ಯಡಿಯೂರಪ್ಪನವರಿಗೆ ಮಠಾಧೀಶರ ಬೆಂಬಲ ಸ್ವಾಗತಾರ್ಹ..ಆದರೆ ಅವರಿಗೆ ಮುಜುಗರ ಉಂಟು ಮಾಡಬಾರದು: ಕೆ.ಎಸ್.ಈಶ್ವರಪ್ಪ
CM BS Yediyurappa: ಬಿ.ಎಸ್.ಯಡಿಯೂರಪ್ಪನವರು ಕೇಂದ್ರದ ನಾಯಕರ ಮಾತುಗಳನ್ನು ಕೇಳುತ್ತೇನೆ ಎಂದಿದ್ದಾರೆ. ಮಠಾಧೀಶರು ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಯಡಿಯೂರಪ್ಪನವರ ಮಾತನ್ನು ನಾವು ಕೇಳಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.
ರಾಜ್ಯರಾಜಕಾರಣ (Karnataka Politics)ದಲ್ಲೀಗ ಬಿ.ಎಸ್.ಯಡಿಯೂರಪ್ಪ (B.S.Yediyurappa) ರಾಜೀನಾಮೆ ಸಂಬಂಧ ವಿಚಾರ ಬಿಟ್ಟು ಬೇರೇನೂ ಚರ್ಚೆಯಾಗುತ್ತಿಲ್ಲ. ಅದರಲ್ಲೂ ಬಿಎಸ್ವೈ ಬೆಂಬಲಕ್ಕೆ ವಿವಿಧ ಲಿಂಗಾಯತ ಮಠಾಧೀಶರು ನಿಂತಿದ್ದು, ರಾಜಕಾರಣದ ಜತೆ ಖಾವಿಯೂ ಸೇರಿದಂತಾಗಿದೆ. ಹಾಗೇ ಬಿ.ಎಸ್.ಯಡಿಯೂರಪ್ಪ ಕೂಡ ತಮಗೆ ಮಠಾಧೀಶರ ಬೆಂಬಲ ಸಿಕ್ಕಿದ್ದು ತುಂಬ ಖುಷಿಯ ವಿಚಾರ. ಆದರೆ ಜು.25ರಂದು ಕೊನೇ ನಿರ್ಣಯವನ್ನು ಹೈಕಮಾಂಡ್ ಕೊಡಲಿದ್ದು, ಅದರಂತೆ ನಡೆಯುತ್ತೇನೆ ಎಂದು ಹೇಳಿಬಿಟ್ಟಿದ್ದಾರೆ. ಹಾಗೇ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಿವಿಧ ಮಠಗಳ ಸ್ವಾಮೀಜಿಗಳು ಬೆಂಬಲ ಕೊಟ್ಟಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ (K.S.Eshwarapp), ನಾವೆಲ್ಲರೂ ಯಡಿಯೂರಪ್ಪನವರ ಮಾತಿಗೆ ಬೆಲೆ ಕೊಡಬೇಕು ಎಂದಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ಕೇಂದ್ರದ ನಾಯಕರ ಮಾತುಗಳನ್ನು ಕೇಳುತ್ತೇನೆ ಎಂದಿದ್ದಾರೆ. ಮಠಾಧೀಶರು ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಯಡಿಯೂರಪ್ಪನವರ ಮಾತನ್ನು ನಾವು ಕೇಳಬೇಕು. ಅವರಿಗೆ ಮುಜುಗರ ಮಾಡಬಾರದು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಹಾಗೇ ಇಂದು ಬಾಳೆಹೊಸೂರಿನ ದಿಂಗಾಲೇಶ್ವರ್ ಶ್ರೀ ಈಶ್ವರಪ್ಪನವರ ಮನೆಗೆ ಭೇಟಿ ನೀಡಿದ್ದರು. ನಂತರ ಪ್ರತಿಕ್ರಿಯೆ ನೀಡಿ, ನಾವು ಯಡಿಯೂರಪ್ಪನವರಿಗೆ ಖಂಡಿತ ಬೆಂಬಲ ನೀಡುತ್ತೇವೆ. ಆದರೆ ಆಯಾ ಪಕ್ಷಕ್ಕೆ ಅವರದ್ದೇ ಆದ ಸಿದ್ಧಾಂತಗಳಿರುತ್ತವೆ. ಕಾದು ನೋಡಬೇಕು ಎಂದಿದ್ದಾರೆ. ತಾವು ಇವತ್ತು ಈಶ್ವರಪ್ಪನವರ ಮನೆಗೆ ಭೇಟಿ ನೀಡಿದ್ದು, ಯಡಿಯೂರಪ್ಪನವರ ವಿಚಾರ ಚರ್ಚಿಸಲು ಅಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಬಿಎಸ್ವೈಗೆ ಮಠಾಧೀಶರ ಬೆಂಬಲ ಹೆಚ್ಚುತ್ತಲೇ ಇದೆ. ಇಂದೂ ಕೂಡ ಸಿಎಂ ನಿವಾಸಕ್ಕೆ 8 ವಿವಿಧ ಮಠಾಧೀಶರು ಆಗಮಿಸಿದ್ದರು. ಹಾಗೇ ತುಮಕೂರಿನ ಗುಬ್ಬಿ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ದೊಡ್ಡಗುಣಿ ಮಠದ ರೇವಣ ಸಿದ್ದೇಶ್ವರ ಶಿವಚಾರ್ಯ, ಬೆಟ್ಟದಹಳ್ಳಿ, ಚಂದ್ರಶೇಖರ್ ಮಹಾಸ್ವಾಮಿಗಳು, ಬಿ.ಕೋಡಿಹಳ್ಳಿ ಮಠದ ಬಸವ ಭೃಂಗೇಶ ಸ್ವಾಮೀಜಿ, ತೇವಡಿಹಳ್ಳಿ ಮಠದ ಸ್ವಾಮೀಜಿ ಸಭೆ ಸೇರಿ ಬಿ.ಎಸ್. ಯಡಿಯೂರಪ್ಪನವರಿಗೆ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: CM BS Yediyurappa ರಾಜೀನಾಮೆ ಸುಳಿವಿಗೆ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು?
K S Eshwarappa react about various Swamijis support For B S Yediyurappa
Published On - 11:50 am, Thu, 22 July 21