ಸಿಎಲ್ಪಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆಯೇ ಚರ್ಚೆ: ‘ಸಿಎಂ ಯಡಿಯೂರಪ್ಪ ಬದಲಾದರೆ ಅದನ್ನು ನಾವು ಪೂರಕವಾಗಿ ಬಳಸಿಕೊಳ್ಳಬೇಕು’
ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಬಿಜೆಪಿಯಲ್ಲಿನ ಈ ಬೆಳವಣಿಗೆ ಕಾಂಗ್ರೆಸ್ಗೆ ಪೂರಕವಾಗಲಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಈ ಬೆಳವಣಿಗೆ ನಮಗೆ ಪೂರಕವಾಗಲಿದೆ.
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಇಂದು (ಜುಲೈ 22) ಸುಳಿವು ನೀಡಿದ್ದಾರೆ. ಈ ವಿಷಯದ ಬಗ್ಗೆಯೇ ಸಿಎಲ್ಪಿ (Congress Legislature Party meeting) ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಜೆಪಿ ಮುಂದಾಗಿದೆ. ಇದನ್ನು ನಾವು ಸಂಘಟನೆಗೆ ಪೂರಕವಾಗಿ ಬಳಸಿಕೊಳ್ಳಬೇಕು. ಬಿಎಸ್ವೈ ಇಲ್ಲದಿದ್ದರೆ ಬಿಜೆಪಿ ಇಲ್ಲ ಅನ್ನೋದು ಸಾಬೀತಾಗಿದೆ ಎಂದು ಶಾಸಕರಿಗೆ ಸಿಎಲ್ಪಿ ನಾಯಕ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಬಿಜೆಪಿಯಲ್ಲಿನ ಈ ಬೆಳವಣಿಗೆ ಕಾಂಗ್ರೆಸ್ಗೆ ಪೂರಕವಾಗಲಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಈ ಬೆಳವಣಿಗೆ ನಮಗೆ ಪೂರಕವಾಗಲಿದೆ. ಇದನ್ನ ಕಾಂಗ್ರೆಸ್ ಶಾಸಕರು ಅನುಕೂಲವಾಗಿ ಬಳಸಿಕೊಳ್ಳಬೇಕು ಅಂತ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಏನು ಅಲ್ಲ ಅನ್ನೋದು ಹಲವು ಬಾರಿ ಸಾಬೀತಾಗಿದೆ. ನಾವಾಗಿ ಅವರ ವಿರುದ್ಧ ಹೋರಾಟ ಮಾಡಿ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತಿಲ್ಲ. ಬಿಜೆಪಿ ಕೇಂದ್ರ ನಾಯಕರೇ ಅವರನ್ನ ಕೆಳಗಿಳಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ಮುಂದಿನ ಚುನಾವಣೆಯಲ್ಲಿ ಸರ್ಕಾರದ ವೈಫಲ್ಯಗಳ ಜತೆಗೆ ಯಡಿಯೂರಪ್ಪ ಅವರನ್ನ ತೆಗೆಯಲು ಮುಂದಾಗಿದ್ದು ವರದಾನವಾಗುತ್ತೆ. ಇದನ್ನ ಕ್ಷೇತ್ರದಲ್ಲಿ ಇರೋ ಶಾಸಕರು ಅನುಕೂಲವಾಗಿ ಬಳಸಿಕೊಳ್ಳಬೇಕು. ಜನರ ಸಂಕಷ್ಟಗಳಿಗೆ ಜೊತೆಯಾಗುವುದರ ಜೊತೆಗೆ ಯಡಿಯೂರಪ್ಪ ವಿಚಾರ ಪ್ರಸ್ತಾಪ ಮಾಡಬೇಕು ಅಂತ ಸಿಎಲ್ಪಿ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ
CM BS Yediyurappa: ಇವತ್ತಿನ ಕ್ಯಾಬಿನೆಟ್ ಸಭೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಕೊನೆಯ ಸಭೆ?
BS Yediyurappa: ಸಿಎಂ ಹುದ್ದೆಗೆ ರಾಜೀನಾಮೆ? ಸುಳಿವು ನೀಡಿದ ಬಿಎಸ್ ಯಡಿಯೂರಪ್ಪ
(Congress Legislative Party Meeting decides to utilize situation after CM BS Yediyurappa resignation)
Published On - 12:19 pm, Thu, 22 July 21