ಎಂಜಿ ರಸ್ತೆಯ ಎಚ್​ಎಸ್​ಬಿಸಿ ಬ್ರ್ಯಾಂಚ್​ಗೆ ಬಾಂಬ್ ಬೆದರಿಕೆಯ ಇಮೇಲ್

Bomb threat to HSBC bank: ಬೆಂಗಳೂರಿನ ಎಂಜಿ ರಸ್ತೆಯ ಎಚ್​ಎಸ್​ಬಿಸಿ ಶಾಖಾ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಹುಸಿ ಬೆದರಿಕೆಯ ಇಮೇಲ್ ಬಂದಿರುವುದು ಬೆಳಕಿಗೆ ಬಂದಿದೆ. ಹಲಸೂರು ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಕೆಲ ತಿಂಗಳಿಂದಲೂ ಇಂಥ ಹಲವು ಹುಸಿ ಬೆದರಿಕೆ ಕರೆ, ಮೆಸೇಜ್​ಗಳು ಬಂದಿರುವುದುಂಟು.

ಎಂಜಿ ರಸ್ತೆಯ ಎಚ್​ಎಸ್​ಬಿಸಿ ಬ್ರ್ಯಾಂಚ್​ಗೆ ಬಾಂಬ್ ಬೆದರಿಕೆಯ ಇಮೇಲ್
ಎಚ್​ಎಸ್​ಬಿಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 27, 2024 | 4:29 PM

ಬೆಂಗಳೂರು, ನವೆಂಬರ್ 27: ಎಚ್​ಎಸ್​ಬಿಸಿ ಬ್ಯಾಂಕ್​ನ ಎಂಜಿ ರಸ್ತೆ ಶಾಖೆಯಲ್ಲಿ ಬಾಂಬ್ ಬೆದರಿಕೆ ಬಂದಿದೆ. ಬ್ಯಾಂಕ್​ನಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಸುವ ಇಮೇಲ್​ವೊಂದನ್ನು ಬ್ಯಾಂಕ್​ಗೆ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಕಚೇರಿಯ ಎಲ್ಲಾ ಸಿಬ್ಬಂದಿ ಹಾಗು ಗ್ರಾಹಕರನ್ನು ಹೊರ ಕಳುಹಿಸಲಾಯಿತು. ಹಲಸೂರು ಠಾಣೆಯ ಪೊಲೀಸರು ಶೀಘ್ರದಲ್ಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ. ಬ್ಯಾಂಕ್ ಕಚೇರಿಯ ಒಳಗೆ ಮತ್ತು ಅವರಣದಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆ ಆಗಿಲ್ಲ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಇಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಬಾಂಬ್ ಇದೆ ಎಂದು ಬೆದರಿಸಿದ ಇಮೇಲ್ ಬಂದಿದೆ. ಕೂಡಲೇ ಸಿಬ್ಬಂದಿ ವರ್ಗದವರೆಲ್ಲರೂ ಗಾಬರಿಯಿಂದ ಹೊರಗೆ ಓಡಿದರು ಎನ್ನಲಾಗಿದೆ.

ಏರ್​ಪೋರ್ಟ್, ರೈಲು ನಿಲ್ದಾಣ, ಶಾಲೆ, ಕಾಲೇಜು, ಬ್ಯಾಂಕು ಇತ್ಯಾದಿ ಜನಸಂದಣಿ ಇರುವ ಜಾಗಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಸಿ ನಕಲಿ ಮೆಸೇಜ್ ಕಳುಹಿಸುವ ಬಹಳಷ್ಟು ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿವೆ. ಬೆಂಗಳೂರಿನಲ್ಲೂ ಕೆಲ ತಿಂಗಳುಗಳಿಂದ ಈ ರೀತಿ ಹುಸಿ ಬೆದರಿಕೆ ಕರೆಗಳು, ಮೆಸೇಜ್​ಗಳು ಬಂದಿವೆ.

ಇದನ್ನೂ ಓದಿ: ಬಿಎಂಸಿಆರ್‌ಐನಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ, ಶಸ್ತ್ರಚಿಕಿತ್ಸೆ ಮುಂದಕ್ಕೆ!

ಕೆಲ ವಾರಗಳ ಹಿಂದೆ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಇಮೇಲ್ ಸಂದೇಶವೊಂದು ಬಂದಿತ್ತು. ಅದನ್ನು ಪರಿಶೀಲಿಸಿದಾಗ ಯಾವ ಬಾಂಬ್ ಪತ್ತೆಯಾಗಿರಲಿಲ್ಲ. ತಮಿಳುನಾಡು ಬಿಜೆಪಿ ನಾಯಕರೊಬ್ಬರ ಹೆಸರು ಬಳಸಿ ದುಷ್ಕರ್ಮಿಗಳು ಬೆಂಗಳೂರಿನ ಬಿಐಟಿ, ಬಿಎಂಎಸ್ ಮತ್ತು ಎಂಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ಕಳುಹಿಸಲಾಗಿತ್ತು. ಅದು ಹುಸಿ ಬೆದರಿಕೆ ಎಂದು ಸಾಬೀತಾಗಿತ್ತು. ಆ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ದಾರ್ಜೀಲಿಂಗ್ ಮೂಲದ ದೀಪಾಂಜನ್ ಮಿತ್ರ ಎನ್ನುವ ವ್ಯಕ್ತಿಯನ್ನು ಪೊಲೀಸರು ಹಿಡಿದಿದ್ದರು. ಅಕ್ಟೋಬರ್​ನ ಮೊದಲ ವಾರದಲ್ಲಿ ಈತ ಹುಸಿ ಬೆದರಿಕೆಯ ಇಮೇಲ್​ಗಳನ್ನು ಕಳುಹಿಸಿದ್ದ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Wed, 27 November 24

Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?
Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ
ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?