ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕನೊಬ್ಬ ಯುವತಿಗೆ ಮೆಸೇಜ್ ಮಾಡಿದ ಎಂಬ ಕಾರಣಕ್ಕೆ ಯುವತಿಯ ಮಾವ ಯುವಕನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎನ್ನಲಾದ ಸುದ್ದಿ ಹರಿದಾಡುತ್ತಿತ್ತು. ಈಗ ಇದೇ ರೀತಿಯ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ. ಯುವತಿಗೆ ಮೆಸೇಜ್ ಮಾಡಿದ ಎಂದು ಯುವತಿಯ ಸಹೋದರ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಗೋವಿಂದರಾಜನಗರದಲ್ಲಿ ಸಿದ್ಧಾರ್ಥ್ ಎಂಬ ಯುವಕನ ಮೇಲೆ ಚೇತನ್ ಮತ್ತು ಆತನ ಗೆಳೆಯರು ಹಲ್ಲೆ ನಡೆಸಿ ಕೃತ್ಯ ಎಸಗಿದ್ದಾರೆ. ನಡು ರಸ್ತೆಯಲ್ಲಿ ಸಿದ್ಧಾರ್ಥ್ನನ್ನು ನೆಲಕ್ಕೆ ಬೀಳಿಸಿ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿದ್ಧಾರ್ಥ್, ಕೀರ್ತಿ ಎಂಬ ಯುವತಿಯ ಜೊತೆ ಕಳೆದ ಒಂದು ವರ್ಷದಿಂದ ಇನ್ಸ್ಟಾಗ್ರಾಮ್ನಲ್ಲಿ ಚಾಟ್ ಮಾಡ್ತಿದ್ದ. ಈ ವಿಚಾರ ತಿಳಿದ ಯುವತಿ ಅಣ್ಣ ಚೇತನ್, ಸಿದ್ಧಾರ್ಥ್ಗೆ ಕರೆ ಮಾಡಿ ನಿಂದಿಸಿ ಮಾತನಾಡಬೇಕು ಸಿಗು ಎಂದಿದ್ದಾನೆ. ಅದರಂತೆ ಸಿದ್ಧಾರ್ಥ್ ಪಿಜಿ ಬಳಿ ಚೇತನ್ ಮತ್ತು ಆತನ ಗೆಳೆಯರು ಬಂದಿದ್ದಾರೆ. ಬಳಿಕ ಮಾತುಕತೆ ನಡೆದಿದ್ದು ಚೇತನ್ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿ ಎಸ್ಕೆಪ್ ಆಗಿದ್ದಾರೆ. ಹಲ್ಲೆಗೊಳಗಾದ ಸಿದ್ಧಾರ್ಥ್ ಗೋವಿಂದರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಯುವತಿಗೆ ಮೆಸೇಜ್ ಮಾಡಿದ್ದೇ ಯುವಕನಿಗೆ ಕಂಟಕವಾಯ್ತಾ? ಯುವತಿಯ ಸೋದರ ಮಾವನಿಂದ ಕೊಲೆ ಆರೋಪ, ಯುವಕ ನಾಪತ್ತೆ
ಕಳೆದ ತಿಂಗಳ 26ರಂದು ದೇವನಹಳ್ಳಿಯಿಂದ ಕೋರಮಂಗಲಕ್ಕೆ ತೆರಳುತಿದ್ದ ಫಾರ್ಚ್ಯನರ್ ಕಾರ್ ನಲ್ಲಿ ಬಂದ ಆರೋಪಿ ಅಪಘಾತ ಮಾಡಿ ಎಸ್ಕೇಪ್ ಆಗಿದ್ದ. ಈ ಅಪಘಾತದಲ್ಲಿ ವೆಂಕಟೇಶ್ ಎಂಬುವವರು ಮೃತಪಟ್ಟಿದ್ದರು. ಘಟನೆ ಸಂಬಂಧ ಸದಾಶಿವನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಸದ್ಯ ಈಗ ಆರೋಪಿಯನ್ನು ಬಂಧಿಸಿದ್ದಾರೆ. ಅಪಘಾತವಾದ 11 ದಿನಗಳ ಬಳಿಕ ಕಾರು ಪತ್ತೆಯಾಗಿದೆ. ರವಿ ಬಂಧಿತ ಆರೋಪಿ. ಈತ ಉದ್ಯಮಿ ನಾಗಾರ್ಜುನ ಎಂಬುವವರಿಗೆ ಸೇರಿದ ಕಾರಿನ ಚಾಲಕ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ