ಮಂಡ್ಯ ಜೆಡಿಎಸ್ ಪಕ್ಷದ ಹೃದಯ, ನಮ್ಮ ಬೇರು ಪುನಃ ಗಟ್ಟಿಗೊಳಿಸಲು ಅಲ್ಲಿಯ ಜನತೆಯೇ ನೆರವಾಗಲಿದ್ದಾರೆ: ಕುಮಾರಸ್ವಾಮಿ

ಮಂಡ್ಯ ಜೆಡಿಎಸ್ ಪಕ್ಷದ ಹೃದಯ, ನಮ್ಮ ಬೇರು ಪುನಃ ಗಟ್ಟಿಗೊಳಿಸಲು ಅಲ್ಲಿಯ ಜನತೆಯೇ ನೆರವಾಗಲಿದ್ದಾರೆ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 26, 2024 | 5:45 PM

ದೇಶದಲ್ಲಿ ಮತ್ತೊಮ್ಮೆ ಎನ್ ಡಿಎ ಸರ್ಕಾರ ರಚನೆಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಮಂತ್ರಿಯಾಗಲು ತಮ್ಮ ಪಕ್ಷ ಅಳಿಲು ಸೇವೆ ಸ್ಲಲಿಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ತಮ್ಮ ಪಕ್ಷದ ಅಸ್ತಿತ್ವ ಉಳಿದು ಅದರ ಬೇರು ಗಟ್ಟಿಗೊಳ್ಳಲು ತಾವು ಬಿಜೆಪಿ ಜೊತೆ ಮೈತ್ರಿ ಬೆಳೆಸಿರುವುದಾಗಿ ಹೇಳಿದ ಅವರುತಮ್ಮ ಪಕ್ಷ ಮೊದಲಿನ ಹಾಗೆ ಬೆಳೆಯಲು ಮಂಡ್ಯದ ಜನತೆ ನೆರವಾಗಲಿದ್ದಾರೆ ಎಂದರು.

ಬೆಂಗಳೂರು: ಹೃದಯದ ಶಸ್ತ್ರಚಿಕಿತ್ಸೆಗೊಳಗಾದ (heart surgery) ಬಳಿಕ ಚೇತರಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಂದು ನಗರದಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದರು. ಹಲವಾರು ವಿಷಯಗಳ ಬಗ್ಗೆ ಅವರು ಮಾತಾಡಿದರಾದರೂ ಕೋಲಾರ ಮತ್ತು ಮಂಡ್ಯದಿಂದ ಯಾರು ಸ್ಪರ್ಧಿಸಲಿದ್ದಾರೆ ಅನ್ನೋದನ್ನು ಗುಪ್ತವಾಗೇ ಇಟ್ಟರು. ಜೆಡಿಎಸ್ ಶಾಸಕರ ಸಭೆ (JDS legislators meet) ನಡೆಸಿದ ಬಳಿ ಹೆಸರುಗಳನ್ನು ಬಹಿರಂಗಗೊಳಿಸುವುದಾಗಿ ಕುಮಾರಸ್ವಾಮಿ ಹೇಳಿದರು. ದೇಶದಲ್ಲಿ ಮತ್ತೊಮ್ಮೆ ಎನ್ ಡಿಎ ಸರ್ಕಾರ ರಚನೆಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಮಂತ್ರಿಯಾಗಲು ತಮ್ಮ ಪಕ್ಷ ಅಳಿಲು ಸೇವೆ ಸ್ಲಲಿಸುತ್ತಿದೆ ಎಂದು ಅವರು ಹೇಳಿದರು. ತಮ್ಮ ಪಕ್ಷದ ಅಸ್ತಿತ್ವ ಉಳಿದು ಅದರ ಬೇರು ಗಟ್ಟಿಗೊಳ್ಳಲು ತಾವು ಬಿಜೆಪಿ ಜೊತೆ ಮೈತ್ರಿ ಬೆಳೆಸಿರುವುದಾಗಿ ಹೇಳಿದ ಕುಮಾರಸ್ವಾಮಿ ತಮ್ಮ ಪಕ್ಷ ಮೊದಲಿನ ಹಾಗೆ ಬೆಳೆಯಲು ಮಂಡ್ಯದ ಜನತೆ ನೆರವಾಗಲಿದ್ದಾರೆ ಯಾಕೆಂದರೆ ಮಂಡ್ಯ ಜೆಡಿಎಸ್ ಪಕ್ಷದ ಹೃದಯ ಎಂದರು. 2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನೈತಿಕ ಗೆಲುವು ಸಿಕ್ಕಿದೆ, ಅಂಕಿ-ಅಂಶಗಳ ಆಧಾರದಲ್ಲಿ ಪಕ್ಷ ಸೋತಿರಬಹುದು, ಅದರೆ ತಾಂತ್ರಿಕವಾಗಿ, ನೈತಿಕವಾಗಿ ತಾವು ಗೆದ್ದಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರಗಳಿಂದ ತಾನ್ಯಾವತ್ತೂ ದೂರವಾಗಲ್ಲ ಎಂದು ಹೇಳಿದ ಕುಮಾರಸ್ವಾಮಿ ಆ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಿದ್ದೇ ತಾನು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಡ್ಯದಲ್ಲಿ ಕುಮಾರಸ್ವಾಮಿ ಗೆದ್ರೆ ಚನ್ನಪಟ್ಟಣದಲ್ಲಿ ನಿಖಿಲ್ ಪ್ರತಿಷ್ಠಾಪನೆ: ಯೋಗೇಶ್ವರ್​ಗೆ ಕಾಂಗ್ರೆಸ್ ಗಾಳ