ಶಿಕ್ಷಣ ಇಲಾಖೆ ಬಳಿ ಇರುವ ಶಾಲೆಗಳ ದಾಖಲಾತಿ ಮೇಲ್ ಡಿಟೈಲ್ಸ್ ಸೋರಿಕೆಯಾಗಿದ್ದು ಹೇಗೆ?: ಖಾಸಗಿ ಶಾಲೆಗಳ ಒಕ್ಕೂಟ ಆಕ್ರೋಶ
ಬೆಂಗಳೂರಿನ ಹಲವು ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ 48 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಆದರೆ, ಶಿಕ್ಷಣ ಇಲಾಖೆ ಬಳಿ ಇರುವ ಶಾಲೆಗಳ ದಾಖಲಾತಿ ಮೇಲ್ ಮಾಹಿತಿ ಸಮಾಜಿಕವಾಗಿ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟವು ಶಿಕ್ಷಣ ಇಲಾಖೆ ವಿರುದ್ಧ ಬೊಟ್ಟು ಮಾಡುತ್ತಿದೆ.
ಬೆಂಗಳೂರು, ಡಿ.2: ನಗರದ ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat) ಹಾಕಿದ ಪ್ರಕರಣ ಸಂಬಂಧ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಖಾಸಗಿ ಶಾಲೆಗಳ ಒಕ್ಕೂಟ (Union of private schools), ಶಾಲೆಗಳ ದಾಖಲಾತಿ ಮೇಲ್ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸುತ್ತಿದೆ.
ನಗರದ 48ಕ್ಕೂ ಹೆಚ್ಚು ಶಾಲೆಗಳ ಇಮೇಲ್ ಹಾಗೂ ದತ್ತಾಂಶ ಸಿಕ್ಕಿದ್ದಾದರೂ ಹೇಗೆ? ನಮ್ಮ ಅಕೌಂಟ್ ಡಿಟೈಲ್ಸ್ ಮಕ್ಕಳ ದಾಖಲಾತಿ ಶಾಲೆಗಳ ಮೇಲ್ ಐಡಿ ಹಾಗೂ ದೂರವಾಣಿ ಸಂಖ್ಯೆಗಳು ಎಲ್ಲವೂ ಲೀಕ್ ಆಗಿವೆ. ಶಿಕ್ಷಣ ಇಲಾಖೆಗೆ ಕೊಟ್ಟ ಮಾಹಿತಿ ಸಮಾಜಿಕವಾಗಿ ಹೇಗೆ ಸಿಗಲು ಸಾಧ್ಯ ಎಂದು ಖಾಸಗಿ ಶಾಲೆಗಳ ಒಕ್ಕೂಟ ಪ್ರಶ್ನಿಸುತ್ತಿದೆ.
ಇದನ್ನೂ ಓದಿ: ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: 48 ಎಫ್ಐಆರ್ ದಾಖಲು
ನಮ್ಮ ಶಾಲೆಗಳ ಮೇಲ್ ಡಿಟೈಲ್ಸ್, ದತ್ತಾಂಶ ದಾಖಲೆ ಎಲ್ಲವೂ ಶಿಕ್ಷಣ ಇಲಾಖೆ ಬಳಿ ಇವೆ. ಇವುಗಳು ಬೇರೆಯವರಿಗೆ ಅಷ್ಟು ಸುಲಭಕ್ಕೆ ಸಿಗುವುದಿಲ್ಲ. ಹೀಗಿದ್ದಾಗ ಶಾಲೆಗಳ ದಾಖಲಾತಿ ಮೇಲ್ ಡಿಟೈಲ್ಸ್ ಹೇಗೆ ಸಿಕ್ಕಿದೆ ಅಂತಾ ಒಕ್ಕೂಟವು ಆಕ್ರೋಶ ಹೊರಹಾಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ