Bangalore Water Crisis: ನೀರಿನ ಬಿಕ್ಕಟ್ಟಿನ ಕಾರಣ ವರ್ಕ್ ಫ್ರಂ ಹೋಮ್​ಗೆ ಐಟಿ ಉದ್ಯೋಗಿಗಳ ಬೇಡಿಕೆ, ತಜ್ಞರ ಸಲಹೆಯೂ ಅದೇ!

ಬೆಂಗಳೂರು ನೀರಿನ ಬಿಕ್ಕಟ್ಟು: ಒಂದು ವರ್ಷದವರೆಗೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಗೆ (ವರ್ಕ್ ಫ್ರಂ ಹೋಮ್) ಅವಕಾಶ ನೀಡುವ ಮೂಲಕ ಸುಮಾರು 10 ಲಕ್ಷ ಜನರು ಊರುಗಳಿಗೆ ಮರಳುವಂತೆ ಮಾಡಬಹುದು. ಇದರಿಂದಾಗಿ ಬೆಂಗಳೂರಿನಲ್ಲಿ ನೀರು ಸೇರಿದಂತೆ ಇತರ ಸಂಪನ್ಮೂಲಗಳ ಮೇಲೆ ಸ್ವಲ್ಪ ಒತ್ತಡ ಕಡಿಮೆಯಾಗಲಿದೆ ಎಂದು ಕೆಲವು ಮಂದಿ ತಜ್ಞರು ಸಲಹೆ ನೀಡಿರುವುದಾಗಿ ವರದಿಯೊಂದು ಉಲ್ಲೇಖಿಸಿದೆ.

Bangalore Water Crisis: ನೀರಿನ ಬಿಕ್ಕಟ್ಟಿನ ಕಾರಣ ವರ್ಕ್ ಫ್ರಂ ಹೋಮ್​ಗೆ ಐಟಿ ಉದ್ಯೋಗಿಗಳ ಬೇಡಿಕೆ, ತಜ್ಞರ ಸಲಹೆಯೂ ಅದೇ!
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Mar 26, 2024 | 12:58 PM

ಬೆಂಗಳೂರು, ಮಾರ್ಚ್ 26: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು (Bengaluru Wtaer Crisis) ತೀವ್ರಗೊಂಡಿರುವ ಮಧ್ಯೆಯೇ 15 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗಿಗಳು (IT Employees) ಮನೆಯಿಂದಲೇ ಕೆಲಸ (Work From Home) ಮಾಡಲು ಅವಕಾಶ ನೀಡುವಂತೆ ಕಂಪನಿಗಳನ್ನು ಒತ್ತಾಯಿಸಿರುವುದಾಗಿ ವರದಿಯಾಗಿದೆ. ವರ್ಕ್ ಫ್ರಂ ಹೋಮ್​ಗೆ ಅವಕಾಶ ನೀಡುವ ಮೂಲಕ ನಗರದಲ್ಲಿ ನೀರು ಸೇರಿದಂತೆ ಇತರ ಸಂಪನ್ಮೂಲ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಹಲವಾರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತಾತ್ಕಾಲಿಕ ಆಧಾರದ ಮೇಲೆ ವರ್ಕ್ ಫ್ರಂ ಹೋಮ್ ಆಯ್ಕೆ ನೀಡಿದರೆ, ಅದರಿಂದಾಗಿ ಬೆಂಗಳೂರಿನಲ್ಲಿ ಜನಸಂಖ್ಯೆ ತುಸು ಕಡಿಮೆಯಾಗಬಹುದು. ಇದು ನೀರಿನ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡಬಹುದು ಎಂದು ಅವರು ಹೇಳಿರುವುದಾಗಿ ವರದಿಯೊಂದು ಉಲ್ಲೇಖಿಸಿದೆ.

ಅಂಕಿಅಂಶಗಳ ಪ್ರಕಾರ, ನಗರಕ್ಕೆ ಪ್ರತಿ ದಿನ 2,600 ಎಂಎಲ್​ಡಿ (million litres of water per day) ನೀರಿನ ಅವಶ್ಯಕತೆ ಇದೆ. ಸದ್ಯ ಬೆಂಗಳೂರು ನಗರವು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ ಕೊರತೆಯನ್ನು ಎದುರಿಸುತ್ತಿದೆ.

ನೀರಿನ ಬಿಕ್ಕಟ್ಟು ಹಲವಾರು ವಾರಗಳಿಂದ ಮುಂದುವರಿದಿರುವುದರಿಂದ ಕರ್ನಾಟಕ ಸರ್ಕಾರವು ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.

ತಜ್ಞರು ಹೇಳುವುದೇನು?

ಬೆಂಗಳೂರಿನಲ್ಲಿರುವ ಸುಮಾರು 15 ಲಕ್ಷ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಒದಗಿಸುವುದರಿಂದ ಅಲ್ಪಾವಧಿಯ ಪರಿಹಾರ ದೊರೆಯಲಿದೆ ಎಂದು ಕರ್ನಾಟಕ ಮತ್ತು ಅಸ್ಸಾಂನ ಹೈಕೋರ್ಟ್‌ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ ಶ್ರೀಧರ್ ರಾವ್ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಒಂದು ವರ್ಷದವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದರಿಂದ ಸುಮಾರು 10 ಲಕ್ಷ ಜನ ಅವರ ಊರುಗಳಿಗೆ ಮರಳಬಹುದು. ಇದರಿಂದಾಗಿ ಬೆಂಗಳೂರಿನ ಸಂಪನ್ಮೂಲಗಳ ಮೇಲೆ ಸ್ವಲ್ಪ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

1980 ರ ದಶಕದಲ್ಲಿ ನಗರದ ಜನಸಂಖ್ಯೆಯು 25 ರಿಂದ 30 ಲಕ್ಷ ಇತ್ತು. ಆದರೆ ಈಗ ಅದು 1.5 ಕೋಟಿಗೆ ಏರಿದೆ. ರಾಜ್ಯವು 2003-04ರ ನಂತರ ಸುಮಾರು ಮೂರು ವರ್ಷಗಳ ಕಾಲ ಬರ ಪರಿಸ್ಥಿತಿಯನ್ನು ಎದುರಿಸಿದ್ದರೂ ಸಹ, ಆ ಸಮಯದಲ್ಲಿ ಕಡಿಮೆ ಜನ ಸಾಂಧ್ರತೆ ಇದ್ದುದರಿಂದ ಪರಿಣಾಮವು ತೀವ್ರವಾಗಿರಲಿಲ್ಲ ಎಂದು ಅವರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಬೆಂಗಳೂರು: ಸಾರ್ವಜನಿಕರಿಗೆ ಉಚಿತವಾಗಿ ಕೊಡಬೇಕಿದ್ದ ನೀರು ಹೋಟೆಲ್‌ಗಳಿಗೆ ಮಾರಾಟ; ಸಾರ್ವಜನಿಕರ ಆಕ್ರೋಶ

ಕೆರೆಗಳ ಹೂಳು ತೆಗೆಯುವಂಥ ಕ್ರಮಗಳನ್ನೂ ಅವರು ಸೂಚಿಸಿದ್ದಾರೆ. ಈ ಮಧ್ಯೆ, ನ್ಯಾಯಮೂರ್ತಿ ರಾವ್ ಅವರ ಸಲಹೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಳಕೆದಾರರು ಬೆಂಬಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ