AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ, ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ, ಥೀಮ್ ಪಾರ್ಕ್ ನಿರ್ಮಾಣಕ್ಕೆ  ಇಂದು ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ ಮಾಡಿದರು. ಕೆಂಪೇಗೌಡರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯಬೇಕು.

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ, ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ
ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಬಸವರಾಜ ಬೊಮ್ಮಾಯಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Sep 01, 2022 | 1:01 PM

Share

ಬೆಂಗಳೂರು: ವಿಜಯನಗರ ಸಾಮ್ರಾಜ್ಯವನ್ನು ಸುವರ್ಣಯುಗ ಎನ್ನುತ್ತೇವೆ. ಬೆಂಗಳೂರು ಅಭಿವೃದ್ಧಿಯಲ್ಲಿ ಕೆಂಪೇಗೌಡರ ಪಾತ್ರ ಮಹತ್ವದ್ದು. ಕೆಂಪೇಗೌಡರ ಕೊಡುಗೆ ಸ್ಮರಿಸುವ ಸಲುವಾಗಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದ್ದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ, ಥೀಮ್ ಪಾರ್ಕ್ ನಿರ್ಮಾಣಕ್ಕೆ  ಇಂದು ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ ಮಾಡಿದರು. ಕೆಂಪೇಗೌಡರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯಬೇಕು. ಸೂಕ್ತವಾದದ್ದು ಅತ್ಯಂತ ಎತ್ತರದಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕು ಅಂತಾ ನಮ್ಮ ಯಡಿಯೂರಪ್ಪನವರು ಅಡಿಗಲ್ಲು ಹಾಕಿದ್ರು. ಇವತ್ತು ಅದು ಎದ್ದು ನಿಂತಿದ್ದು, ಅದಕ್ಕೆ ಥೀಮ್ ಪಾರ್ಕ್​ಗೆ ಭೂಮಿ ಪೂಜೆ ಮಾಡಿದ್ದೇವೆ. ನಾಡಿನದ್ಯಾಂತ ಮಣ್ಣನ್ನ ತರಲು ಇವತ್ತು ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.

ಬೆಂಗಳೂರು ಸುತ್ತಲೂ ನಾಲ್ಕು ಸೆಟ್ ಲೈಟ್ ನಗರಗಳನ್ನ ನಿರ್ಮಾಣ ಮಾಡೋಣ. ದೇವನಹಳ್ಳಿಯಲ್ಲೂ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಿ ಟೌನ್ ಶಿಪ್ ಮಾಡುತ್ತೇವೆ. ಇದರ ಎರಡನೇ ಟೈಮ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರ್ತಿದ್ದಾರೆ. ಲಕ್ಷಾಂತರ ಮಂದಿ ಸೇರಿ ಉದ್ಘಾಟನೆ ಮಾಡೋಣ. ಅಶ್ವಥ್ ನಾರಯಣ್ ತುಂಬಾ ಮುತವರ್ಜಿಯಿಂದ ಬಹಳ ತ್ವರಿತವಾಗಿ ಮಾಡುತ್ತಿದ್ದಾರೆ. ಕೆಂಪೇಗೌಡ ಅಂದರೇ ಯುನಿಟಿ ಅವರಡಿಯಲ್ಲಿ ನಾವೆಲ್ಲರು ಮಾಡೋಣ. ಪ್ರಗತಿಯ ಪ್ರತಿಮೆ ಅಂತಾ ಹೆಸರಿಟ್ಟು ಉದ್ಘಾಟನೆ ಮಾಡೋಣ ಎಂದರು.

ಇದನ್ನೂ ಓದಿ: ಬೆಂಗಳೂರು ಈಗ ಐಟಿ ಕ್ಯಾಪಿಟಲ್ ಅಲ್ಲ, ಗುಂಡಿಗಳ ನಗರ: ಕಾಂಗ್ರೆಸ್​ ಶಾಸಕ ಕೃಷ್ಣ ಭೈರೇಗೌಡ ತರಾಟೆ

ಭವ್ಯವಾದ ಇತಿಹಾಸ ನಮ್ಮ ದೇಶದ್ದು ನಮ್ಮ ನಾಡದ್ದು. ಜನಕಲ್ಯಾಣ ಅಂದ್ರೆ ಏನೂ ಅನ್ನೋದು ಕರ್ನಾಟಕದಲ್ಲಿ ಆಗಿದೆ. ಕದಂಬರು, ವಿಜಯನಗರ ಸಾಮ್ರಾಜ್ಯ ಹೀಗೆ ಸುವರ್ಣಯುಗವಾಗಿತ್ತು. ಕೃಷ್ಣದೇವರಾಯ ಕಾಲದಲ್ಲಿ ಅಭಿವೃದ್ಧಿ ಅನ್ನೋದು ಅತ್ಯಂತ ಶ್ರೇಷ್ಠವಾಗಿತ್ತು. ಅಂತಹ ಯುಗಕ್ಕೆ ಸೇರಿದ್ದು ಕೆಂಪೇಗೌಡರು. ಕೆಂಪೇಗೌಡರು ನಾಡಪ್ರಭು ಆಗಿದ್ದೇ ರೋಚಕ. ಅವರು ಕಂದಾಯ ವಸೂಲಿ ಮಾಡದೇ ಬದುಕು ಕಟ್ಟಿಕೊಡೋದನ್ನ ಮಾಡಿದರು. ಕೆರೆ ಕಟ್ಟೆ ನಿರ್ಮಾಣ ಮಾಡಿದರು. ವ್ಯಾಪಾರ ವಹಿವಾಟು ಬಹಳ ಚೆನ್ನಾಗಿತ್ತು. ಅತಿ ಎತ್ತರದ ಸ್ಥಳ ಒಳ್ಳೇ ವಾತವರಣ ಫಲವತ್ತಾದ ಮಣ್ಣಿನಲ್ಲಿ ಬೆಂದಕಾಳೂರನ್ನ ಹುಡುಕಿಕೊಂಡು ಮಾಡಿದರು. ಸಂಪಿಗೆ ಕೆರೆ ಸೇರಿದಂತೆ ಹಲವಾರು ಕೆರೆ ಮಾಡಿದರು. ಅವರ ದೂರದೃಷ್ಟಿ ಆಧುನಿಕ ನಗರವನ್ನ ಕಟ್ಟುವುದು ಆಗಿತ್ತು.

ಮುಂದಿನ ಜನಾಂಗಕ್ಕೆ ಸೂಕ್ತ ವ್ಯವಸ್ಥೆ ಇರುವ ನಾಗರೀಕತೆಯನ್ನ ಕಟ್ಟಬೇಕು ಅನ್ನೋ ದೂರದೃಷ್ಟಿಯಿಂದ ಕೆಂಪೇಗೌಡರು ಕಟ್ಟಿದರು. ನಾಲ್ಕು ದಿಕ್ಕುಗಳಲ್ಲಿ ಕಟ್ಟಿ ಮಧ್ಯೆ ನಗರವನ್ನ ಕಟ್ಟಿದರು. ಒಕ್ಕಲಿಗರ ಪೇಟೆ ಕಟ್ಟಲಿಲ್ಲ, ಸಣ್ಣ ಸಣ್ಣ ಸಮುದಾಯಕ್ಕೆ ಪೇಟೆ ಕಟ್ಟಿಕೊಟ್ಟರು. ಎಲ್ಲರು ಸಮಾನತೆ ಇರಬೇಕು ಎಂದು ಸಾರಿದವರು. ಒಕ್ಕಲಿಗರು ಎಲ್ಲಾಕಡೆ ಒಕ್ಕಲುತನ ಮಾಡಬೇಕು ಎಂದವರು. ಹೀಗಾಗಿ ಅವರ ನೆನಪಿಗಾಗಿ ಏನೆಲ್ಲ ಮಾಡಿದರು ಕಡಿಮೆನೇ. ಇವತ್ತಿನ ರಾಜಕಾರಣಿಗಳು, ಜನರು ಅಧಿಕಾರಿಗಳಿಗೆ ಅವರ ಪ್ರೇರಣೆ ಸಿಗಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಭೂತಾನದ ಒಬ್ಬ ಸಣ್ಣ ರಾಜ ಹೇಳಿದ್ದ, ಪ್ರತಿಯೊಂದು ಮನೆಯಲ್ಲೂ ಖುಷಿಯಾಗಿರಬೇಕು ಅಂತಾ. ಅದನ್ನ ವರ್ಲ್ಡ್ ಬ್ಯಾಂಕ್ ಒಪ್ಪಿಕೊಂಡಿದೆ. ಅದನ್ನ ಅವತ್ತೇ ಕೆಂಪೇಗೌಡರು ಮಾಡಿದ್ದರು. ರೋಮ್​ನಲ್ಲಿ ಒಂದು ದೊಡ್ಡ ಕಲ್ಲಿದೆ. ಅಲ್ಲಿ ಅಲೆಗ್ಸಾಂಡರ್ ಇಲ್ಲೇ ಕುಳಿತಿದ್ದ ಅಂತಾ ಹೇಳ್ತಾರೆ. ನಮ್ಮಲ್ಲಿ ತುಂಬಾ ದೊಡ್ಡ ಇತಿಹಾಸವಿದೆ ಅದನ್ನ ಹೇಳುವ ಕೆಲಸ ಇರಬೇಕು. ಬೆಂಗಳೂರಿಗೆ ದೊಡ್ಡಸ್ಥಾನಮಾನ ಕೆಂಪೇಗೌಡ. ನಾನ್ ಹೇಳಿದೆ ಇನ್ನು 10 ವರ್ಷ ಆದರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ಅಂತಾ ಹೇಳ್ತಾರೆ. ಅದಕ್ಕೆ ನಾವೂ ಕೆಂಪೇಗೌಡರ ಪ್ರತಿಮೆ ಮಾಡಬೇಕು ಅಂತಾ ಹೇಳಿದ್ವಿ ಎಂದು ಹೇಳಿದರು.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಪರ್ಕ

ಸಬ್ ಅರ್ಬನ್ ರೈಲು ಸಂಪರ್ಕ ಕಲ್ಪಿಸಲಾಗುವುದು. ಬೆಂಗಳೂರು ಸುತ್ತಲೂ 4 ಸ್ಯಾಟ್​ಲೈಟ್ ನಗರಗಳ ನಿರ್ಮಾಣ ಮಾಡುವುದು. ದೇವನಹಳ್ಳಿಯಲ್ಲೂ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ. ಇದರ 2ನೇ ಬಾರಿ ಉದ್ಘಾಟನೆಗೆ ಮೋದಿಯವರು ಬರ್ತಿದ್ದಾರೆ ಎಂದು ಹೇಳಿದರು.

ನವೆಂಬರ್​​ನಲ್ಲಿ ಪ್ರಧಾನಿ ಮೋದಿಯಿಂದ ಪ್ರತಿಮೆ ಉದ್ಘಾಟನೆ:

ಥೀಮ್ ಪಾರ್ಕ್​ಗೆ ರಾಜ್ಯದ ಪ್ರತಿ ಹಳ್ಳಿಯಿಂದ ಮಣ್ಣು, ನೀರು ಸಂಗ್ರಹ ಮಾಡಲಾಗುತ್ತಿದೆ. ಕೆಂಪೇಗೌಡರ ಪ್ರತಿಮೆ ಮುಂಭಾಗ ಥೀಮ್ ಪಾರ್ಕ್, ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಪ್ರತಿಮೆ ನಿರ್ಮಾಣವಾಗುತ್ತಿದ್ದು, 64 ಕೋಟಿ ರೂ. ವೆಚ್ಚದಲ್ಲಿ, 98 ಕೆಜಿ ಕಂಚು, 120 ಕೆಜಿ ಸ್ಟೀಲ್ ಬಳಸಿ ಪ್ರತಿಮೆ ನಿರ್ಮಿಸಲಾಗುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರತಿಮೆ ಉದ್ಘಾಟನಾ ಅಭಿಯಾನ ನಡೆಯಲಿದ್ದು, 45 ದಿನಗಳ ಕಾಲ ಅಭಿಯಾನ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 12:59 pm, Thu, 1 September 22

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ