಲೆ ಮಕ್ಕಳಿಗೆ ಅತಂಕಗೊಳಸದೇ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬೆಂಗಳೂರಿನ 6 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ
1. ಮಹದೇವಪುರದ ಗೋಪಾಲನ್ ಇಂಟರ್ನ್ಯಾಷನಲ್ ಶಾಲೆ
2.ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್
3.ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ನ್ಯೂ ಅಕಾಡೆಮಿ ಸ್ಕೂಲ್
4. ಹೆಣ್ಣೂರು ಠಾಣಾ ವ್ಯಾಪ್ತಿಯ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ
5.ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್
6.ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಬಿನೈಸರ್ ಸ್ಕೂಲ್
ಇಂತಹ ಬೆದರಿಕೆಗಳು ಶೇಕಡಾ 99ರಷ್ಟು ಹುಸಿಯಾಗಿರುತ್ತವೆ
ಬೆಂಗಳೂರಿನ 6 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿತ್ತು. ಇಂತಹ ಬೆದರಿಕೆಗಳು ಶೇಕಡಾ 99ರಷ್ಟು ಹುಸಿಯಾಗಿರುತ್ತವೆ ಎಂದು ಟಿವಿ9ಗೆ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ. ಇಂತಹ ಬಾಂಬ್ ಬೆದರಿಕೆ ಕರೆ, ಇ-ಮೇಲ್ಗೆ ಮಹತ್ವ ಬೇಡ. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸ್ತಿದ್ದಾರೆ. ಶಾಲೆಗಳಲ್ಲಿ ಪರೀಕ್ಷೆಗೆ ಅಡ್ಡಿಯಾಗದಂತೆ ತಪಾಸಣೆ ನಡೆಯುತ್ತಿದೆ. ಶಾಲಾ ಆಡಳಿತ ಮಂಡಳಿ ಜತೆ ಪೊಲೀಸರು ಸಂಪರ್ಕದಲ್ಲಿರುತ್ತಾರೆ. ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದಿದ್ದಾರೆ.
ಇದನ್ನೂ ಓದಿ: ಕಾಡಿನಲ್ಲಿ ಬಳ್ಳಿಗೆ ಸಿಲುಕಿದ್ದ ಕರಡಿಯನ್ನು ರಕ್ಷಿಸಿದ್ದು ಹೇಗೆ? ನೋಡಿ
ಆಕಾರ್ ಪಟೇಲ್ ವಿದೇಶ ಪ್ರಯಾಣ ಮಾಡದಂತೆ ತಡೆ! ಕೋರ್ಟ್ ಆದೇಶದ ವಿರುದ್ಧ ನಡೆದಕೊಂಡ ಸಿಬಿಐ
Published On - 12:30 pm, Fri, 8 April 22