ಯಡಿಯೂರಪ್ಪ ರಾಜೀನಾಮೆ ಸುಳಿವಿಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ

ಟಿವಿ9 ಜೊತೆ ಮಾತನಾಡಿದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ, ಬಿಜೆಪಿ ಹೈಕಮಾಂಡ್ ಅತ್ಯುತ್ತಮ ನಿರ್ಧಾರ ಕೈಗೊಳ್ಳುತ್ತದೆ. ಹೈಕಮಾಂಡ್ ನಿರ್ಧಾರ ಉತ್ತಮವಾಗಿದೆ ಅಂತ ಅನಿಸುತ್ತೆ. ಎಲ್ಲರ ಕಷ್ಟದಿಂದಲೇ ಬಿಜೆಪಿ ಈಗ ಅಧಿಕಾರಕ್ಕೆ ಬಂದಿದೆ. ಬಳ್ಳಾರಿ ಜಿಲ್ಲೆಗೆ ಸ್ಥಾನಮಾನ ಸಿಗದ್ದಕ್ಕೆ ಜನತೆಗೆ ಬೇಸರವಾಗಿದೆ.

ಯಡಿಯೂರಪ್ಪ ರಾಜೀನಾಮೆ ಸುಳಿವಿಗೆ ಬಿಜೆಪಿ ನಾಯಕರ ಪ್ರತಿಕ್ರಿಯೆ
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಸಿಎಂ ಯಡಿಯೂರಪ್ಪ ಬದಲಾವಣೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಭೈರತಿ ಬಸವರಾಜ್, ನನಗಂತೂ ಸಿಎಂ ಬಿಎಸ್​ವೈ ರಾಜೀನಾಮೆ ವಿಚಾರ ಗೊತ್ತಿಲ್ಲ. ನನಗೆ ಏನೂ ಮಾಹಿತಿ ಇಲ್ಲ. ಈ ಬಗ್ಗೆ ನಮಗೆ ಯಾವ ಆತಂಕವೂ ಇಲ್ಲ ಅಂತ ಗರಂ ಆದರು. ಇನ್ನು ಡಿಸಿಎಂ ಅಶ್ವತ್ಥ್ ನಾರಾಯಣ್ ಮಾತನಾಡಿ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಿದ್ದೇವೆ. ಬಿ.ಎಸ್.ಯಡಿಯೂರಪ್ಪ ಈಗ ಮುಖ್ಯಮಂತ್ರಿಗಳಾಗಿದ್ದಾರೆ. ಬಿಎಸ್​ವೈ ನಮ್ಮ ನಾಯಕ, ಬದಲಾವಣೆ ಪ್ರಶ್ನೆ ಉದ್ಭವಿಸಲ್ಲ ಅಂತ ತಿಳಿಸಿದ್ದಾರೆ.

ಟಿವಿ9 ಜೊತೆ ಮಾತನಾಡಿದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ, ಬಿಜೆಪಿ ಹೈಕಮಾಂಡ್ ಅತ್ಯುತ್ತಮ ನಿರ್ಧಾರ ಕೈಗೊಳ್ಳುತ್ತದೆ. ಹೈಕಮಾಂಡ್ ನಿರ್ಧಾರ ಉತ್ತಮವಾಗಿದೆ ಅಂತ ಅನಿಸುತ್ತೆ. ಎಲ್ಲರ ಕಷ್ಟದಿಂದಲೇ ಬಿಜೆಪಿ ಈಗ ಅಧಿಕಾರಕ್ಕೆ ಬಂದಿದೆ. ಬಳ್ಳಾರಿ ಜಿಲ್ಲೆಗೆ ಸ್ಥಾನಮಾನ ಸಿಗದ್ದಕ್ಕೆ ಜನತೆಗೆ ಬೇಸರವಾಗಿದೆ. ಈ ಕುರಿತು ನಾನು ನನ್ನದೇ ಆಕ್ರೋಶ ವ್ಯಕ್ತಪಡಿಸಿದ್ದೇನೆ. ನನ್ನ ಸೋದರನನ್ನು ಬಳಸಿಕೊಂಡರು, ನಂತರ ಕೈಬಿಟ್ಟರು. ಕಾಲಚಕ್ರ ಹೀಗೆಯೇ ಇರುವುದಿಲ್ಲ. ತಿರುಗುತ್ತಾ ಇರುತ್ತದೆ. ರಾಜಕೀಯದಲ್ಲಿ ತಾಳಿದವನು ಬಾಳಿಯಾನು ಅಂತ ಅಂದುಕೊಂಡಿದ್ದೇನೆ. ರಾಮುಲುಗೆ ಉತ್ತಮ ಸ್ಥಾನಮಾನ ಸಿಗುವ ನಂಬಿಕೆ ನನಗಿದೆ ಎಂದು ಹೇಳಿದರು.

ಸಿಎಂ ಹೇಳಿದ್ಮೇಲೆ ಇನ್ನೇನಿದೆ, ನಮಗೆ ಆತಂಕವಿಲ್ಲ ಅಂತ ಸಚಿವ ಎಂಟಿಬಿ ನಾಗರಾಜ್ ಹೇಳಿದರು. ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರು ನಾವು ಸಿದ್ಧರಿದ್ದೇವೆ. ನಮಗೆ ಆತಂಕವಿಲ್ಲ, ನಾವು ಸಮಾನಾಂತರವಾಗಿದ್ದೇವೆಂದು ಹೇಳಿದರು.

ನಮಗೆ ಸಿಎಂ ಯಡಿಯೂರಪ್ಪನವರೇ ಹೈಕಮಾಂಡ್. ದೆಹಲಿಗೆ ಹೋಗಬೇಕಾದ ಸಂದರ್ಭ ಬಂದರೆ ಹೋಗುತ್ತೇವೆ. ನಮ್ಮ ಸಚಿವ ಸ್ಥಾನಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲವೆಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. ಪಕ್ಷದಲ್ಲಿ ನಿಷ್ಠೆ, ನೀತಿ ಪಾಲಿಸಲು ನಾವು ಬದ್ಧರಿದ್ದೇವೆ. ಸಿಎಂ ಅವರೇ ವರಿಷ್ಠರ ಸೂಚನೆ ಪಾಲಿಸುವೆ ಎಂದಿದ್ದಾರೆ. ವರಿಷ್ಠರು ಏನು ನಿರ್ಧಾರ ಮಾಡಿದ್ದಾರೆಂದು ನಮಗೆ ಗೊತ್ತಿಲ್ಲ. ಕೇಂದ್ರದ ನಿರ್ಧಾರ ಸಿಎಂ ಮತ್ತು ವರಿಷ್ಠರಿಗೆ ಮಾತ್ರ ಗೊತ್ತು ಎಂದು ಕಂದಾಯ ಸಚಿವ ಅಶೋಕ್ ಹೇಳಿದರು.

ಇದನ್ನೂ ಓದಿ

ಸಿಎಲ್​ಪಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆಯೇ ಚರ್ಚೆ: ‘ಸಿಎಂ ಯಡಿಯೂರಪ್ಪ ಬದಲಾದರೆ ಅದನ್ನು ನಾವು ಪೂರಕವಾಗಿ ಬಳಸಿಕೊಳ್ಳಬೇಕು’

BS Yediyurappa: ಸಿಎಂ ಹುದ್ದೆಗೆ ರಾಜೀನಾಮೆ? ಸುಳಿವು ನೀಡಿದ ಬಿಎಸ್ ಯಡಿಯೂರಪ್ಪ

(BJP Leader react to BS Yediyurappa hints for his resignation to Chief Minister Post)