Yeshasvini Scheme: ಯಶಸ್ವಿನಿ ಆರೋಗ್ಯ ಯೋಜನೆಗೆ ಮರುಜೀವ ತುಂಬಿದ ಸಿಎಂ ಬೊಮ್ಮಾಯಿ: ಹರೀಶ್ ಬಿಜ್ಜೂರ್ ಸಂತಸ
Karnataka State Budget 2022-23: ಯಶಸ್ವಿನಿ ಆರೋಗ್ಯ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ನಲ್ಲಿ ಮರುಜಾರಿಗೊಳಿಸುವ ಆಶಯ ವ್ಯಕ್ತಪಡಿಸಿರುವುದಕ್ಕೆ ಖ್ಯಾತ ಅಂಕಣಕಾರ, ಖ್ಯಾತ ಬ್ರ್ಯಾಂಡ್ ಸ್ಟ್ರಾಟೆಜಿಸ್ಟ್ ಹರೀಶ್ ಬಿಜ್ಜೂರ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ತಮ್ಮ ಅಧಿಕಾರಾವಧಿಯ 9ನೇ ತಿಂಗಳಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಹಿಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು (Yeshasvini Health Scheme) ಮತ್ತೆ ಜಾರಿಗೊಳಿಸಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ತಮ್ಮ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಯೋಜನೆ ಹಳೆಯದೇ ಆದರೂ ಅದರ ಮಹತ್ವವನ್ನು ಮನಗಂಡು ಬಸವರಾಜ ಬೊಮ್ಮಾಯಿ ಅದಕ್ಕೆ ಮರುಜೀವ ತುಂಬಿರುವುದು ಶ್ಲಾಘನೀಯವಾಗಿದೆ. ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆಯೂ ದಕ್ಕಿದೆ.
ಯಶಸ್ವಿನಿ ಆರೋಗ್ಯ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ನಲ್ಲಿ ಮರುಜಾರಿಗೊಳಿಸುವ ಆಶಯ ವ್ಯಕ್ತಪಡಿಸಿರುವುದಕ್ಕೆ ಖ್ಯಾತ ಅಂಕಣಕಾರ, ಖ್ಯಾತ ಬ್ರ್ಯಾಂಡ್ ಸ್ಟ್ರಾಟೆಜಿಸ್ಟ್ ಹರೀಶ್ ಬಿಜ್ಜೂರ್ (Harish Bijoor) ಸಂತೋಷ ವ್ಯಕ್ತಪಡಿಸಿದ್ದಾರೆ.
ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ಜಾರಿಗೆ ತಂದಿದ್ದ ಯೋಜನೆಯಿದು. ಅಮೂಲ್ಯ ಯೋಜನೆ ಇದಾಗಿತ್ತು. ಇಂದು ಕರ್ನಾಟಕ ರಾಜ್ಯ ಬಜೆಟ್ ಮಂಡನೆ ವೇಳೆ Yeshasvini Cooperative Farmers Health Care Scheme (ಯಶಸ್ವಿನಿ ಆರೋಗ್ಯ ಯೋಜನೆ) ಮರುಜಾರಿಗೆ ತಂದಿರುವುದು ನನಗೆ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಹರೀಶ್ ಬಿಜ್ಜೂರ್ ಟ್ವೀಟ್ ಸಾರಾಂಶ ಇಲ್ಲಿದೆ:
iTWEET: I am glad to see the Yeshasvini Cooperative Farmers Health Care Scheme relaunched in Karnataka under the State Budget announced today! This was an #SMKrishna contribution to the State as far back as 2002! A valuable one! #KarnatakaBudget2022 #Yashashvini #karnatakabudget
iTWEET: I am glad to see the Yeshasvini Cooperative Farmers Health Care Scheme relaunched in Karnataka under the State Budget announced today! This was an #SMKrishna contribution to the State as far back as 2002! A valuable one! #KarnatakaBudget2022 #Yashashvini #karnatakabudget
— Harish Bijoor (@harishbijoor) March 4, 2022