AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

87 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2.53 ರೂ. ಕೋಟಿ ಹಣ ಉಳಿತಾಯ: ಚಲುವರಾಯಸ್ವಾಮಿ

ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2.53 ಕೋಟಿ ರೂಪಾಯಿಗಳ ಉಳಿತಾಯವಾಗಿದೆ. ಸರ್ಕಾರದಿಂದ ಬಿಡುಗಡೆಯಾದ 30 ಕೋಟಿ ರೂಪಾಯಿಗಳಲ್ಲಿ 29.65 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಉಳಿತಾಯವಾದ ಹಣವನ್ನು ಕನ್ನಡ ಭವನ ನಿರ್ಮಾಣಕ್ಕೆ ಬಳಸಲು ಯೋಜಿಸಲಾಗಿದೆ. ಸಮ್ಮೇಳನದ ಆಯೋಜನೆಯು ಪಾರದರ್ಶಕವಾಗಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

87 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2.53 ರೂ. ಕೋಟಿ ಹಣ ಉಳಿತಾಯ: ಚಲುವರಾಯಸ್ವಾಮಿ
ಸಚಿವ ಚಲುವರಾಯಸ್ವಾಮಿ
ಪ್ರಶಾಂತ್​ ಬಿ.
| Updated By: ವಿವೇಕ ಬಿರಾದಾರ|

Updated on: Apr 05, 2025 | 7:44 PM

Share

ಮಂಡ್ಯ, ಏಪ್ರಿಲ್​ 05: 87 ನೇ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (87th Akhil Bharath Kannada Sahitya Sammelana) 2.53 ಕೋಟಿ ಹಣ ಉಳಿತಾಯವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಬಿಡುಗಡೆಯಾದ 30 ಕೋಟಿ ರೂ. ಹಣದಲ್ಲಿ 29,65,07,226ರೂ. ವೆಚ್ಚವಾಗಿದ್ದು, 34,92,774 ರೂ. ಸರ್ಕಾರಕ್ಕೆ ಆದ್ಯಾರ್ಪಿಸಲಾಗುವುದು ಎಂದರು.

ವಾಣಿಜ್ಯ ಮಳಿಗೆಗಳ ಬಾಡಿಗೆ- 17,52,000 ರೂ., ಪುಸ್ತಕ ಮಳಿಗೆಯ ಬಾಡಿಗೆ- 16,04,000 ರೂ., ನೊಂದಣಿ ಶುಲ್ಕ- 39,95,400 ರೂ., ಹೆಚ್.ಆರ್ ಎಂ.ಎಸ್​ ವ್ಯಾಪ್ತಿಗೆ ಬಾರದ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ- 23,11,944 ರೂ., ಹೆಚ್.ಆರ್ ಎಂ.ಎಸ್ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ- 1,08,05,048 ರೂ., ಎಂ.ಡಿಸಿ.ಸಿ ಬ್ಯಾಂಕ್- 10 ಲಕ್ಷ ರೂ., ಎಂ.ಆರ್.ಎನ್ ನಿರಾಣಿ ಫೌಂಡೇಷನ್- 5 ಲಕ್ಷ ರೂ. ಸೇರಿ ಒಟ್ಟು 2,53,61,166 ರೂ. ಉಳಿತಾಯವಾಗಿದೆ ಎಂದರು.

ಕನ್ನಡ ಭವನ ನಿರ್ಮಾಣ87 ನೇ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಘಟಿಸಿದ ನೆನಪಿಗಾಗಿ ಕನ್ನಡ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ದೇಣಿಗೆ ರೂಪದಲ್ಲಿ ಸಮಗ್ರಹವಾಗಿ ಉಳಿತಾಯವಾಗಿರುವ 2.5 ಕೋಟಿ ರೂ. ಹಣವನ್ನು ವೆಚ್ಚ ಮಾಡಲು ಯೋಜಿಸಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ ಬೇಕಿರುವ ಹೆಚ್ವುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ‌ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ
Image
ಮತ್ತೋರ್ವ ರಾಜಕಾರಣಿ ಪುತ್ರ ರಾಜಕೀಯಕ್ಕೆ ಎಂಟ್ರಿ: ಯಾರದು?
Image
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
Image
ಏಕಾಏಕಿ ತೆರೆದ ಕೆಆರ್​ಎಸ್​ ಡ್ಯಾಂ ಗೇಟ್​: ​ಕಾವೇರಿ ನದಿ ನೀರು ಪೋಲು
Image
ಮಿಮ್ಸ್ ಮೆಡಿಕಲ್‌ ಕಾಲೇಜು ಆವರಣದೊಳಗೆ ಬಂದ ಬುಸ್‌ ಬುಸ್‌ ನಾಗಪ್ಪ

ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, 87 ನೇ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಆಯೋಜನೆ ಹಾಗೂ ಹಣದ ವೆಚ್ಚ ಪಾರದರ್ಶಕವಾಗಿ ನಡೆಸಲು 28 ವಿವಿಧ ಸಮಿತಿ, ಕ್ರಿಯಾಯೋಜನೆ ತಯಾರಿಕೆ, ದರಪಟ್ಟಿ ಅನುಮೋದನೆ ಸಮಿತಿ, ಚೆಕ್ ಮೆಜರ್ ಮೆಂಟ್ ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿ ರಚಿಸಲಾಗಿತ್ತು ಎಂದು ತಿಳಿಸಿದರು.

ಸರ್ಕಾರದಿಂದ ಬಿಡುಗಡೆಯಾದ 30 ಕೋಟಿ ರೂ. ಅನುದಾನದಲ್ಲಿ 3,17,68,199 ರೂ. ಜಿ.ಎಸ್.ಟಿ, 1,08,39,022 ರೂ. ಕೆ.ಎಸ್.ಎಂ.ಸಿ.ಎ ಸೇವಾ ಶುಲ್ಕ ಪಾವತಿಸಿದ ನಂತರ 25,39,00,005 ರೂ. ಸಮ್ಮೇಳನಕ್ಕೆ ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.

ಇದಲ್ಲದೇ ಕೆಲವು ಸಂಸ್ಥೆಗಳು ನುಡಿ ಜಾತ್ರೆಯ ಸ್ವರ ಯಾತ್ರೆ ಕಾರ್ಯಕ್ರಮಗಳಿಗೆ, ಸ್ವಾಗತ ಕಾಮಾನುಗಳಿಗೆ ಪ್ರಯೋಜಕತ್ವ ವಹಿಸಿಕೊಂಡು ಸಮ್ಮೇಳನಕ್ಕೆ ಸಹಕಾರ ನೀಡಿದ್ದಾರೆ ಎಂದರು.

87 ನೇ ಅಖಿಲ‌ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾ ಸಂಚಾಲಕಿ ಡಾ. ಮೀರಾ ಶಿವಲಿಂಗಯ್ಯ ಮಾತನಾಡಿ, ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಾರ್ವಜನಿಕರು ಯಶಸ್ವಿಯಾಗಿ ಸಂಘಟಿಸಲು ನೀಡಿದ ಸಹಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಇದನ್ನೂ ಓದಿ: ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಉಪಸ್ಥಿತರಿದ್ದರು.

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಿತಿವಾರು ವೆಚ್ಚವಾದ ಅನುದಾನ

  • ವೇದಿಕೆ ನಿರ್ಮಾಣ ಸಮಿತಿ- 8,92,49,835 ರೂ.
  • ವೇದಿಕೆ ನಿರ್ವಹಣೆ ಸಮಿತಿ- 4,96,456 ರೂ.
  • ವಸತಿ ಸಮಿತಿ- 1,97,56,744 ರೂ.
  • ಆಹಾರ ಸಮಿತಿ- 6,74,62,182 ರೂ.
  • ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿ- 34,99,956 ರೂ.
  • ಕುಡಿಯುವ ನೀರು ಸಮಿತಿ- 49,99,714 ರೂ.
  • ಧ್ವಜ ನಿರ್ವಹಣೆ ಸಮಿತಿ- 99,999 ರೂ.
  • ನಗರ ಅಲಂಕಾರ ಸಮಿತಿ- 74,99,419 ರೂ.
  • ಪ್ರಚಾರ ಸಮಿತಿ- 1,29,00,906 ರೂ.
  • ಮಾಧ್ಯಮ ಸಮನ್ವಯ ಸಮಿತಿ- 99,99,709 ರೂ.
  • ಸಾಂಸ್ಕೃತಿಕ ಸಮಿತಿ- 82,43,930 ರೂ.
  • ಮೆರವಣಿಗೆ ಸಮಿತಿ- 74,31,504 ರೂ.
  • ಸ್ಮರಣಿಕೆ ಸಮಿತಿ- 32,20,773 ರೂ.
  • ಪುಸ್ತಕ ಆಯ್ಕೆ ಸಮಿತಿ- 29,98,761 ರೂ.
  • ಸ್ಮರಣ ಸಂಚಿಕೆ ಸಮಿತಿ- 19,99,726 ರೂ.
  • ಪಾಸ್ ಮತ್ತು ಬ್ಯಾಡ್ಜ್ ಸಮಿತಿ- 9,99,972 ರೂ.
  • ಮಹಿಳಾ ಸಮಿತಿ 2,98,035 ರೂ.
  • ಸ್ವಯಂ ಸೇವಕರು ಮತ್ತು ಉಸ್ತುವಾರಿ ಸಮಿತಿ- 13,75,290 ರೂ.
  • ಸಾರಿಗೆ ಸಮಿತಿ- 81,54,708 ರೂ.
  • ವಸ್ತು ಪ್ರದರ್ಶನ ಸಮಿತಿ- 4,98,750 ರೂ.
  • ನೋಂದಣಿ ಸಮಿತಿ- 63,93,316 ರೂ.
  • ಸಮ್ಮೇಳನ ಜಾಗದ ಪೂರ್ವಭಾವಿ ಹಾಗೂ ಯತಾಸ್ಥಿತಿಗೊಳಿಸುವ ಕಾಮಗಾರಿ ವೆಚ್- 34.73.881ರೂ.
  • ಸಾಹಿತ್ಯ ಸಮ್ಮೇಳನ ಕಛೇರಿ ನವೀಕರಣ ವೆಚ್- 1,85,850 ರೂ.
  • ಕಚೇರಿ ವೆಚ್ಚ- 4,97,811 ರೂ. ಗಳಾಗಿದೆ.
  • ಕನ್ನಡ ಜ್ಯೋತಿ ರಥ ನಿರ್ವಹಣಾ ಸಮಿತಿ 42,99,999 ರೂ. ಗಳಾಗಿದೆ.
  • ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ಆಸನ ವ್ಯವಸ್ಥೆ 53,70,000 ರೂ.
  • ಕನ್ನಡ ಸಾಹಿತ್ಯ ಪರಿಷತ್ತಿನ ಪಾರಂಪರಿಕ ಚಟುವಟಿಕೆಗಳಿಗೆ ನೀಡಿದ ವೆಚ್ಚ 2,50,00,00 ರೂ.
  • 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲಾ ಸಮಿತಿಗಳಿಂದ ಒಟ್ಟು 29,65,07,226 ರೂ. ಅನುದಾನವನ್ನು ಬಳಕೆ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ