ಬಿ.ಎಸ್.ಯಡಿಯೂರಪ್ಪಗೆ ಮತ್ತೆ ಕಾಡಿತಾ ಆಷಾಢದ ಆಪತ್ತು?

| Updated By: sandhya thejappa

Updated on: Jul 22, 2021 | 2:16 PM

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2011ರ ಜುಲೈ 31ರಂದು ರಾಜೀನಾಮೆ ಕೊಟ್ಟಿದ್ದರು. 2011 ಜುಲೈ 28ರಂದು ರಾಜೀನಾಮೆ ನೀಡಲು ಹೈಕಮಾಂಡ್ ಸೂಚಿಸಿತ್ತು. ಅಂದು ಲೋಕಾಯುಕ್ತ ವರದಿ ಸಲ್ಲಿಕೆಯ ಬೆನ್ನಲ್ಲೇ ರಾಜೀನಾಮೆಗೆ ಸೂಚನೆ ನೀಡಲಾಗಿತ್ತು.

ಬಿ.ಎಸ್.ಯಡಿಯೂರಪ್ಪಗೆ ಮತ್ತೆ ಕಾಡಿತಾ ಆಷಾಢದ ಆಪತ್ತು?
ಬಿ.ಎಸ್​.ಯಡಿಯೂರಪ್ಪ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು (ಜುಲೈ 22) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗೆಯೊಂದಿಗೆ ಯಡಿಯೂರಪ್ಪನವರ ಹಿಂದಿನ ರಾಜಕೀಯ ದಾರಿಯನ್ನು ಗಮನಿಸಿದಾಗ ಅವರಿಗೆ ಆಷಾಢ ಮಾಸ ಮತ್ತೆ ಕಾಡಿತಾ ಎಂಬ ಪ್ರಶ್ನೆ ಮೂಡುತ್ತದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2011ರ ಜುಲೈ 31ರಂದು ರಾಜೀನಾಮೆ ಕೊಟ್ಟಿದ್ದರು. 2011 ಜುಲೈ 28ರಂದು ರಾಜೀನಾಮೆ ನೀಡಲು ಹೈಕಮಾಂಡ್ ಸೂಚಿಸಿತ್ತು. ಅಂದು ಲೋಕಾಯುಕ್ತ ವರದಿ ಸಲ್ಲಿಕೆಯ ಬೆನ್ನಲ್ಲೇ ರಾಜೀನಾಮೆಗೆ ಸೂಚನೆ ನೀಡಲಾಗಿತ್ತು. ಆಗ ಆಷಾಢ ಮುಗಿದ ಕೂಡಲೇ ರಾಜೀನಾಮೆ ಕೊಡುತ್ತೇನೆ ಅಂತ ಬಿಎಸ್​ವೈ ಹೇಳಿದ್ದರು. ಅದರಂತೆ ಜುಲೈ 30ರಂದು ಆಷಾಢ ಮುಗಿದ ಮೇಲೆ ರಾಜೀನಾಮೆ ನೀಡಿದ್ದರು.

ಈಗಲೂ ಆಷಾಢ ಮುಗಿಯುತ್ತಿದ್ದಂತೆ ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯುವ ಸಾಧ್ಯತೆಯಿದೆ. ಆಷಾಢ ಕಾರಣವನ್ನು ಮುಂದಿಟ್ಟುಕೊಂಡು ಆಗಸ್ಟ್ 9 ರವರೆಗೆ ಸಿಎಂ ಆಗಿ ಯಡಿಯೂರಪ್ಪ ಮುಂದುವರಿಯಬಹುದು. ಆಷಾಢ ಮುಗಿದ ಮೇಲೆ ರಾಜೀನಾಮೆ ಕೊಡುವ ಸಾಧ್ಯತೆ ಇದೆ.

ಯಡಿಯೂರಪ್ಪ ಕೊಟ್ಟ ಸುಳಿವೇನು?
ಬೆಂಗಳೂರು ಸಮೀಪ ಕಾಚರಕನಹಳ್ಳಿಯಲ್ಲಿ ನಡೆದ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡ ಬಿ.ಎಸ್.ಯಡಿಯೂರಪ್ಪ ಪೂಜೆ ಮುಗಿಸಿ ಹೊರಬಂದು, ದೊಡ್ಡ ಘೋಷಣೆ ಮಾಡಿದರು. ಈ ತಿಂಗಳು 25 ರಂದು ಹೈಕಮಾಂಡ್​ನಿಂದ ಸೂಚನೆ ಬರುತ್ತೆ. ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಮಠಾಧೀಶರಿಗೆ ಕೈ ಮುಗಿದು, ಕೊಟ್ಟ ಪ್ರೀತಿಗೆ ಚಿರ ಋಣಿ. ಪಕ್ಷ ಬಲಪಡಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಮುಂದಿರುವ ದಾರಿ. ಅದಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇನೆ. ಎಲ್ಲರೂ ಸಹಕರಿಸಿ ಎಂದು ಯಡಿಯೂರಪ್ಪ ಮನವಿ ಮಾಡಿದರು.

ಇದನ್ನೂ ಓದಿ

ನಾಳಿದ್ದು ರಾಜಿನಾಮೆ ನೀಡ್ತಾರಂತೆ ಆದ್ರೆ ಸಿಎಂ ಯಡಿಯೂರಪ್ಪ ತರಾತುರಿಯಲ್ಲಿ ಸಾವಿರಾರು ಕೋಟಿ ಯೋಜನೆಗೆ ಅನುಮತಿ ನೀಡ್ತಿದ್ದಾರೆ: ಹೆಚ್​ಡಿ ಕುಮಾರಸ್ವಾಮಿ ಆತಂಕ

BS Yediyurappa: ಸಿಎಂ ಹುದ್ದೆಗೆ ರಾಜೀನಾಮೆ? ಸುಳಿವು ನೀಡಿದ ಬಿಎಸ್ ಯಡಿಯೂರಪ್ಪ

(BS Yediyurappa is likely to resign as chief minister after Ashada sha is over)