ಬೆಂಗಳೂರು ಮಾತ್ರವಲ್ಲದೆ, ವಿದೇಶಗಳಲ್ಲೂ ಶಾಲೆಗಳಿಗೆ ಬಂದಿದ್ದ ಬಾಂಬ್​ ಬೆದರಿಕೆ ಸಂದೇಶ

ಈ ಹಿಂದೆ ಕೂಡ ಎರಡು ಬಾರಿ ಇದೇ ರೀತಿ ಶಾಲೆಗಳಿಗೆ ಸಂದೇಶ ರವಾನೆಯಾಗಿತ್ತು. ಆ ಕುರಿತು ತನಿಖೆ ಕೈಗೊಂಡ ಪೊಲೀಸರಿಗೂ ಜರ್ಮನಿವರೆಗೂ ಐಪಿ ಅಡ್ರೆಸ್ ರೀಚ್ ಆಗಿತ್ತು. ಆ ಬಳಿಕ ಅಸಲಿ ಬೆದರಿಕೆ ಸಂದೇಶ ಕಳಿಸಿದವರ ಬಗ್ಗೆ ಗೊತ್ತಾಗಿರಲಿಲ್ಲ. ಇದೀಗ ಪುನಃ ಇಂತಹದ್ದೇ ಇ-ಮೇಲ್​ ಬಂದಿದೆ.

ಬೆಂಗಳೂರು ಮಾತ್ರವಲ್ಲದೆ, ವಿದೇಶಗಳಲ್ಲೂ ಶಾಲೆಗಳಿಗೆ ಬಂದಿದ್ದ ಬಾಂಬ್​ ಬೆದರಿಕೆ ಸಂದೇಶ
ಬೆಂಗಳೂರಿನ ಶಾಲೆಗಳಿಗೆ ಬಾಂಬ್​ ಬೆದರಿಕೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 01, 2023 | 6:32 PM

ಬೆಂಗಳೂರು, ಡಿ.01: ಬೆಂಗಳೂರಿನ ಶಾಲೆಗಳಿಗೆ ಇ-ಮೇಲ್ ಮೂಲಕ​​ ಬಾಂಬ್​​ ಬೆದರಿಕೆ ಸಂದೇಶ (Bomb Threat Message)ಕ್ಕೆ ಸಂಬಂಧಪಟ್ಟಂತೆ ‘ಬೆಂಗಳೂರು(Bengaluru) ಮಾತ್ರವಲ್ಲದೆ, ವಿದೇಶದಲ್ಲೂ ಶಾಲೆಗಳಿಗೆ ಬೆದರಿಕೆ ಸಂದೇಶ ರವಾನೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಎರಡು ತಿಂಗಳ ಹಿಂದೆಯಷ್ಟೇ ಮಲೇಷ್ಯಾ, ಜರ್ಮನಿ, ಟ್ರಿನಿಡಾಡ್​​ ದೇಶದ ಶಾಲೆಗಳಿಗೂ ಇ-ಮೇಲ್ ಬೆದರಿಕೆ ಸಂದೇಶವನ್ನು ದುಷ್ಕರ್ಮಿಗಳು ಹಾಕಿದ್ದರು.

ಐಪಿ ಅಡ್ರೆಸ್ ನೀಡುವಂತೆ ಬೀಬಲ್ ಕಂಪನಿಗೆ ಪೊಲೀಸರಿಂದ ಪತ್ರ

ಇನ್ನು ಈ ದುಷ್ಕರ್ಮಿಗಳು ಬೀಬಲ್. ಕಾಮ್ ಮೂಲಕ ಕೃತ್ಯ ಮಾಡಿದ ಹಿನ್ನಲೆ ಸದ್ಯ ಬೆಂಗಳೂರು ಪೊಲೀಸರು ಸೈಪ್ರಸ್ ದೇಶದ ಬೀಬಲ್. ಕಂಪನಿಗೆ ಐಪಿ ಅಡ್ರೆಸ್​ ನೀಡುವಂತೆ ಪತ್ರ ಬರೆದಿದ್ದಾರೆ. ಬೆಂಗಳೂರು  ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇ-ಮೇಲ್​ಗಳ ಐಪಿ ಅಡ್ರೆಸ್ ಜರ್ಮನಿಯಿಂದ ಬಂದಿರುವ ರೀತಿಯಲ್ಲಿ ಮಾಹಿತಿ ಬಂದಿದ್ದು,  ಜರ್ಮನಿಯಲ್ಲಿ ಕೂತು ಮೇಲ್ ಕಳಿಸಿರುವ ರೀತಿಯಲ್ಲಿ ಸಂದೇಶ ಬಂದಿದೆ. ಆದರೆ, ಈ ಬಗ್ಗೆ ಬೆಂಗಳೂರು ಪೊಲೀಸರು ಅನುಮಾನ ಹೊಂದಿದ್ದು, ಬೇರೆಡೆ ಎಲ್ಲೋ ಕುಳಿತು ಹ್ಯಾಕ್ ಮಾಡಿ ಮೇಲ್ ಸಂದೇಶ ರವಾನೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ 60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ: ಯಾವೆಲ್ಲಾ ಸ್ಕೂಲ್? ಇಲ್ಲಿದೆ ಪಟ್ಟಿ

ಈ ಹಿಂದೆ ಕೂಡ ಜರ್ಮನಿ ಐಪಿ ಅಡ್ರೆಸ್​ನಿಂದ ಬಂದಿತ್ತು ಸಂದೇಶ

ಈ ಹಿಂದೆ ಕೂಡ ಎರಡು ಬಾರಿ ಇದೇ ರೀತಿ ಶಾಲೆಗಳಿಗೆ ಸಂದೇಶ ರವಾನೆಯಾಗಿತ್ತು. ಆ ಕುರಿತು ತನಿಖೆ ಕೈಗೊಂಡ ಪೊಲೀಸರಿಗೂ ಜರ್ಮನಿವರೆಗೂ ಐಪಿ ಅಡ್ರೆಸ್ ರೀಚ್ ಆಗಿತ್ತು. ಆ ಬಳಿಕ ಅಸಲಿ ಬೆದರಿಕೆ ಸಂದೇಶ ಕಳಿಸಿದವರ ಬಗ್ಗೆ ಗೊತ್ತಾಗಿರಲಿಲ್ಲ. ಇದೀಗ ಪುನಃ ಇಂತಹದ್ದೇ ಇ-ಮೇಲ್​ ಬಂದಿದ್ದು, ಈ ಬಾರಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:59 pm, Fri, 1 December 23