BWSSB ಕಲುಷಿತ ನೀರು ಸಪ್ಲೈ ಮಾಡ್ತಿದೆ, ನಮಗೆ ಆ ನೀರು ಬೇಡ ಶುದ್ಧ ನೀರು ಕೊಡಿ; BBMP ವಿರುದ್ಧ ಆಕ್ರೋಶ

| Updated By: ಆಯೇಷಾ ಬಾನು

Updated on: Mar 26, 2024 | 11:32 AM

ಬೆಳ್ಳಂದೂರು, ವರ್ತೂರು ಭಾಗಗಳಿಗೆ ಸಪ್ಲೈ ಆಗುತ್ತಿರುವ ಬಿಬ್ಲೂಎಸ್ಎಸ್​ಬಿ ನೀರು ಕಲುಷಿತವಾಗಿದೆ. ಹೀಗಾಗಿ ನಮಗೆ ಆ ನೀರು ಬೇಡ. ಶುದ್ಧ ನೀರು ಕೊಡಿ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೊಳಚೆ ನೀರನ್ನು ಫಿಲ್ಟರ್ ಮಾಡಿ ವಾಟರ್ ಮ್ಯಾನ್ ಗಳು ನೀರು ನೀಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

BWSSB ಕಲುಷಿತ ನೀರು ಸಪ್ಲೈ ಮಾಡ್ತಿದೆ, ನಮಗೆ ಆ ನೀರು ಬೇಡ ಶುದ್ಧ ನೀರು ಕೊಡಿ; BBMP ವಿರುದ್ಧ ಆಕ್ರೋಶ
BWSSB ಸಪ್ಲೈ ಮಾಡಿದ ನೀರು
Follow us on

ಬೆಂಗಳೂರು, ಮಾರ್ಚ್​.26: ರಾಜಧಾನಿ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ (Bengaluru Drinking Water Crisis). ಹನಿ ನೀರಿಗಾಗಿಯೂ ಪ್ರಾಣಿ, ಪಕ್ಷಿಗಳು ಪರದಾಡುತ್ತಿದ್ರೆ, ಮನುಷ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ನೀರು ಬಳಸಲೂ ಪರಿತಪಿಸುವ ಸ್ಥಿತಿ ಇದೆ. ಹೀಗಾಗಿ ನಗರದ ಅನೇಕ ಕಡೆ ಬಿಬ್ಲೂಎಸ್ಎಸ್​ಬಿ (BWSSB) ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ಬೆಳ್ಳಂದೂರು, ವರ್ತೂರು ಭಾಗಗಳಿಗೆ ಸಪ್ಲೈ ಆಗುತ್ತಿರುವ ಬಿಬ್ಲೂಎಸ್ಎಸ್​ಬಿ ನೀರು ಕಲುಷಿತವಾಗಿದೆ. ನಮಗೆ ಆ ನೀರು ಬೇಡ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಜನರಿಗೆ ಕುಡಿಯಲು ನೀರು ಸಪ್ಲೈ ಮಾಡುತ್ತಿದೆ. ಆದರೆ ಆ ಟ್ಯಾಂಕರ್ ನೀರು ಕುಡಿಯಲು ಆಗ್ತಿಲ್ಲ. ಅದನ್ನು ಬಳಕೆ ಮಾಡಲು ಆಗೋದಿಲ್ಲ. ಈ ನೀರು ಕುಡಿದ್ರೆ ಆರೋಗ್ಯದ ಸಮಸ್ಯೆ ಮತ್ತು ವಾಂತಿ ಭೇದಿ ಆಗುತ್ತದೆ. ಹಾಗಾಗಿ ನಮಗೆ ನೀರು ಬೇಡ ಕೊಟ್ಟರೆ ಶುದ್ದವಾದ ನೀರು ಕೊಡಿ. ಈ ಕಲುಷಿತ ನೀರನ್ನು ಕೂಡಲೇ ನಿಲ್ಲಿಸಿ ಎಂದು ಬೆಳ್ಳಂದೂರು, ವರ್ತೂರು ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಕುಡಿಯಲು ಮತ್ತು ಬಳಕೆ ಮಾಡಲು ಬೇರೆ ನೀರಿನ ವ್ಯವಸ್ಥೆ ಇಲ್ಲದೆ ನಿವಾಸಿಗಳು ಪರದಾಡುವಂತಾಗಿದೆ. ಟ್ಯಾಂಕರ್ ಮೂಲಕ ಡ್ರಮ್ ಗಳಿಗೆ ನೀರು ಸಪ್ಲೈ ಮಾಡಲಾಗಿದೆ. ಆದರೆ ಕೊಳಚೆ ನೀರನ್ನು ಫಿಲ್ಟರ್ ಮಾಡಿ ವಾಟರ್ ಮ್ಯಾನ್ ಗಳು ನೀರು ನೀಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ: ನೀರಿನ ಸಮಸ್ಯೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ತರಕಾರಿ ಬೆಲೆ, ಇಲ್ಲಿದೆ ದರ ವಿವರ

ಗಾಂಧಿನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಕೆ.ಪಿ.ಅಗ್ರಹಾರದಲ್ಲಿ ನಲ್ಲಿಯಲ್ಲಿ ನೀರು ಬಾರದೇ ಏರಿಯಾ ಜನರು ನೀರಿಗಾಗಿ ಬೀದಿಯಲ್ಲಿರೋ ಒಂದೇ ಒಂದು ನಲ್ಲಿಯನ್ನ ಅವಲಂಬಿಸಿದ್ದಾರೆ. ಆಗೋಮ್ಮೆ-ಹೀಗೊಮ್ಮೆ ಇಣುಕಿ ಮಾಯವಾಗೋ ನೀರನ್ನೇ ಸರ್ಕಸ್ ಮಾಡಿಕೊಂಡು ಸಂಗ್ರಹ ಮಾಡ್ತಿರೋ ನಿವಾಸಿಗಳು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಈ ಏರಿಯಾದಲ್ಲಿ ಕಾವೇರಿ ನೀರು ಕೊಡ್ತೀವೆ ಎಂದು ಬೀದಿ ಬೀದಿಯಲ್ಲಿ ಎಳೆದಿರೋ ಪೈಪ್ ಲೈನ್ ಕಾಣುತ್ತೆ. ಆದರೆ ಪೈಪ್ ನಲ್ಲಿ ಹನಿ ನೀರು ಹರಿದ ಗುರುತು ಸಿಗಲ್ಲ. ಬರೋ ಅಲ್ಪಸ್ವಲ್ಪ ನೀರಿಗೂ ಬಿಂದಿಗೆ ಹಿಡಿದು ಗಂಟೆಗಟ್ಟಲೇ ನಿವಾಸಿಗಳು ಕಾಯಬೇಕಿದೆ. ಸಮಸ್ಯೆ ಬಗ್ಗೆ ಹಲವು ಬಾರೀ ದೂರು ನೀಡಿದ್ರು ಸ್ಪಂದಿಸದ ಜನಪ್ರತಿನಿಧಿ, ಅಧಿಕಾರಿಗಳಿಗೆ ಶಾಪ ಹಾಕ್ತಿದ್ದಾರೆ. ನೀರು ಕೊಡಿ ಇಲ್ಲ ಅಂದ್ರೆ ಸ್ವಲ್ಪ ವಿಷವನ್ನಾದ್ರೂ ಕೊಟ್ಟುಬಿಡಿ ಅಂತಾ ಜನ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ