ವಿಮಾನದಲ್ಲಿ ನಾಯಿ ಕೊಂಡೊಯ್ಯುವಂತಿಲ್ಲ ಎಂದಿದ್ದಕ್ಕೆ ಟಾಯ್ಲೆಟ್ ನೀರಿನಲ್ಲಿ ಮುಳುಗಿಸಿ ಕೊಂದ ಮಹಿಳೆ
ಸಾಕು ಪ್ರಾಣಿಗಳಿಗೋಸ್ಕರ ಜೀವವನ್ನೇ ಕೊಡುವ ಜನರ ನಡುವೆ, ಇಲ್ಲೊಬ್ಬ ಸ್ವಾರ್ಥಿ ತನಗೋಸ್ಕರ ನಾಯಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಅಮೆರಿಕದ ವಿಮಾನ ನಿಲ್ದಾಣದಲ್ಲಿ ವಿಮಾನದಲ್ಲಿ ನಾಯಿಯನ್ನು ಕರೆದೊಯ್ಯುವಂತಿಲ್ಲ ಎಂದು ಸಿಬ್ಬಂದಿ ಹೇಳಿದ್ದಕ್ಕೆ, ಮಹಿಳೆ ಟಾಯ್ಲೆಟ್ ನೀರಿನಲ್ಲಿ ನಾಯಿಯನ್ನು ಮುಳುಗಿಸಿ ಕೊಂದಿದ್ದಾರೆ. 57 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.

ವಾಷಿಂಗ್ಟನ್, ಮಾರ್ಚ್ 21: ಸಾಕು ಪ್ರಾಣಿಗಳಿಗೋಸ್ಕರ ಜೀವವನ್ನೇ ಕೊಡುವ ಜನರ ನಡುವೆ, ಇಲ್ಲೊಬ್ಬ ಸ್ವಾರ್ಥಿ ತನಗೋಸ್ಕರ ನಾಯಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಅಮೆರಿಕದ ವಿಮಾನ ನಿಲ್ದಾಣದಲ್ಲಿ ವಿಮಾನದಲ್ಲಿ ನಾಯಿಯನ್ನು ಕರೆದೊಯ್ಯುವಂತಿಲ್ಲ ಎಂದು ಸಿಬ್ಬಂದಿ ಹೇಳಿದ್ದಕ್ಕೆ, ಮಹಿಳೆ ಟಾಯ್ಲೆಟ್ ನೀರಿನಲ್ಲಿ ನಾಯಿಯನ್ನು ಮುಳುಗಿಸಿ ಕೊಂದಿದ್ದಾರೆ. 57 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರ್ಲ್ಯಾಂಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಭದ್ರತಾ ಚೆಕ್ಪೋಸ್ಟ್ ಬಳಿ ಇರುವ ಶೌಚಾಲಯದಲ್ಲಿ ನಾಯಿ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿತ್ತು. ಮಹಿಳೆ ತನ್ನ ಶ್ವಾನದೊಂದಿಗೆ ವಿಮಾನ ಹತ್ತಲು ಪ್ರಯತ್ನಿಸಿದ್ದಳು ಆದರೆ ಅಗತ್ಯವಾದ ದಾಖಲೆಗಳ ಕೊರತೆ ಇತ್ತು.
ನಂತರ ಮಹಿಳೆ ತನ್ನ ನಾಯಿಯನ್ನು ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಮುಳುಗಿಸಿ ಭದ್ರತಾ ಚೆಕ್ಪೋಸ್ಟ್ಗಳ ಮೂಲಕ ಹೋಗುವ ಮೊದಲು ಅದರ ಅವಶೇಷಗಳನ್ನು ಕಸದ ಪುಟ್ಟಿಗೆ ಎಸೆದಿದ್ದಳು. ವಿಮಾನ ನಿಲ್ದಾಣ ಶುಚಿಗೊಳಿಸುವ ಸಿಬ್ಬಂದಿಗೆ ನಾಯಿಯ ಶವ ಕಂಡಿತ್ತು.
ಮತ್ತಷ್ಟು ಓದಿ: Viral: ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿದ ಕೈ; ನೋವಿನಿಂದ ಒದ್ದಾಡಿದ ಮಹಿಳೆ
ಘಟನೆ ನಡೆದ ದಿನದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಲಾರೆನ್ಸ್ ಬಂಧನಕ್ಕೆ ವಾರಂಟ್ ಹೊರಡಿಸಿದ ನಂತರ ಅವರನ್ನು ಬಂಧಿಸಲಾಯಿತು. ಸುಮಾರು ಮೂರು ತಿಂಗಳ ನಂತರ ಅವರನ್ನು ಬಂಧಿಸಿ ವಶಕ್ಕೆ ಪಡೆಯಲಾಯಿತು. ಮಂಗಳವಾರದ ಬಂಧನದ ನಂತರ, ಬಂಧನ ದಾಖಲೆಯ ಪ್ರಕಾರ, ಅವರು 5,000 ಡಾಲರ್ ಬಾಂಡ್ ಸಲ್ಲಿಸಿದ್ದಾರೆ.
ವಿಮಾನದಲ್ಲಿ ಹೋಗಲು ಸಾಧ್ಯವಾಗಿಲ್ಲವೆಂದು ಸಮರ್ಪಕ ದಾಖಲೆ ಸಲ್ಲಿಸಿ ಬಳಿಕ ಹೋಗಬಹುದಿತ್ತು, ಆದರೆ ಅದರ ಬದಲಾಗಿ ಅಷ್ಟು ವರ್ಷಗಳಿಂದ ತನ್ನೊಂದಿಗೆ ಸಾಕಿಕೊಂಡಿದ್ದ ನಾಯಿಯನ್ನು ಯಾರಾದರೂ ಕೊಲೆ ಮಾಡುತ್ತಾರಾ ಎಂದು ಜನರು ಪ್ರಶ್ನಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:33 am, Fri, 21 March 25