ಬೆಂಗಳೂರು: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಸಬ್ಇನ್ಸ್ಪೆಕ್ಟರ್ಗೆ 3 ವರ್ಷ ಜೈಲು ಸಜೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ 23ನೇ ಸಿಟಿ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ. 2018ರಲ್ಲಿ ಭ್ರಷ್ಠಾಚಾರ ನಿಗ್ರಹ ದಳ ಎಸಿಬಿಯಲ್ಲಿ (ACB) ದಾಖಲಾಗಿದ್ದ ಪ್ರಕರಣ ಇದಾಗಿದೆ. ಅಂದಿನ ಬಿಎಂಟಿಎಫ್ (BMTF) ಠಾಣೆ ಸಬ್ಇನ್ಸ್ಪೆಕ್ಟರ್ ಶಿವಕುಮಾರ್ ಶಿಕ್ಷೆಗೊಳಗಾದ ಪೊಲೀಸ್ ಅಧಿಕಾರಿ. ಪ್ರಕರಣವೊಂದರಲ್ಲಿ ಆರೋಪಿಯ ಕೈಬಿಡಲು ಆರೋಪಿಯಿಂದ 80 ಸಾವಿರ ರೂಪಾಯಿ ಲಂಚಕ್ಕೆ (Bribe) ಎಸ್ಐ ಶಿವಕುಮಾರ್ ಬೇಡಿಕೆಯಿಟ್ಟಿದ್ದರು. ಕ್ಲರ್ಕ್ ಚೇತನ್ ಮುಖಾಂತರ 50 ಸಾವಿರ ಹಣ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು. ಪ್ರಕರಣದ ತನಿಖೆ ನಡೆಸಿ ಮಾರ್ಚ್ 2021ರಲ್ಲಿ ನ್ಯಾಯಾಲಯಕ್ಕೆ ಎಸಿಬಿ ಅಧಿಕಾರಿಗಳು ಚಾರ್ಜ್ಷೀಟ್ ಸಲ್ಲಿಸಿದ್ದರು.
ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ದೂರುದಾರನಿಗೆ ಕಾರಣ ಕೇಳಿ ಶೋಕಾಸ್ ನೊಟೀಸ್!
ವಿಚಾರಣೆ ವೇಳೆ ದೂರುದಾರ ಅಭಿಯೋಜನೆಗೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು. ಆದರೆ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ. ಅಪರಾಧಿ ಶಿವಕುಮಾರ್ (ಪ್ರಸ್ತುತ ಬೆಂಗಳೂರು ರೈಲ್ವೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್) ಹಾಗೂ ಕ್ಲರ್ಕ್ ಚೇತನ್ ಗೆ ತಲಾ 3 ವರ್ಷ ಜೈಲು ಸಜೆ ಮತ್ತು 25 ಸಾವಿರ ರೂ ದಂಡ ವಿಧಿಸಲಾಗಿದೆ. ಇನ್ನು ಅಭಿಯೋಜನೆಗೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ದೂರುದಾರನಿಗೆ ಕಾರಣ ಕೇಳಿ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ.
ಐಎಎಸ್ ಅಧಿಕಾರಿ ವರ್ಗ:
ಐಎಎಸ್ ಅಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿಯಾಗಿದ್ದ ಸಿಂಧೂ ರೇಷ್ಮೆ ಇಲಾಖೆ ಆಯುಕ್ತರಾಗಿ ಸಿಂಧೂ ರೂಪೇಶ್ ವರ್ಗವಾಗಿದ್ದಾರೆ.
ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಎರಡನೇ ದಿನವೂ ಎಸಿಬಿ ಪರಿಶೀಲನೆ:
ನಿನ್ನೆ ಬುಧವಾರ ರಾಜ್ಯಾದ್ಯಂತ ಬಿರುಗಾಳಿ ಎಬ್ಬಿಸಿ, ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಸಿದ್ದ ಭ್ರಷ್ಟಾಚಾರ ನಿಗ್ರಹ ದಳವು ಇಂದೂ ಸಹ ತನ್ನ ಬೇಟೆ ಮುಂದುವರಿಸಿದೆ. ಸಾರಿಗೆ ಇಲಾಖೆಯ ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ಮನೆಯಲ್ಲಿ 2ನೇ ದಿನವೂ ಎಸಿಬಿ ತಲಾಶ್ ನಡೆಸಿದೆ. ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಇಂದು ಸಿಕ್ಕ ಆಸ್ತಿ-ಪಾಸ್ತಿಯ ವಿವರ ಹೀಗಿದೆ:
ಇದನ್ನೂ ಓದಿ:
KPSC Recruitment 2022: ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ ಎ ಹುದ್ದೆಗಳಿಗೆ ಅರ್ಜಿ ಅಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ
ಇದನ್ನೂ ಓದಿ:
ಯಲಹಂಕ: ಸಾಲದ ಕಂತು ಕಟ್ಟಿಲ್ಲವೆಂದು ಬೈಕ್ ಅಡ್ಡಗಟ್ಟಿ ನಿಲ್ಲಿಸಿ, ನಡುರಸ್ತೆಯಲ್ಲೇ ಬೈಕಿಗೆ ಬೆಂಕಿ ಹಚ್ಚಿ ಎಸ್ಕೇಪ್!
Published On - 8:28 pm, Thu, 17 March 22