ಬೆಂಗಳೂರು ಆಸ್ಟಿನ್ ಟೌನ್ ಯುವಕ ತನ್ನ ಗೆಳತಿ ಜೊತೆಗಿನ ಖಾಸಗಿ ಚಿತ್ರಗಳನ್ನು ಕಾಣಬಾರದ ಕಡೆ ಕಂಡ!
ಬಿಪಿಒ ಉದ್ಯೋಗಿಯಾಗಿರುವ ಬಾಧಿತ ಯುವಕ ಮತ್ತು ಆತನ ಗೆಳತಿ ಹೋಟೆಲಿನಲ್ಲಿ ಖಾಸಗಿಯಾಗಿ ತೊಡಗಿದ್ದಾಗ ಅಪರಿಚಿತ ದುಷ್ಕರ್ಮಿಗಳು ಆಪ್ತ ಕ್ರಿಯೆಯನ್ನು ವಿಡಿಯೋ ಮಾಡಿ ಸೆರೆಹಿಡಿದಿದ್ದಾರೆ. ಬಳಿಕ ಅದನ್ನು ವೆಬ್ಸೈಟ್ಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಯುವಕ CEN ಪೊಲೀಸರಿಗೆ ದೂರು ನೀಡಿದ್ದಾರೆ. ಜನವರಿ 21ರಂದು ಈ ದುಷ್ಕೃತ್ಯ ಯುವಕನ ಗಮನಕ್ಕೆ ಬಂದಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯವಕನೊಬ್ಬ ತನ್ನ ಜೀವಮಾನದ ಶಾಕ್ಗೆ ಒಳಗಾಗಿದ್ದಾನೆ. ಹೌದು, ಕಂಪ್ಯೂಟರ್ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಶರವೇಗದಲ್ಲಿ ಸಾಗುತ್ತಿರುವ ಬೆಂಗಳೂರಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ರಾಜಧಾನಿ ಬೆಂಗಳೂರು ಐಟಿ ಕ್ಷೇತ್ರದಲ್ಲಿ ವೇಗವಾಗಿ ಬೆಳವಣಿಗೆ ಸಾಗಿಸುತ್ತಾ ಸಾಗಿದಂತೆ ಅಪರಾಧ ಲೋಕದಲ್ಲೂ ಅದೂ ಸೈಬರ್ ಅಪರಾಧ ಲೋಕದಲ್ಲಿ ಭಯಾನಕ ಬೆಳವಣಿಗೆ ಕಂಡಿದೆ. ರಾಜಧಾನಿಯ ಆಸ್ಟಿನ್ ಟೌನ್ನಲ್ಲಿ (austin town) ನೆಲೆಸಿರುವ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ (Girlfriend) ಜೊತೆಗಿರುವ ಖಾಸಗಿ ಕ್ಷಣಗಳ ವಿಡಿಯೋ (private video) ಚಿತ್ರಗಳನ್ನು ಕಾಣಬಾರದ ಕಡೆ ಕಂಡಿದ್ದಾನೆ! ಅಂದರೆ ಅಶ್ಲೀಲ ವೆಬ್ಸೈಟ್ಗಳಲ್ಲಿ ಇವರಿಬ್ಬರ ಖಾಸಗೀ ಜೀವನದ ಚಿತ್ರಗಳು ಕಂಡುಬಂದಿವೆ. ಬೆಂಗಳೂರಿನ ಸೈಬರ್, ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ ಕ್ರೈಂ – ಸಿಇಎನ್ (Cyber, Economic and Narcotics Crime -CEN) ಮೂಲಗಳನ್ನಾಧರಿಸಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಇತ್ತೀಚೆಗೆ ಆ ಯುವಕ ಮತ್ತು ಯುವತಿ ಖಾಸಗಿ ಹೋಟೆಲಿನಲ್ಲಿ ತಂಗಿದ್ದರು.
ಬಿಪಿಒ ಉದ್ಯೋಗಿಯಾಗಿರುವ ಬಾಧಿತ ಯುವಕ ಮತ್ತು ಆತನ ಗೆಳತಿ ಹೋಟೆಲಿನಲ್ಲಿ ಖಾಸಗಿಯಾಗಿ ತೊಡಗಿದ್ದಾಗ ಅಪರಿಚಿತ ದುಷ್ಕರ್ಮಿಗಳು ಆಪ್ತ ಕ್ರಿಯೆಯನ್ನು ವಿಡಿಯೋ ಮಾಡಿ ಸೆರೆಹಿಡಿದಿದ್ದಾರೆ. ಬಳಿಕ ಅದನ್ನು ವೆಬ್ಸೈಟ್ಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಯುವಕ CEN ಪೊಲೀಸರಿಗೆ ದೂರು ನೀಡಿದ್ದಾರೆ. ಜನವರಿ 21ರಂದು ಈ ದುಷ್ಕೃತ್ಯ ಯುವಕನ ಗಮನಕ್ಕೆ ಬಂದಿದೆ. ಅಂದು ಕಂಪ್ಯೂಟರ್ನಲ್ಲಿ ಸಂತ್ರಸ್ತ ಯುವಕ ಸೆಕ್ಸ್ ವೆಬ್ಸೈಟ್ಗಳನ್ನು ತಡಕಾಡುತ್ತಿದ್ದಾಗ ತನ್ನದೇ ಚಿತ್ರಗಳನ್ನು ನೋಡಿ ದಂಗಾಗಿದ್ದಾನೆ.
ತನ್ನ ಗೆಳತಿಯ ಜೊತೆಗೆ ಈ ಹಿಂದೆ ಖಾಸಗಿ ಹೋಟೆಲಿನಲ್ಲಿ ತಂಗಿದ್ದಾಗಿನ ತನ್ನ ಆಪ್ತ ಕ್ರಿಯೆಗಳನ್ನು ಬಿತ್ತಿರುಸುವ ವಿಡಿಯೋಗಳು ಅದಾಗಿದ್ದವು. ಬಾಧಿತರ ಚಿತ್ರಗಳನ್ನು ಮರೆಮಾಚಲಾಗಿತ್ತಾದರೂ ತನ್ನ ಎದೆಯ ಮೇಲಿನ ಹುಟ್ಟು ಮಚ್ಚೆಯ ಮೂಲಕ ಈ ಚಿತ್ರಗಳು ತನ್ನವೇ ಎಂದು ಯುವಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ. ತಡಮಾಡದೆ ಜನವರಿ 24ರಂದು CEN ಪೊಲೀಸ್ ಠಾಣೆಯಲ್ಲಿ ಯುವಕ ದೂರು ದಾಖಲಿಸಿದ್ದಾನೆ.
ವಿಡಿಯೋ ದೃಶ್ಯಗಳು ನಾನಾ ಕೋನಗಳಿಂದ ಚಿತ್ರೀಕರಿಸಲಾಗಿದ್ದು, ಖಾಸಗಿ ಹೋಟೆಲಿನಲ್ಲಿ ಇದು ಹೇಗೆ ಸಾಧ್ಯವಾಗಿದೆ ಎಂದು CEN ಪೊಲೀಸರು ಸದ್ಯಕ್ಕೆ ತಲೆಕೆಡಿಸಿಕೊಂಡಿದ್ದಾರೆ. ಯುವಕನ ದೂರಿನ ಮೇರೆಗೆ ಕಾರ್ಯವೃತ್ತವಾಗಿರುವ CEN ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಬಂದಿದ್ದವರು ಇಹಲೋಕ ತ್ಯಜಿಸಿದರು, ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ಸಾವು
Published On - 10:25 am, Tue, 1 February 22