ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ; ರಾಜ್ಯದ ಬೇರೆ ಭಾಗಗಳಲ್ಲಿಯೂ ‘ಗ್ರಾಮ ಒನ್’ ಯೋಜನೆ ವಿಸ್ತರಣೆ

ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ; ರಾಜ್ಯದ ಬೇರೆ ಭಾಗಗಳಲ್ಲಿಯೂ ‘ಗ್ರಾಮ ಒನ್’ ಯೋಜನೆ ವಿಸ್ತರಣೆ
ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ; ರಾಜ್ಯದ ಬೇರೆ ಭಾಗಗಳಲ್ಲಿಯೂ ‘ಗ್ರಾಮ ಒನ್’ ಯೋಜನೆ ವಿಸ್ತರಣೆ

Karnataka Budget 2022 Updates: ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ ನೀಡಲು ತಲಾ 20 ಕೋಟಿ ರೂಪಾಯಿ ಎತ್ತಿಡಲಾಗಿದೆ. ಬೆಳಗಾವಿಯಲ್ಲಿ ₹ 150 ಕೋಟಿ ವೆಚ್ಚದಲ್ಲಿ GETDC ಸ್ಥಾಪನೆಯಾಗಲಿದೆ.

TV9kannada Web Team

| Edited By: sadhu srinath

Mar 04, 2022 | 7:39 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ತಮ್ಮ ಅಧಿಕಾರಾವಧಿಯ 9ನೇ ತಿಂಗಳಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ತಮ್ಮ ಚೊಚ್ಚಲ ಬಜೆಟ್​ ಮಂಡನೆ ಮಾಡಿದ್ದಾರೆ. ವಿವರ ಹೀಗಿದೆ: ನವ ಕರ್ನಾಟಕ ನಿರ್ಮಾಣಕ್ಕೆ ‘ಪರಿಸರ ಸ್ನೇಹಿ ನವನಗರ’ ಹೆಸರಿನಲ್ಲಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ ರಚನೆ ಮಾಡಲಾಗಿದ್ದು, ತುಮಕೂರು, ಧಾರವಾಡ ಜಿಲ್ಲೆಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆಯಾಗಲಿದೆ (Mega Jewellery Park at Bangalore). ಧಾರವಾಡದಲ್ಲಿ FMCG ಕ್ಲಸ್ಟರ್ ಅಭಿವೃದ್ಧಿಗೆ ಪ್ಯಾಕೇಜ್ ಒದಗಿಸಲಾಗುವುದು. ಸರ್ಕಾರದಿಂದಲೇ ಮೈಶುಗರ್ ಕಾರ್ಖಾನೆ ನಡೆಸಲು ಹಣ ಮೈಶುಗರ್ ಕಾರ್ಖಾನೆಗೆ 50 ಕೋಟಿ ರೂಪಾಯಿ ಹೊಂದಿಸಲಾಗುವುದು. ಕಲಬುರಗಿ, ನವಲಗುಂದ, ರಾಣೆಬೆನ್ನೂರು ಮತ್ತು ವಿಜಯಪುರದಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ತಲೆ ಎತ್ತಲಿದೆ. ಬಳ್ಳಾರಿಯಲ್ಲಿ ಜೀನ್ಸ್, ಉಡುಪು ಸಂಬಂಧಿತ ಟೆಕ್ಸ್‌ಟೈಲ್ ಪಾರ್ಕ್ ಬರಲಿದೆ. ಇನ್ನು ರಾಜ್ಯದಲ್ಲಿ ಸೆಮಿಕಂಡಕ್ಟರ್ ಉದ್ಯಮಗಳ ಸ್ಥಾಪನೆಗೂ ಪ್ರೋತ್ಸಾಹ ಕಲ್ಪಿಸಲಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ ನೀಡಲು ತಲಾ 20 ಕೋಟಿ ರೂಪಾಯಿ ಎತ್ತಿಡಲಾಗಿದೆ. ಬೆಳಗಾವಿಯಲ್ಲಿ ₹ 150 ಕೋಟಿ ವೆಚ್ಚದಲ್ಲಿ GETDC ಸ್ಥಾಪನೆಯಾಗಲಿದೆ. ಮೈಸೂರಿನಲ್ಲಿ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಪ್ಲಗ್ & ಪ್ಲೇ ಎಂಬ ಗ್ಲೋಬರ್ ಎಮರ್ಜಿಂಗ್ ಟೆಕ್ನಾಲಜಿ ಡಿಸೈನ್ ಸೆಂಟರ್ 30 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪನೆಯಾಗಲಿದೆ. ಕರ್ನಾಟಕ ಆ್ಯಕ್ಸಲೆರೇಷನ್ ನೆಟ್‌ವರ್ಕ್ ಸ್ಥಾಪನೆಗೆ 20 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ (Karnataka Budget 2022).

ಬಜೆಟ್​​ ಮುಖ್ಯಾಂಶಗಳು: * ಸರ್ವರಿಗೂ ಸೂರು ಯೋಜನೆ ಅಡಿ 6,612 ಕೋಟಿ ರೂಪಾಯಿ ವೆಚ್ಚದಲ್ಲಿ 5 ಲಕ್ಷ ಹೊಸ ಮನೆಗಳು. ಮನೆಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ, ಪ. ಪಂಗಡದ ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಆದ್ಯತೆ. ಮೀನುಗಾರರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ ಆದ್ಯತೆ ನೀಡಲಾಗುವುದು.

* ಆಶಾ ಕಾರ್ಯಕರ್ತೆಯರು ಸೇರಿ ಹಲವರ ಗೌರವಧನ ಹೆಚ್ಚಳ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು, ಗ್ರಾಮ ಸಹಾಯಕರಿಗೆ ₹ 1,000 ಮತ್ತು ಬಿಸಿಯೂಟ ತಯಾರಕರಿಗೂ ₹1,000 ಗೌರವಧನ ಬಜೆಟ್​​ನಲ್ಲಿ ಹೆಚ್ಚಳವಾಗಿದೆ. ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳಕ್ಕೂ ಸ್ಕೀಮ್ ನಿಗದಿಯಾಗಿದ್ದು ಸೇವಾನುಭವ ಆಧಾರದಲ್ಲಿ 1000 ದಿಂದ 1,500 ರೂ. ಹೆಚ್ಚಳವಾಗಲಿದೆ. ಪ್ರವಾಸಿ ಗೈಡ್‌ಗಳಿಗೆ ಮಾಸಿಕ 2,000 ಪ್ರೋತ್ಸಾಹ ಗೌರವಧನ ದೊರಕಲಿದೆ.

* ‘ಜಲ ಜೀವನ್‌ ಮಿಷನ್’ ಅಡಿ 2022-23ರಲ್ಲಿ 7,000 ಕೋಟಿ ರೂ. ವೆಚ್ಚದಲ್ಲಿ 25 ಲಕ್ಷ ಮನೆಗೆ ನಲ್ಲಿ ನೀರು ಪೂರೈಕೆ. * ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ 1,600 ಕೋಟಿ ಅನುದಾನ. ಮಳೆಗಾಲದಲ್ಲಿ ಹಾನಿಯಾದ ರಸ್ತೆಗಳ ಸುಧಾರಣೆಗೆ 300 ಕೋಟಿ. ರಾಜ್ಯಾದ್ಯಂತ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ

* ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3,000 ಕೋಟಿ

* ಅಮೃತ ಆಯವ್ಯಯ ಹೆಸರಲ್ಲಿ 3,000 ಕೋಟಿ ರೂ. ಕೊಡುಗೆ. ಶಿಕ್ಷಣ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ 1,500 ಕೋಟಿ ರೂಪಾಯಿ. ಉತ್ತರ ಕರ್ನಾಟಕದ ಮೈಕ್ರೋ ಯೋಜನೆಗೆ ₹1,500 ಕೋಟಿ ನಿಗದಿ. ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ ₹188 ಕೋಟಿ ಅನುದಾನ. 750 ಗ್ರಾಮ ಪಂಚಾಯಿತಿಗಳಿಗೆ ತಲಾ 25 ಲಕ್ಷ ರೂಪಾಯಿ ಹಂಚಿಕೆ ಮಾಡಲಾಗುವುದು.

* ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ 1,000 ಕೆರೆಗಳ ಅಭಿವೃದ್ಧಿ.

Also Read: Yeshasvini Scheme: ಯಶಸ್ವಿನಿ ಆರೋಗ್ಯ ಯೋಜನೆಗೆ ಮರುಜೀವ ತುಂಬಿದ ಸಿಎಂ ಬೊಮ್ಮಾಯಿ: ಹರೀಶ್ ಬಿಜ್ಜೂರ್ ಸಂತಸ

Also Read: Public Prosecutor Recruitment: ಗುತ್ತಿಗೆ ಆಧಾರದಲ್ಲಿ ವಕೀಲರ ನೇಮಕಾತಿ -ಅರ್ಜಿ ಆಹ್ವಾನ, ಮಾರ್ಚ್ 7 ಕೊನೆಯ ದಿನ

Follow us on

Related Stories

Most Read Stories

Click on your DTH Provider to Add TV9 Kannada