ಅಂತ್ಯಸಂಸ್ಕಾರಕ್ಕೆ ಬಂದಿದ್ದವರು ಇಹಲೋಕ ತ್ಯಜಿಸಿದರು, ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ಸಾವು

ಮೃತರು ಗದಗ ಜಿಲ್ಲೆ ಡಸ ಹಡಗಲಿ ಗ್ರಾಮದವರು. ಬಾಗಲಕೋಟೆ ತಾಲ್ಲೂಕಿನ ಭಗವತಿ ಗ್ರಾಮಕ್ಕೆ ನಿನ್ನೆ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ಬಂದಿದ್ದರು. ರಾತ್ರಿ ವಾಪಸ್ ಹೊರಡುವಾಗ ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಂತ್ಯಸಂಸ್ಕಾರಕ್ಕೆ ಬಂದಿದ್ದವರು ಇಹಲೋಕ ತ್ಯಜಿಸಿದರು, ಕಾರಿಗೆ ಟ್ರ್ಯಾಕ್ಟರ್  ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ಸಾವು
ಅಂತ್ಯಸಂಸ್ಕಾರಕ್ಕೆ ಬಂದಿದ್ದವರು ಇಹಲೋಕ ತ್ಯಜಿಸಿದರು, ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ಸಾವು
TV9kannada Web Team

| Edited By: sadhu srinath

Feb 01, 2022 | 9:34 AM

ಬಾಗಲಕೋಟೆ: ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದ ಮೂವರು ಕೊನೆಯುಸಿರೆಳೆದಿದ್ದಾರೆ. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಜಾಲಿಹಾಳ ಗ್ರಾಮದ ಬಳಿ, ಗದಗ-ಬಾಗಲಕೋಟೆ ಮಾರ್ಗದ ರಸ್ತೆಯಲ್ಲಿ ದುರ್ಘಟನೆ ನಡೆದಿದೆ.

ಬಸನಗೌಡ ಪಾಟೀಲ್(60), ಮಂಜುನಾಥ ಮಾರನಬಸರಿ (38) ಸ್ಥಳದಲ್ಲಿಯೇ ಮೃತಪಟ್ಟರೆ ಸಂಗಮ್ಮ ಪಾಟಿಲ್(55) ಗದಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಇಬ್ಬರಿಗೆ ಗಾಯಗಳಾಗಿದ್ದು, ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಗದಗ ಜಿಲ್ಲೆ ಡಸ ಹಡಗಲಿ ಗ್ರಾಮದವರು. ಬಾಗಲಕೋಟೆ ತಾಲ್ಲೂಕಿನ ಭಗವತಿ ಗ್ರಾಮಕ್ಕೆ ನಿನ್ನೆ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ಬಂದಿದ್ದರು. ರಾತ್ರಿ ವಾಪಸ್ ಹೊರಡುವಾಗ ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಜಾಗರೂಕತೆಯಿಂದ ಸಾಗಿಸುತ್ತಿದ್ದ ಜಿಲೆಟಿನ್ ವಶಕ್ಕೆ: ಉತ್ತರ ಕನ್ನಡ: ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 250 ಕೆಜಿಯಷ್ಟು ಜಿಲೆಟಿನ್ ಕಡ್ಡಿ ಮತ್ತು ಜಿಲೆಟಿನ್ ಕಡ್ಡಿ ಸಾಗಿಸುತ್ತಿದ್ದ ಜೆಸಿಬಿ ವಾಹನವನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಹೆದ್ದಾರಿ ಅಗಲೀಕರಣಕ್ಕಾಗಿ ಬಂಡೆ ಸ್ಫೋಟಿಸಲು ಜಿಲೆಟಿನ್ ಸಾಗಿಸುತ್ತಿದ್ದರು ಎನ್ನಲಾಗಿದೆ. ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ, ಪ್ರತ್ಯೇಕ ವಾಹನದಲ್ಲಿ ಸಾಗಾಟ ಮಾಡದೇ ಜೆಸಿಬಿಯಲ್ಲಿಯೇ ಜಿಲೆಟಿನ್ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಲಬುರಗಿಯಲ್ಲಿ ಕೊರೊನಾಗೆ ಎರಡು ವರ್ಷದ ಹೆಣ್ಣು ಮಗು ಬಲಿ: ಕಲಬುರಗಿಯಲ್ಲಿ ಕೊರೊನಾಗೆ ಎರಡು ವರ್ಷದ ಹೆಣ್ಣು ಮಗು ಬಲಿಯಾಗಿದೆ. ಮೂರನೇ ಅಲೆಯಲ್ಲಿ ಜಿಲ್ಲೆಯಲ್ಲಿ ಈ ಮಗು ಮೊದಲ ಬಲಿಯಾಗಿದೆ. ಕಲಬುರಗಿ ತಾಲೂಕಿನ ಬೋಳೆವಾಡ ಗ್ರಾಮದ ಎರಡು ವರ್ಷದ ಮಗು ಕೊರೊನಾದಿಂದ ಸಾವನ್ನಪ್ಪಿದೆ. ನಿನ್ನೆ ಒಂದೇ ದಿನ 499 ಸೋಂಕಿತರ ಪೈಕಿ 129 ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತ ನೀಡಿದ ವರದಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿರುವುದನ್ನು ಉಲ್ಲೇಖಿಸಲಾಗಿದೆ.

ಬೈಕ್ ಸವಾರ ದುರ್ಮರಣ: ಮೈಸೂರು: ಹುಣಸೂರು ತಾಲೂಕಿನ ಕಲ್‌ಬೆಟ್ಟ ಜಂಕ್ಷನ್‌ನಲ್ಲಿ ಬೈಕ್‌ಗೆ ಚಾಮರಾಜನಗರ ಡಿಪೋಗೆ ಸೇರಿದ ಬಸ್ ಡಿಕ್ಕಿಯಾಗಿ ಭುವನಹಳ್ಳಿಯ ಬೈಕ್ ಸವಾರ ಮಂಜುನಾಥ ದುರ್ಮರಣಕ್ಕೀಡಾಗಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಣ್ಣೆಯಿಂದ ತಲೆಗೆ ಹೊಡೆದು ವ್ಯಕ್ತಿಯ ಬರ್ಬರ ಕೊಲೆ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾವಲುಹೊಸೂರು ಗ್ರಾಮದ ಬಳಿ ಬೈಕ್​​ನಲ್ಲಿ ತೆರಳುತ್ತಿದ್ದ ಆನಂದ್‌ಕುಮಾರ್(42) ಎಂಬ ವ್ಯಕ್ತಿಯನ್ನು ಅಡ್ಡಗಟ್ಟಿ, ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಆನಂದ್ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ನುಗ್ಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Also Read: ಕುಂದಾನಗರಿಯಲ್ಲಿ ಹೆಚ್ಚಾದ ಕಳ್ಳರ ಕಾಟ; ದೇವಸ್ಥಾನ-ಸೊಸೈಟಿಗಳೇ ಟಾರ್ಗೆಟ್, ಖದೀಮರನ್ನು ಬಂಧಿಸದ ಪೊಲೀಸರ ವಿರುದ್ಧ ಜನರ ಆಕ್ರೋಶ

Also Read: ಶಸ್ತ್ರಚಿಕಿತ್ಸೆ ಮಾಡದೇ ರೋಗಿಯನ್ನು ವೈದ್ಯರು ಸತಾಯಿಸುತ್ತಿರುವ ಆರೋಪ; ಜಿಮ್ಸ್ ಆಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada