Viral: ಮಿಮ್ಸ್ ಮೆಡಿಕಲ್ ಕಾಲೇಜು ಆವರಣದೊಳಗೆ ಬಂದ ಬುಸ್ ಬುಸ್ ನಾಗಪ್ಪ; ಹೇಗಿತ್ತು ನೋಡಿ ರಕ್ಷಣಾ ಕಾರ್ಯ
ಬೇಸಿಗೆಯಲ್ಲಿ ಉರಿ ಬಿಸಿಲ ಶಾಖ ಒಂದು ಕಡೆಯಾದರೆ, ಇನ್ನೊಂದೆಡೆ ಹಾವುಗಳ ಕಾಟ. ಬಿಸಿಲ ತಾಪ ಹೆಚ್ಚಾಗುತ್ತಿದ್ದಂತೆ ತಂಪಾದ ಸ್ಥಳವನ್ನು ಹುಡುಕಿ ಬರುವ ಹಾವುಗಳು ಮನೆ ಸಮೀಪ, ಜನನಿಬಿಡ ಪ್ರದೇಶಗಳಿಗೆ ಬಂದು ಆತಂಕ ಸೃಷ್ಟಿಸುತ್ತವೆ. ಅದೇ ರೀತಿ ಇಲ್ಲೊಂದು ಹಾವು ತಂಪಾದ ಸ್ಥಳವನ್ನು ಹುಡುಕುತ್ತಾ ಬಂದು ಸೀದಾ ಮೆಡಿಕಲ್ ಕಾಲೇಜು ಆವರಣದೊಳಗೆ ನುಗ್ಗಿದೆ. ಬುಸ್ ಬುಸ್ ಎಂದು ಹೆಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗಪ್ಪನನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಮಂಡ್ಯ, ಮಾರ್ಚ್. 21: ಶೆಕೆ, ಬಿಸಿಲ ಝಳ ಹೆಚ್ಚುತ್ತಿರುವ ಈ ಬೇಸಿಗೆಯಲ್ಲಿ (summer) ಕೇವಲ ಮನುಷ್ಯರಷ್ಟೇ ಅಲ್ಲ, ಪ್ರಾಣಿ-ಪಕ್ಷಿ, ಹುತ್ತದೊಳಗಿನ ಹಾವುಗಳೂ (snake) ಜೀವ ಸಂಕಟವನ್ನು ಅನುಭವಿಸುತ್ತವೆ. ಇನ್ನೂ ಬಿಸಿಲ ಬೇಗೆಯನ್ನು ಸಹಿಸಲಾರದೆ ಹಾವುಗಳು ತಂಪು ಜಾಗವನ್ನು ಹುಡುಕುತ್ತಾ ಬರುವುದು ಈ ಸಮಯದಲ್ಲಿ ಸಾಮಾನ್ಯವಾಗಿದೆ. ತಾಪ ಹೆಚ್ಚಾಗುತ್ತಿದ್ದಂತೆ ತಂಪಾದ ಸ್ಥಳವನ್ನು ಹುಡುಕಿ ಬರುವ ಹಾವುಗಳು ಮನೆ ಸಮೀಪ, ಜನನಿಬಿಡ ಪ್ರದೇಶಗಳಿಗೆ ಬಂದು ಆತಂಕ ಸೃಷ್ಟಿಸುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಮೆಡಿಕಲ್ ಕಾಲೇಜು (medical college) ಆವರಣದೊಳಗೆ ಬಂದ ಬುಸ್ ಬುಸ್ ನಾಗಪ್ಪ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕಾಲೇಜು ಆವರಣದೊಳಗೆ ನುಗ್ಗಿ ಬುಸ್ ಬುಸ್ ಎಂದು ಹೆಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗಪ್ಪನನ್ನು ರಕ್ಷಣೆ (rescue) ಮಾಡಿ ಕಾಡಿಗೆ ಬಿಡಲಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಮಂಡ್ಯದ ಮಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಬಿಸಿಲ ಶಾಖವನ್ನು ತಡೆಯಲಾರದೆ ತಂಪಾದ ಸ್ಥಳವನ್ನು ಹುಡುಕುತ್ತಾ ಬಂದ ದೈತ್ಯ ಹಾವು ಮೆಡಿಕಲ್ ಕಾಲೇಜು ಆವರಣದೊಳಗೆ ಬಂದಿದೆ. ಕಾಲೇಜು ಆವರಣದಲ್ಲಿರುವ ಉದ್ಯಾನವನದಿಂದ ಬಂದು ಹಾವು ಕಾಲೇಜಿನೊಳಗೆ ನುಗ್ಗಲು ಯತ್ನಿಸಿದ್ದು, ಹೆಡೆ ಬಿಚ್ಚಿ ಬುಸುಗುಡುತ್ತಾ ನಿಂತಿದ್ದ ನಾಗಪ್ಪನನ್ನು ಉರಗ ರಕ್ಷಕ ಸ್ನೇಕ್ ಗಿರೀಶ್ ಅವರು ರಕ್ಷಣೆ ಮಾಡಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Adhyapana Digital Media ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ನಾಗಪ್ಪ ಹೆಡೆ ಬಿಚ್ಚಿ ಬುಸುಗುಡುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ನಂತರ ಉಗರ ರಕ್ಷಕ ಹಾವನ್ನು ಹಿಡಿದು ಕಾಡಿನೊಳಗೆ ಬಿಟ್ಟು ಬಂದಿದ್ದಾರೆ.
ಇದನ್ನೂ ಓದಿ: ತಾಯಿ ಮಗನ ಈ ಹಾಡಿನ ಮೋಡಿಗೆ ಫಿದಾ ಆಗದವರೇ ಇಲ್ಲ
ಒಂದು ದಿನದ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಾವು ಹಿಡಿಯುವ ವ್ಯಕ್ತಿ ತುಂಬಾ ನಿರ್ಲಕ್ಷ್ಯತನದಿಂದ ಇದ್ದಂತೆ ಕಾಣುತ್ತದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹಾವು ಹಿಡಿಯುವಾಗ ಜಾಗೃತೆ ವಹಿಸಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಫೀಯಾಗಿ ಮೆಡಿಕಲ್ ಕೋರ್ಸ್ ಓದಲು ಬಂದಿರ್ಬೇಕುʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ