ಜೈಲಿನೊಳಗೂ ಗೂಂಡಾಗಿರಿ: ಖೈದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ

ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೂ ಗೂಂಡಾಗಿರಿ ಶುರುವಾಗಿದೆ. ಖೈದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಭೀಕರವಾಗಿ ಹಲ್ಲೆಗೊಳಗಾದ ಖೈದಿ ಪರಪ್ಪನ ಅಗ್ರಹಾರದ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭರತ್ ಮತ್ತು ಅವನ ಗ್ಯಾಂಗ್ ಹಲ್ಲೆ ಮಾಡಿದೆ. 8 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಜೈಲಿನೊಳಗೂ ಗೂಂಡಾಗಿರಿ: ಖೈದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ
ಬೆಂಗಳೂರು ಕೇಂದ್ರ ಕಾರಾಗೃಹ
Edited By:

Updated on: Aug 24, 2025 | 5:06 PM

ಬೆಂಗಳೂರು, ಆಗಸ್ಟ್​ 24: ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ (Bengaluru Central Jail) ಭರತ್ ಮತ್ತು ಈತನ ಗ್ಯಾಂಗ್​​​ ಖೈದಿ ಅನಿಲ್​​​ ಕುಮಾರ್ ಎಂಬುವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದೆ. ಆಗಸ್ಟ್​ 2ರ ಮಧ್ಯಾಹ್ನ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖೈದಿ ಅನಿಲ್​​​ ಕುಮಾರ್​ ಪ್ರಕರಣವೊಂದರ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್​ ಕೊಠಡಿಗೆ ತೆರಳುತ್ತಿದ್ದರು. ಈ ವೇಳೆ ಭರತ್ ಮತ್ತು ಈತನ ಗ್ಯಾಂಗ್​​​ ಕ್ವಾರಂಟೈನ್​​ ಜೈಲಿನ ಬ್ಯಾರಕ್​​-2ರ ಹಿಂಭಾಗದ ಕೊಠಡಿ 6ರಲ್ಲಿ ನಮ್ಮನ್ನು ನೋಡಿ ಉಗಿತಿಯಾ ಅಂತ ಮಾರಕ ಆಯುಧದಿಂದ ಅನಿಲ್​ ಕುಮಾರ್ ಮೇಲೆ ಹಲ್ಲೆ ಮಾಡಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಖೈದಿ ಅನಿಲ್​ ಕುಮಾರ್ ಅವರನ್ನು ಪರಪ್ಪನ ಅಗ್ರಹಾರ ಜೈಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಭರತ್ ಮತ್ತು ಗ್ಯಾಂಗ್​ ಸೇರಿದಂತೆ 8 ಮಂದಿ ವಿರುದ್ಧ ಬಿಎನ್​ಎಸ್​​ ಸೆಕ್ಷನ್​ 118(1), 3(5)ಅಡಿಯಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖೈದಿ ಅನೀಲ್​ ಕುಮಾರ್ ಕೊಲೆ ಪ್ರಕರಣದಲ್ಲಿ 2023ರಲ್ಲಿ ಜೈಲು ಸೇರಿದ್ದಾನೆ. ಭರತ್​ ಮತ್ತು ಈತನ ಗ್ಯಾಂಗ್​ 2025ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:05 pm, Sun, 24 August 25