ಸಾಲು ಸಾಲು ರಜೆ: ಪ್ರಯಾಣಿಕರಿಂದ ದುಪ್ಪಟ್ಟು ದರ ಸುಲಿಗೆ ಮಾಡುತ್ತಿರುವ ಬಸ್ ಬುಕ್ಕಿಂಗ್ ಆ್ಯಪ್ಸ್

ನಿನ್ನೆ, ಇಂದು ಮತ್ತು ನಾಳೆ ಮೂರು ದಿನಗಳ ಕಾಲ ರಜೆ‌ ಹಿನ್ನೆಲೆ ಎಸಿ, ವೋಲ್ವೋ, ಮಲ್ಟಿ ಆ್ಯಕ್ಸಲ್ ಬಸ್ ಟಿಕೆಟ್​ಗಳ ದರ ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಮತ್ತೊಂದೆಡೆ ಬಸ್ ಬುಕ್ಕಿಂಗ್ ಆ್ಯಪ್​ಗಳು, ನಿರ್ವಾಹಣೆ ವೆಚ್ಚ, GST ಎಂದು ಟಿಕೆಟ್ ದರಕ್ಕಿಂತ ಮೂರುಪಟ್ಟು ಹೆಚ್ಚಿನ ಹಣ ಸುಲಿಗೆ ಮಾಡುತ್ತಿವೆ.

ಸಾಲು ಸಾಲು ರಜೆ: ಪ್ರಯಾಣಿಕರಿಂದ ದುಪ್ಪಟ್ಟು ದರ ಸುಲಿಗೆ ಮಾಡುತ್ತಿರುವ ಬಸ್ ಬುಕ್ಕಿಂಗ್ ಆ್ಯಪ್ಸ್
ಬಸ್ ಟಿಕೆಟ್ ದರ
Follow us
Kiran Surya
| Updated By: ಆಯೇಷಾ ಬಾನು

Updated on: Dec 24, 2023 | 11:26 AM

ಬೆಂಗಳೂರು, ಡಿ.24: ಕ್ರಿಸ್ಮಸ್ (Christmas), ನ್ಯೂ ಇಯರ್(New Year) ಹಿನ್ನೆಲೆ ಸಾಲು ಸಾಲು ರಜೆಗಳು ಬಂದಿದ್ದು ಊರಿಗೆ ಹೋಗಲು ಪ್ಲ್ಯಾನ್ ಮಾಡಿಕೊಂಡವರಿಗೆ ಬಸ್ ಬುಕ್ಕಿಂಗ್ ಆ್ಯಪ್​ಗಳು (Bus Booking Apps) ಶಾಕ್ ಕೊಟ್ಟಿವೆ. ಖಾಸಗಿ ಬಸ್ ಬುಕ್ಕಿಂಗ್ ಆ್ಯಪ್​ಗಳು ಪ್ರಯಾಣಿಕರಿಂದ ಸುಲಿಗೆ ಮಾಡಲು ನಿಂತಿವೆ. ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟಾಗಿದೆ. ಜೊತೆಗೆ ಖಾಸಗಿ ಬಸ್ ಬುಕ್ಕಿಂಗ್ ವೆಬ್ ಸೈಟ್​ನಲ್ಲಿ ಟಿಕೆಟ್ ದರ ಒನ್ ಟು ಡಬಲ್ ತೋರಿಸಲಾಗುತ್ತಿದೆ.

ಬೆಂಗಳೂರಿನಿಂದ ಬಹುತೇಕ ಊರುಗಳಿಗೆ ಖಾಸಗಿ ಬಸ್​ಗಳು ದುಪ್ಪಟ್ಟು ದರ ನಿಗದಿ ಮಾಡಿವೆ. ಮತ್ತೊಂದೆಡೆ ಬಸ್ ಬುಕ್ಕಿಂಗ್ ಆ್ಯಪ್​ಗಳಲ್ಲಿ ಮತ್ತಷ್ಟು ಹೆಚ್ಚಿನ ದರದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬೇಕಿದೆ. ನಿನ್ನೆ, ಇಂದು ಮತ್ತು ನಾಳೆ ಮೂರು ದಿನಗಳ ಕಾಲ ರಜೆ‌ ಹಿನ್ನೆಲೆ ಎಸಿ, ವೋಲ್ವೋ, ಮಲ್ಟಿ ಆ್ಯಕ್ಸಲ್ ಬಸ್ ಟಿಕೆಟ್​ಗಳ ದರ ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಮತ್ತೊಂದೆಡೆ ಬಸ್ ಬುಕ್ಕಿಂಗ್ ಆ್ಯಪ್​ಗಳು, ನಿರ್ವಾಹಣೆ ವೆಚ್ಚ, GST ಎಂದು ಟಿಕೆಟ್ ದರಕ್ಕಿಂತ ಮೂರುಪಟ್ಟು ಹೆಚ್ಚಿನ ಹಣ ಸುಲಿಗೆ ಮಾಡುತ್ತಿವೆ. ಖಾಸಗಿ ಬಸ್ ಬುಕ್ಕಿಂಗ್ ಆ್ಯಪ್​ಗಳು ಪ್ರತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದೆ. ಬೇಕಾಬಿಟ್ಟಿ ದರ ಹೆಚ್ಚಿಸುತ್ತಿರುವ ಖಾಸಗಿ ಬಸ್​ ಆ್ಯಪ್​ಗಳ ಮೇಲೆ ಕ್ರಮ ಯಾವಾಗ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಕ್ರಿಸ್​ಮಸ್​ ಹಬ್ಬಕ್ಕೆ ಸಾವಿರ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಿದ KSRTC

ನಾರ್ಮಲ್ ಬಸ್ ದರ ಪಟ್ಟಿ ಇಲ್ಲಿದೆ

  • ​ ಬೆಂಗಳೂರು-ಶಿವಮೊಗ್ಗ 450-650 ರೂ.ರಿಂದ ಈಗ 1000-1400 ಇದೆ.
  • ಬೆಂಗಳೂರು- ಹುಬ್ಬಳಿ 600-850ರೂ. ಇತ್ತು. ಈಗ 1550-2000 ರೂ.
  • ಬೆಂಗಳೂರು-ಮಂಗಳೂರು 600-900 ರೂ. ಈಗ 1500-1800ರೂ.
  • ಬೆಂಗಳೂರು – ಉಡುಪಿ 700-800ರೂ ಯಿಂದ 1600 – 1900 ರೂ.
  • ಬೆಂಗಳೂರು-ಧಾರವಾಡ 650-850 ರೂ ಯಿಂದ 1500-2100 ರೂ ಇದೆ.
  • ಬೆಂಗಳೂರು-ಬೆಳಗಾವಿ 700-900 ರೂ ಇತ್ತು. ಈಗ 1500-2100 ರೂ.ಇದೆ
  • ಬೆಂಗಳೂರು – ದಾವಣಗೆರೆ 450-700 ರೂ ಇತ್ತು. ಈಗ 1200-1650 ರೂ. ಇದೆ.
  • ಬೆಂಗಳೂರು – ಚಿಕ್ಕಮಗಳೂರು 600-650 ರೂ ಇತ್ತು. 1250-1500 ರೂ ಇದೆ.
  • ಬೆಂಗಳೂರು – ಹಾಸನ 650-850 ರೂ ಇತ್ತು. ಈಗ 1600-1850 ರೂ ಇದೆ.
  • ಬೆಂಗಳೂರು-ಕುಮಟಾ 650-750 ರೂ. ಇತ್ತು. 1200-1600 ರೂ ಇದೆ.
  • ಬೆಂಗಳೂರು -ಕಲಬುರಗಿ 850-1000 ರೂ. ಇತ್ತು. 1800-2300 ರೂ ಇದೆ.

    ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್