ಬೆಂಗಳೂರಿನಲ್ಲಿ ಮತ್ತೊಂದು ವಂಚನೆ ಜಾಲ: ಕುವೈತ್​ನಲ್ಲಿ ಕುಳಿತು ಕೋಟಿ ಕೋಟಿ ವಂಚಿಸಿದವ ಅರೆಸ್ಟ್

ಬೆಂಗಳೂರಿನಲ್ಲಿ(Bengaluru) ಮತ್ತೊಂದು ವಂಚನೆ ಜಾಲ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಲೈಫ್ ಇನ್ಶೂರೆನ್ಸ್ ಕಂಪನಿಗಳ ಹೆಸರಲ್ಲಿ ನಕಲಿ ವೆಬ್ ಸೈಟ್ ತೆರೆದು ಲಕ್ಷಾಂತರ  ರೂಪಾಯಿ ವಂಚಿಸಿದ್ದ ಅಸಾಮಿಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದರೆ. ಇತ್ತ ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ​ ಪೊಲೀಸರು, ಅಮಾಯಕರಿಗೆ ಇ-ಬ್ಯಾಂಕ್ ಗ್ಯಾರಂಟಿಗಳನ್ನು ಕೊಡುವುದಾಗಿ ಹೇಳಿ 11 ಜನರಿಗೆ ಕೋಟ್ಯಾಂತರ ರೂಪಾಯಿಯನ್ನು ಕುವೈತ್​ನಲ್ಲಿ ಕೂತು ವಂಚಿಸ್ತಿದ್ದ ಆರೋಪಿಗಳ ಫೈಕಿ ಓರ್ವ ಚಾರ್ಟೆಡ್ ಅಕೌಂಟೆಂಟ್​ನನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಮತ್ತೊಂದು ವಂಚನೆ ಜಾಲ: ಕುವೈತ್​ನಲ್ಲಿ ಕುಳಿತು ಕೋಟಿ ಕೋಟಿ ವಂಚಿಸಿದವ ಅರೆಸ್ಟ್
ಬಂಧಿತ ಆರೋಪಿಗಳು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 26, 2024 | 2:57 PM

ಬೆಂಗಳೂರು, ಮಾ.26: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಮತ್ತೊಂದು ವಂಚನೆ ಜಾಲ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಲೈಫ್ ಇನ್ಶೂರೆನ್ಸ್ ಕಂಪನಿಗಳ ಹೆಸರಲ್ಲಿ ನಕಲಿ ವೆಬ್ ಸೈಟ್ ತೆರೆದು ಲಕ್ಷಾಂತರ  ರೂಪಾಯಿ ವಂಚಿಸಿದ್ದ ಅಸಾಮಿಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ನೋಯ್ಡಾ ಮೂಲದ ಮನವೀರ್ ಸಿಂಗ್ ಬಂಧಿತ ಆರೋಪಿ. ಇತ ಆನ್​ಲೈನ್​ನಲ್ಲಿ ಪ್ರತಿಷ್ಠಿತ ಇನ್ಶೂರೆನ್ಸ್ ಕಂಪನಿಗಳ ನಕಲಿ ವೆಬ್ ಸೈಟ್ ಹರಿ ಬಿಟ್ಟಿದ್ದ. ಇದನ್ನು ಸರ್ಚ್ ಮಾಡಿದ ಜನ, ಇನ್ಶೂರೆನ್ಸ್ ಮಾಡಿಸಲು ಮುಂದಾಗುತ್ತಿದ್ದರು.

34 ಪ್ರಕರಣ ದಾಖಲು, ಸುಮಾರು 4.5 ಕೋಟಿ ವಂಚನೆ

ಬಳಿಕ ಆನ್‌ಲೈನ್ ಮೂಲಕವೇ ಸಾರ್ವಜನಿಕರು ಆರೋಪಿಯನ್ನ ಸಂಪರ್ಕಿಸುತ್ತಿದ್ದರು. ನಂತರ ಹುಡುಗನನ್ನ ಕಳುಹಿಸಿ ಡಾಕ್ಯುಮೆಂಟ್​ಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪೋಟೊಸ್, ಚೆಕ್ ಪಡೆಯುತ್ತಿದ್ದ. ಇದಾದ ಬಳಿಕ ಸಾರ್ವಜನಿಕರಿಗೆ ನಕಲಿ ಪಾಲಿಸಿ ಬಾಂಡ್ ಕಳುಹಿಸಿ, ಪ್ರತಿ ತಿಂಗಳು ಇನ್ಸೂರೆನ್ಸ್ ಅಮೌಂಟ್ ತಾನೇ ಖಾತೆಗೆ ಹಾಕಿಕೊಳ್ಳುತ್ತಿದ್ದ. ಹೀಗೆ ಬೆಂಗಳೂರು ನಗರದಲ್ಲಿ ಹಲವರಿಗೆ ವಂಚಿಸಿದ್ದು, ಈ ಸಂಬಂಧ 34 ಪ್ರಕರಣ ದಾಖಲಾಗಿತ್ತು. ಇದೀಗ ಆತನನ್ನು ಬಂಧಿಸಲಾಗಿದ್ದು, ಸುಮಾರು 4.5 ಕೋಟಿ ವಂಚನೆ ಬೆಳಕಿಗೆ ಬಂದಿದೆ. ಜೊತೆಗೆ ಆರೋಪಿಯ ಆರು ಬ್ಯಾಂಕ್ ಖಾತೆಗಳನ್ನ ಪ್ರೀಜ್ ಮಾಡಿದ ಪೊಲೀಸರು, 15 ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:10 ಕೋಟಿ ರೂ ವಜ್ರವನ್ನು 3 ಕೋಟಿಗೆ ಕೊಡುವುದಾಗಿ ಹೇಳಿ ವಂಚನೆ: ನಾಲ್ವರ ಬಂಧನ

ಕುವೈತ್​ನಲ್ಲಿ ಕುಳಿತು ಕೋಟಿ ಕೋಟಿ ವಂಚಿಸುತ್ತಿದ್ದ ಸಿಎ ಬಂಧಿಸಿದ ಸಿಸಿಬಿ

ಬೆಂಗಳೂರು: ಅಮಾಯಕರಿಗೆ ಇ-ಬ್ಯಾಂಕ್ ಗ್ಯಾರಂಟಿಗಳನ್ನು ಕೊಡುವುದಾಗಿ ಹೇಳಿ 11 ಜನರಿಗೆ ಕೋಟ್ಯಾಂತರ ರೂಪಾಯಿಯನ್ನು ಕುವೈತ್​ನಲ್ಲಿ ಕೂತು ವಂಚಿಸ್ತಿದ್ದ ಆರೋಪಿಗಳ ಫೈಕಿ ಓರ್ವ ಚಾರ್ಟೆಡ್ ಅಕೌಂಟೆಂಟ್​ನನ್ನು ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ​ ಪೊಲೀಸರು ಬಂಧಿಸಿದ್ದಾರೆ. ಕುವೈತ್​​ನಲ್ಲಿ ಕುಳಿತು 118 ಕೋಟಿ ಮೊತ್ತದ ನಕಲಿ ಇ ಬ್ಯಾಂಕ್ ಗ್ಯಾರಂಟಿ ಒದಗಿಸುತ್ತಿದ್ದ ಇತ, ಬ್ಯಾಂಕ್ ಗ್ಯಾರಂಟಿ ಹೆಸರಲ್ಲಿ ಐದು ಕೋಟಿ ಕಮಿಷನ್ ಪಡೆದು ವಂಚಿಸಿದ್ದ. Nesl (National e governance service limited) ಹೆಸರಲ್ಲಿ ICICI ಬ್ಯಾಂಕ್ ಹಾಗೂ South Indian Bank ಹೆಸರಲ್ಲೂ ಅಪ್ ಲೋಡ್ ಮಾಡಿದ್ದರು.ಬಂಧಿತನಿಂದ 2 ಲ್ಯಾಪ್ ಟಾಪ್, 06 ಮೊಬೈಲ್ ಪೋನ್, 01 ಪೆನ್ ಡ್ರೈವ್, 10 ವಿವಿಧ ಬ್ಯಾಂಕ್ ಚೆಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ದ ಲುಕ್ ಔಟ್ ಸರ್ಕ್ಯೂಲರ್ ಹೊರಡಿಸಿದ್ದ ಪೊಲೀಸರು, ಕಳೆದ ಮಾರ್ಚ್ 13 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳ ಸಹಾಯದಿಂದ ಆರೋಪಿಯನ್ನ ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ