AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್ ಹಲ್ಲೆ; ಪೊಲೀಸ್ ವಶಕ್ಕೆ

ಬೆಂಗಳೂರಿನಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಬಿಎಂಟಿಸಿ (BMTC) ಬಸ್ ನಿರ್ವಾಹಕ ಟಿಕೆಟ್ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಹಿನ್ನಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354A ಅಡಿಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ.

ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್ ಹಲ್ಲೆ;  ಪೊಲೀಸ್ ವಶಕ್ಕೆ
ಸಾಂದರ್ಭಿಕ ಚಿತ್ರ
ರಾಚಪ್ಪಾಜಿ ನಾಯ್ಕ್
| Updated By: ಕಿರಣ್ ಹನುಮಂತ್​ ಮಾದಾರ್|

Updated on:Mar 26, 2024 | 5:41 PM

Share

ಬೆಂಗಳೂರು, ಮಾ.26: ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್ ನಿರ್ವಾಹಕ ಟಿಕೆಟ್ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಇಂದು ಬೆಳಗ್ಗೆ 10 ಗಂಟೆಗೆ ಸಿದ್ದಾಪುರ ವ್ಯಾಪ್ತಿಯ   ಹೊಸೂರು ರಸ್ತೆಯ ಡೈರಿ ಸರ್ಕಲ್ ಬಳಿ ನಡೆದಿದೆ. ತನ್ಜಿಲಾ ಇಸ್ಮಾಯಿಲ್ ಎಂಬ ಮಹಿಳೆ ಟಿಕೆಟ್​ ಕೇಳಿದ್ದಾಳೆ. ಈ ವೇಳೆ ಕಂಡಕ್ಟರ್, ಕೊಡ್ತಿನಿ‌ ಇರಿ ಎಂದಿದ್ದಾನೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಕಂಡಕ್ಟರ್​, ಹಲ್ಲೆ ನಡೆಸಿದ್ದಾನೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354A, 323, 506, 509 ಅಡಿಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ.

ಕಂಡಕ್ಟರ್ ಹೊನ್ನಪ್ಪನನ್ನು ವಶಕ್ಕೆ ಪಡೆದ ಸಿದ್ದಾಪುರ ಪೊಲೀಸರು

ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಸಿದ್ದಾಪುರ ಪೊಲೀಸರು, ಕಂಡಕ್ಟರ್ ಹೊನ್ನಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಬಸ್ ಡಿಪೋ 34ರ ಕಂಡಕ್ಟರ್ ಆಗಿರುವ ಹೊನ್ನಪ್ಪ, ಟಿಕೆಟ್ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆಗೈದಿದ್ದ. ಬಳಿಕ ತನ್ಜಿಲಾ ಇಸ್ಮಾಯಿಲ್ ಅವರು ದೂರು ದಾಖಲಿಸಿದ್ದರು. ಅದರಂತೆ ಇದೀಗ ಅರೆಸ್ಟ್ ಮಾಡಲಾಗಿದೆ.

ದೂರಿನಲ್ಲೇನಿದೆ?

ಘಟನೆ ಬಳಿಕ ತನ್ ಜೀಲಾ ಅವರು ಠಾಣೆಗೆ ಹಾಜರಾಗಿ ಇಂದು ಬೆಳಿಗ್ಗೆ 09-45 ಗಂಟೆಗೆ ಬಿಳೆಕಳ್ಳಿಯಿಂದ ಶಿವಾಜಿ ನಗರಕ್ಕೆ ಬಿಎಂಟಿಸಿ ಬಸ್ ನಂ.ಕೆಎ-57-ಎಫ್-1602 ರೂಟ್ ನಂ.368 ರಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಾನು ಬಸ್ ಕಂಡೆಕ್ಟರ್ ರವರಿಗೆ ಬಿಳೆಕಳ್ಳಿಯಿಂದ ಶಿವಾಜಿ ನಗರಕ್ಕೆ ಟಿಕೆಟ್ ನೀಡಲು ಕೇಳಿದಾಗ ಕಂಡೆಕ್ಟರ್ ಕಾಯಲು ಹೇಳಿ ನೀಡಿರುವುದಿಲ್ಲ, ಮತ್ತೆ ಮತ್ತೆ ಕೇಳಿದರೂ ನೀಡಿರುವುದಿಲ್ಲ, ನಂತರ ನಾನು ಡೈರಿ ಸರ್ಕಲ್ ಹತ್ತಿರ ಮತ್ತೋಮ್ಮೆ ಟಿಕೆಟ್ ಕೇಳಲಾಗಿ ಟಿಕೆಟ್ ನೀಡದೆ ಕಾಯಲು ತಿಳಿಸಿರುತ್ತಾರೆ. ನಂತರ ಸುಮಾರು ಬೆಳಿಗ್ಗೆ 10-15 ಗಂಟೆಗೆ ನಾನು ಕಂಡೆಕ್ಟರ್ ರವರಿಗೆ ಜೊರಾಗಿ ಟಿಕೆಟ್ ನೀಡಲು ಕೇಳಲಾಗಿ ಬಸ್ ಕಂಡೆಕ್ಟರ್ ನೀಡಿರುವುದಿಲ್ಲ ನಂತರ ನಾನು ಬಸ್ ಡ್ರೈವರ್ ರವರಿಗೆ ದೂರು ನೀಡುವುದಕ್ಕೆ ಪೊಲೀಸ್ ಸ್ಟೇಷನ್ ಬಳಿ ಬಸ್ ನಿಲ್ಲಿಸಲು ಹೇಳಿದಾಗ ನನ್ನ ಬಳಿಗೆ ಕಂಡೆಕ್ಟರ್ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನನ್ನ ಬಟ್ಟೆ ಹಿಡಿದು, ತಲೆ ಕೂದಲು ಎಳೆದು ಕೈಯಿಂದ ಮುಖಕ್ಕೆ ಹೊಡೆದಾಗ ಕಂಡಕ್ಟರ್ ಗೆ ತಳ್ಳಿರುತ್ತೇನೆ.

ನಂತರ ನಾನು ಮೊಬೈಲ್ ನಲ್ಲಿ ವಿಡಿಯೋ ಮಾಡಲು ಹೋದಾಗ ನನ್ನ ಕೈಯಿಂದ ಮೊಬೈಲ್ ಕಿತ್ತು ಕೆಳಗೆ ಬಿಸಾಕಿ ನಾವು ಇದೇ ಬಸ್ ರೂಟ್ ನಲ್ಲಿ ದಿನಾ ಓಡಾಡುತ್ತೇವೆ ಮತ್ತೋಮ್ಮೆ ಇದೇ ಬಸ್ ನಲ್ಲಿ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಹೇಳಿ ನನ್ನನ್ನು ವಿಲ್ಸನ್ ಗಾರ್ಡನ್ ಬಳಿ ಬಸ್ ನಿಲ್ಲಿಸಿ ನನ್ನನ್ನು ಕೆಳಗಿ ಇಳಿಸಿ ಹೋಗಿರುತ್ತಾರೆ. ಆದ್ದರಿಂದ ನಾನು ಬಸ್ ಟಿಕೆಟ್ ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ನನ್ನ ಬಟ್ಟೆ ಹಿಡಿದು ಕೂದಲು ಹಿಡಿದು ಎಳೆದಾಡಿ ನನ್ನನ್ನು ಕೈಯಿಂದ ಹೊಡೆದಿರುವ ಬಿಎಂಟಿಸಿ ಬಸ್ ನಂ. ಕೆಎ-57-ಎಫ್-1602 ರೂಟ್ ನಂ.368 ನ ಕಂಡಕ್ಟರ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ವಿವಸ್ತ್ರಗೊಳಿಸಿ ಹಲ್ಲೆ, ಕಂಡಕ್ಟರ್​ಗೆ ಟಾರ್ಚರ್: ಇವೇ ಕಾಂಗ್ರೆಸ್​ ಸರ್ಕಾರದ ಅಸಲಿ ಮಹಿಳಾ ಸಬಲೀಕರಣವೆಂದ ಬಿಜೆಪಿ

ಬಣ್ಣದೋಕಳಿಯಲ್ಲಿ ಪರಸ್ಪರ ಬಡಿದಾಟ

ಯಾದಗಿರಿ: ನಗರದ ಡಾ.ಅಂಬೇಡ್ಕರ್ ವೃತ್ತದ ಬಳಿ ಬಣ್ಣದೋಕುಳಿ ವೇಳೆ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಎರಡು ಗುಂಪುಗಳ ಯುವಕರ ನಡುವೆ ಜಗಳ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಈ ಗಲಾಟೆ ನಡೆದಿದ್ದು, ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸುತ್ತಿದ್ದಂತೆ ಜೂಟ್ ಹೇಳಿದ್ದಾರೆ. ಈ ಕುರಿತು ಯಾದಗಿರಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Tue, 26 March 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ