ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಪುರಾಣ: ಆರೋಪಿ ಉಪ ತಹಶೀಲ್ದಾರ್​ಗೆ ಜಾಮೀನು ಸಿಕ್ತು

| Updated By: ಸಾಧು ಶ್ರೀನಾಥ್​

Updated on: Jul 21, 2022 | 5:29 PM

ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆರೋಪಿ ಉಪ ತಹಶೀಲ್ದಾರ್​ಗೆ ಜಾಮೀನು ಸಿಕ್ಕಿದೆ. ಪ್ರಕರಣದ ಸಂಬಂಧ 60 ದಿನವಾದರೂ ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಉಪ ತಹಶೀಲ್ದಾರ್‌ ಪಿ.ಎಸ್. ಮಹೇಶ್‌ಗೆ ಜಾಮೀನು ದೊರೆತಿದೆ.

ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಪುರಾಣ: ಆರೋಪಿ ಉಪ ತಹಶೀಲ್ದಾರ್​ಗೆ ಜಾಮೀನು ಸಿಕ್ತು
ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಪುರಾಣ: ಆರೋಪಿ ಉಪ ತಹಶೀಲ್ದಾರ್​ಗೆ ಜಾಮೀನು ಸಿಕ್ತು
Follow us on

ಬೆಂಗಳೂರು: ಬೆಂಗಳೂರು ಜಿಲ್ಲಾಧಿಕಾರಿ (Bangalore DC) ಕಚೇರಿಯಲ್ಲಿ ಲಂಚಕ್ಕೆ (Bribe) ಬೇಡಿಕೆ ಇಟ್ಟ ಪ್ರಕರಣದಲ್ಲಿ ಆರೋಪಿ ಉಪ ತಹಶೀಲ್ದಾರ್​ಗೆ ಜಾಮೀನು (Bail) ಸಿಕ್ಕಿದೆ. ಪ್ರಕರಣದ ಸಂಬಂಧ 60 ದಿನವಾದರೂ ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಉಪ ತಹಶೀಲ್ದಾರ್‌ ಪಿ.ಎಸ್. ಮಹೇಶ್‌ಗೆ ಜಾಮೀನು ದೊರೆತಿದೆ. ಎಸಿಬಿ ವಿಶೇಷ ಕೋರ್ಟ್ ಆರೋಪಿಗೆ ಕಡ್ಡಾಯ ಜಾಮೀನು ಮಂಜೂರು ಮಾಡಿದೆ. 60 ದಿನಗಳಾದರೂ ದೋಷಾರೋಪ ಪಟ್ಟಿ ಸಲ್ಲಿಸದ ಎಸಿಬಿ (ACB) ಅಧಿಕಾರಿಗಳು ಬಂಧಿತರಿಗೆ ಪರೋಕ್ಷ ನೆರವು ನೀಡಿದ್ದಾರಾ ಎಂಬ ಅನುಮಾನ ಕಾಡತೊಡಗಿದೆ.

ಇಬ್ಬರು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ

ಇಬ್ಬರು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್​ ಎಂಡಿ ರಾಜೇಂದ್ರ ಚೋಳನ್​ಗೆ KSMS-CL ಎಂಡಿ ಹುದ್ದೆ ಹೆಚ್ಚುವರಿ ಹೊಣೆ, ಆಹಾರ ಇಲಾಖೆ ಆಯುಕ್ತೆ ಎಂ. ಕನಗವಲ್ಲಿ ಅವರಿಗೆ ಅಹಾರ ನಿಗಮದ ಎಂಡಿ ಹುದ್ದೆ ಹೆಚ್ಚುವರಿ ಹೊಣೆ ನೀಡಲಾಗಿದೆ.

Published On - 5:25 pm, Thu, 21 July 22