AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಬದಿ ತರಕಾರಿ ಮಾರುವ ವ್ಯಕ್ತಿ ವಿರುದ್ಧ ಸುಳ್ಳು ಗಾಂಜಾ ಕೇಸ್ ದಾಖಲಿಸಿದ ಆರ್​ಎಂಸಿ ಯಾರ್ಡ್ ಪೊಲೀಸರು!

RMC ಯಾರ್ಡ್ ಪೊಲೀಸ್ ಇನ್ಸ್‌ಪೆಕ್ಟರ್ ಪಾರ್ವತಮ್ಮ ಮತ್ತು PSI ಆಂಜಿನಪ್ಪ, ರಸ್ತೆ ಬದಿ ತರಕಾರಿ ಮಾರುವ ಶಿವರಾಜ್ ಎಂಬ ಅಮಾಯಕನ ಮೇಲೆ ಸುಳ್ಳು ಗಾಂಜಾ ಕೇಸ್ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರಸ್ತೆ ಬದಿ ತರಕಾರಿ ಮಾರುವ ವ್ಯಕ್ತಿ ವಿರುದ್ಧ ಸುಳ್ಳು ಗಾಂಜಾ ಕೇಸ್ ದಾಖಲಿಸಿದ ಆರ್​ಎಂಸಿ ಯಾರ್ಡ್ ಪೊಲೀಸರು!
ಇನ್ಸ್‌ಪೆಕ್ಟರ್ ಪಾರ್ವತಮ್ಮ ಮತ್ತು PSI ಆಂಜಿನಪ್ಪ
TV9 Web
| Updated By: ಆಯೇಷಾ ಬಾನು|

Updated on: Jul 22, 2021 | 1:01 PM

Share

ಬೆಂಗಳೂರು: ಪಿಂಚಣಿದಾರರ ಸ್ವರ್ಗ ಎಂಬ ಅನ್ವರ್ಥ ಗಳಿಸಿದ್ದ ರಾಜಧಾನಿ ಬೆಂಗಳೂರು ಮಾದಕ ವಸ್ತುಗಳ ಜಾಲದಲ್ಲಿ ಸಿಲುಕಿ ಕುಖ್ಯಾತಿ ಗಳಿಸುತ್ತಿದೆ. ಇದಕ್ಕೆ ಹೆಚ್ಚಾಗಿ ವಿದೇಶಿಗರ ಕುಮ್ಮಕ್ಕು ಸಿಗುತ್ತಿರುವುದು ಇತ್ತೀಚಿನ ಪ್ರಕರಣಗಳಲ್ಲಿ ವೇದ್ಯವಾಗಿದೆ. ಆದರೆ ಇದರ ವಿರುದ್ಧ ಕಾರ್ಯಾಚರಣೆ ನಡೆಸಬೇಕಾದ ಪೊಲೀಸರು ಬೀದಿ ಬದಿ ವ್ಯಾಪಾರಿಗಳ ಮೇಲೆ ಅದರಲ್ಲೂ ತರಕಾರಿ ಮಾರುವವರ ಮೇಲೆ ಸುಳ್ಳು ಕೇಸ್ ದಾಖಲಿಸಿರುವುದು ಬೆಳಕಿಗೆ ಬಂದಿದೆ.

RMC ಯಾರ್ಡ್ ಪೊಲೀಸ್ ಇನ್ಸ್‌ಪೆಕ್ಟರ್ ಪಾರ್ವತಮ್ಮ ಮತ್ತು PSI ಆಂಜಿನಪ್ಪ, ರಸ್ತೆ ಬದಿ ತರಕಾರಿ ಮಾರುವ ಶಿವರಾಜ್ ಎಂಬ ಅಮಾಯಕನ ಮೇಲೆ ಸುಳ್ಳು ಗಾಂಜಾ ಕೇಸ್ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮನೆ ಬಳಿ ಕುಳಿತಿದ್ದ ಶಿವರಾಜ್ನನ್ನು, ಪಿಐ ಪಾರ್ವತಮ್ಮ ಪೊಲೀಸ್ ಠಾಣೆಗೆ ಕರೆದೊಯ್ದು ಗಾಂಜಾ ಸೇದಿದ್ದೀಯಾ ಎಂದು ಪ್ರಶ್ನಿಸಿದ್ದರು. ಆದ್ರೆ ಗಾಂಜಾ ಸೇವನೆ ಮಾಡಿಲ್ಲ ಎಂದು ಶಿವರಾಜ್ ಹೇಳಿಕೆ ನೀಡಿದ್ದ. ಈ ವೇಳೆ ಗಾಂಜಾ ಸೇವಿಸಿಲ್ಲವೆಂದರೆ ನಿನ್ನ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಇಬ್ಬರು ಪೊಲೀಸರೇ ಸೇರಿ ಸಿಗರೇಟ್‌ನಲ್ಲಿ ಗಾಂಜಾ ಹಾಕಿ ಶಿವರಾಜ್‌ಗೆ ಸೇದಿಸಿದ್ದರು. ಬಳಿಕ ಮೆಡಿಕಲ್ ಚೆಕಪ್ ಮಾಡಿಸಿ ಕೇಸ್ ದಾಖಲಿಸಿದ್ದರು.

ಈ ರೀತಿ RMC ಯಾರ್ಡ್ ಪೊಲೀಸರು ಗಾಂಜಾ ಪ್ರಕರಣ ಹಾಕಿದ್ದು ಪೊಲೀಸರ ನಡೆಯಿಂದ ಬೇಸರಗೊಂಡು ಶಿವರಾಜ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಸದ್ಯ ಶಿವರಾಜ್ ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿ ಶಿವರಾಜ್ ಜೀವ ಉಳಿಸಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದು ಶಿವರಾಜ್ ವಿಚಾರಣೆ ವೇಳೆ RMC ಯಾರ್ಡ್ ಪೊಲೀಸರ ಕೃತ್ಯ ಬಯಲಾಗಿದೆ. ಬಲವಂತವಾಗಿ ಗಾಂಜಾ ನೀಡಿ ಕೇಸ್ ದಾಖಲು ಮಾಡಿರುವುದು ತಿಳಿದು ಬಂದಿದೆ. ಸದ್ಯ ಈಗ ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾರಿಂದ ಆಂತರಿಕ ತನಿಖೆ ನಡೆಯುತ್ತಿದೆ.

ಡಿಸಿಪಿಯವರು ಮಾಹಿತಿ ಪಡೆಯಲು ಪಿಎಸ್‌ಐ ಆಂಜನಪ್ಪರನ್ನ ಕಚೇರಿಗೆ ಕರೆಸಿಕೊಂಡಿದ್ದಾರೆ. ಮಾಹಿತಿ ನೀಡುವಾಗ ಪಿಎಸ್‌ಐ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಾರೆ. ಎಸ್ಐ ನಡೆಯಿಂದ ಅನುಮಾನಗೊಂಡು ಬೇರೊಬ್ಬ ಸಿಬ್ಬಂದಿಯಿಂದ ಪಿಎಸ್ಐ ಚೆಕ್ ಮಾಡಿಸಿದ್ದಾರೆ. ಈ ವೇಳೆ ಡಿಸಿಪಿ ವಿಚಾರಣೆಯನ್ನೆ ಮೊಬೈಲ್ನಲ್ಲಿ ಆಡಿಯೋ ರೆಕಾರ್ಡಿಂಗ್ ಮಾಡಿದ್ದು ಪತ್ತೆಯಾಗಿದೆ. ಡಿಸಿಪಿ ಕಚೇರಿಗೆ ಬಂದಿದ್ದ ಸಮಯದಿಂದ ಆಂಜನಪ್ಪ ಮೊಬೈಲ್‌ನಲ್ಲಿ ಆಡಿಯೋ ರೆಕಾರ್ಡ್ ಮಾಡಿದ್ದು ಪತ್ತೆಯಾಗಿದೆ.

ಸದ್ಯ ಪಿಎಸ್‌ಐ ಆಂಜಿನಪ್ಪ, ಇನ್ಸ್‌ಪೆಕ್ಟರ್ ಪಾರ್ವತಮ್ಮ ಗಾಂಜಾ ಸೇವಿಸಿದ್ದ ಇಬ್ಬರು ಪೊಲೀಸರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಡಿಸಿಪಿ ವರದಿ ನೀಡಲಿದ್ದಾರೆ. ಇನ್ನು ತನಿಖೆ ವೇಳೆ ಪಿಐ ಪಾರ್ವತಮ್ಮ ಮತ್ತೊಂದು ಕೇಸ್ ಬಯಲಾಗಿದೆ. ಡ್ರೈ ಫ್ರೂಟ್ಸ್ ಉದ್ಯಮಿಗೆ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿ ಪಿಐ ಪಾರ್ವತಮ್ಮ 12 ಲಕ್ಷ ರೂ. ವಸೂಲಿ ಮಾಡಿದ್ದು ಬೆಳಕಿಗೆ ಬಂದಿದೆ. ಉದ್ಯಮಿ ತಮ್ಮ ಬಳಿ ಹಣ ಸುಲಿಗೆ ಮಾಡಿರುವ ಬಗ್ಗೆ ಡಿಸಿಎಂಗೆ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲನೆ ಮಾಡುವಂತೆ ಡಿಸಿಪಿಗೆ ಡಿಸಿಎಂ ಸೂಚಿಸಿದ್ದರು. ಪರಿಶೀಲನೆ ವೇಳೆ 12 ಲಕ್ಷ ರೂ. ಪಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ: ಇಬ್ಬರ ಹಣೆಬರಹವೂ ನಿರ್ಧಾರವಾಗಲಿದೆ ಒಂದೇ ದಿನ; ಹೇಗೆ ಗೊತ್ತಾ?