Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಎಂದು ಹೇಳುವವರ ಕಪಾಳಕ್ಕೆ ಹೊಡೆಯಿರಿ: ಪ್ರಚೋದನಕಾರಿ ಹೇಳಿಕೆ ಸಮರ್ಥಿಸಿಕೊಂಡ ತಂಗಡಗಿ

ಮೋದಿ ಮೋದಿ ಎಂದು ಘೋಷಣೆ ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಡುವೆ, ತಮ್ಮ ಹೇಳಿಕೆಯನ್ನು ತಂಗಡಗಿ ಸಮರ್ಥಿಸಿಕೊಂಡಿದ್ದಾರೆ.

ಮೋದಿ ಎಂದು ಹೇಳುವವರ ಕಪಾಳಕ್ಕೆ ಹೊಡೆಯಿರಿ: ಪ್ರಚೋದನಕಾರಿ ಹೇಳಿಕೆ ಸಮರ್ಥಿಸಿಕೊಂಡ ತಂಗಡಗಿ
ಮೋದಿ ಎಂದು ಹೇಳುವವರ ಕಪಾಳಕ್ಕೆ ಹೊಡೆಯಿರಿ: ಪ್ರಚೋದನಕಾರಿ ಹೇಳಿಕೆ ಸಮರ್ಥಿಸಿಕೊಂಡ ತಂಗಡಗಿ Image Credit source: FILE PHOTO
Follow us
ಪ್ರಸನ್ನ ಗಾಂವ್ಕರ್​
| Updated By: Rakesh Nayak Manchi

Updated on:Mar 26, 2024 | 2:40 PM

ಬೆಂಗಳೂರು, ಮಾ.26: ಮೋದಿ ಮೋದಿ ಎಂದು ಘೋಷಣೆ ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಡುವೆ, ತಮ್ಮ ಹೇಳಿಕೆಯನ್ನು ತಂಗಡಗಿ ಸಮರ್ಥಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲಿ ನಾನು ಭಾಷಣ ಮಾಡಿದ್ದೆ. ಬಿಜೆಪಿಯವರು (BJP) ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದೆ ಎಂದರು.

ಸಂಸ್ಕಾರದ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಬಿಜೆಪಿಯ ಭಾಷೆಯಲ್ಲಿ ಉತ್ತರ ಕೊಡುವುದೂ ಗೊತ್ತು. ನನಗೆ ನಮ್ಮ ಪಕ್ಷದ ನಾಯಕರು ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಯುವಕರಿಗೆ ಬಿಜೆಪಿ ದಾರಿ ತಪ್ಪಿಸುತ್ತಿದ್ದಾರೆ ಅಂತ ನಾನು ಕಳಕಳಿಯ ಮಾತನಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಎಷ್ಟು ಸಲ ನೀವು ತ್ರಿಶೂಲ ಚಾಕು ಚೂರಿ ಹಿಡಿದುಕೊಂಡು ಓಡಾಡಿದ್ದೀರಿ ನಿಮ್ಮನ್ನು ಏನು ಮಾಡಬೇಕು ನಾವು ಸತ್ಯ ಹೇಳಿದರೆ ನಿಮಗೆ ಉರಿಯುತ್ತದೆ, ಮೆಣಸಿನಕಾಯಿ ತಿಂದಂತಾಗುತ್ತಾ? ನಾನು ಮೋದಿಯವರ 10 ವರ್ಷದ ಟ್ರ್ಯಾಕ್ ರೆಕಾರ್ಡ್ ಕೇಳಿದ್ದೇನೆ, ತಪ್ಪೇನಿದೆ? ನಾನು ಮಾತಾಡಿದ್ದರಲ್ಲಿ ಯಾವುದಾದರೂ ಅಶ್ಲೀಲ ಪದಗಳಿತ್ತಾ? ವಿರೋಧ ಪಕ್ಷದವನಾಗಿ ನಾನು ನಿಮ್ಮನ್ನು ಹಾಡಿ ಹೊಗಳಬೇಕೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮೋದಿ ಮೋದಿ ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದ ತಂಗಡಗಿ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು

ನಾನು ಯಾವ ಕೆಟ್ಟ ಪದ ಬಳಕೆ ಮಾಡಿದ್ದೇನೆ ಹೇಳಿ? ಉದ್ಯೋಗ‌ ಕೊಡುವುದರ ಬಗ್ಗೆ ಮಾತ್ರ ಬಿಜೆಪಿ ಉತ್ತರ ಕೊಡಲಿ ನೋಡೋಣ. ನಾನು ಮಾಡಿದ ಭಾಷಣ ಇನ್ನೊಮ್ಮೆ ಕೇಳಿ ಉತ್ತರ ಕೊಡಲಿ. ಭದ್ರಾ ಮೇಲ್ದಂಡೆ ಯೋಜನೆ 5300 ಕೋಟಿಯ ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಿದ್ದಾರೆ. ಆ ಹಣ ಬಿಡುಗಡೆ ಮಾಡಿದ್ದಾರಾ? ಇದಕ್ಕೆ ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ, ಸಿಟಿ ರವಿ ಉತ್ತರ ನೀಡಲಿ. ನಾವು ಉತ್ತರ ಕರ್ನಾಟಕದವರು ನಮಗೆ ಪುಸ್ತಕದ ಕನ್ನಡ ಮಾತನಾಡಲು ಬರುವುದಿಲ್ಲ. ನಮ್ಮ ಭಾಷೆ ಒರಟು. ಬಿಜೆಪಿಯ ಸಂಸ್ಕಾರ ಏನು ಅಂತ ನನಗೂ ಗೊತ್ತಿದೆ, ಅವರಿಂದ ಕಲಿಬೇಕಿಲ್ಲ ಎಂದರು.

2 ಕೋಟಿ ಉದ್ಯೋಗಗಳನ್ನು ಮೋದಿ ಕೊಟ್ಟಿದ್ದರೆ ನಾನೂ ಮೋದಿಗೆ ಜೈ ಎಂದು ಹೇಳುತ್ತಿದೆ. ಸಂವಿಧಾನದ ಬಗ್ಗೆ ಗೌರವವೇ ಇಲ್ಲದವರು ನಿಮ್ಮ ಬಗ್ಗೆ ಮಾತಾಡಿದ್ದೇನೆ. ಬಸವರಾಜ ಜನ ಪಾಟ ಕಲಿಸ್ತಾರೆ ಅಂತ ಬೊಮ್ಮಾಯಿ ಹೇಳಿದ್ದಾರೆ. ಹೌದು ಜನ ಪಾಠ ಕಲಿಸಿದ್ದಕ್ಕೆ ನಿಮಗೆ 65, ನಮಗೆ 135 ಸ್ಥಾನಗಳು ಬಂದಿವೆ ಎಂದರು.

ಉತ್ತರ ಕರ್ನಾಟಕ ಭಾಷೆಯೊಳಗೆ ನಾನು ಭಾಷಣ ಮಾಡಿದ್ದೆ. ಸಹಜವಾದ ಮಾತುಗಳು ಬಂದಿದೆ. ಒಳ್ಳೆಯ ಗೆಳೆತನದೊಳಗೂ ನಾವು ಬೇರೆಬೇರೆ ಭಾಷೆ ಬಳಸುತ್ತೇವೆ. ಜನ ಏನು ಮಾಡುತ್ತಾರೆ ಅನ್ನೋದು ಜೂನ್ 4 ಕ್ಕೆ ನಿರ್ಧಾರ ಆಗಲಿದೆ ಎಂದರು.

ಸಿಟಿ ರವಿ ಹೇಳಿಕೆಗೆ ತಂಗಡಗಿ ತಿರುಗೇಟು

ಮೋದಿ ಮೋದಿ ಎಂದು ಹೇಳುತ್ತೇವೆ, ನೀವು ನಿಮ್ಮ ಅಪ್ಪನಿಗೆ ಹುಟ್ಟಿದವರಾದರೆ ಬಂದು ಹೊಡೆಯಿರಿ ಎಂಬ ಸಿಟಿ ರವಿ ಹೇಳಿಕೆಗೆ ತಿರುಗೇಟು ಕೊಟ್ಟ ತಂಗಡಗಿ, ಅವರಪ್ಪನಿಗೆ ಹುಟ್ಟಿದರೆ ಅಂತ ಸಿಟಿ ರವಿ ಒಂದು ಮಾತು ಹೇಳಿದ್ದಾರೆ. ನೀವು ಅಪ್ಪನಿಗೆ ಹುಟ್ಟಿದ್ರೆ ಅಂತ ನಾನು ಕೂಡ ಕೆಳಮಟ್ಟದಲ್ಲಿ ಕೇಳಬಹುದು. ಆದರೂ ನಿಮಗೆ ಉತ್ತರ ಬೇಕು ಅಂದರೆ ನನ್ನ ತಾಯಿಯನ್ನು ಕರೆದುಕೊಂಡು ಬಿಜೆಪಿ ಆಫೀಸಿಗೆ ಬರುತ್ತೇನೆ ಕೇಳಿಬಿಡಿ. ಸಿಟಿ ರವಿ ಮಾತಾಡಿದ್ದು ಅಸಂಬಂದ್ದ ಅಲ್ವಾ? ನೀನು ಹುಟ್ಟಿದ್ದು ನಾನು ಹುಟ್ಟಿದ್ದು ನಮ್ಮ ತಾಯಂದಿರಿಗೆ ಮಾತ್ರ ಗೊತ್ತಿರುತ್ತದೆ. ನಾನು ನನ್ನ ತಾಯಿ ಕರೆದುಕೊಂಡು ಬಿಜೆಪಿ ಆಫೀಸಿಗೆ ಬರುತ್ತೇನೆ ಎಂದರು.

ಈಶ್ವರಪ್ಪ ಎಷ್ಟು ಯೋಗ್ಯರು ಅಂತ ಬಿಜೆಪಿಯವರಿಗೆ ಗೊತ್ತಿದೆ. ಅದಕ್ಕೆ ಈಶ್ವರಪ್ಪ ಯೋಗ್ಯತೆಗೆ ಎಂಪಿ ಟಿಕೇಟ್, ಎಂಎಲ್ಎ ಟಿಕೇಟ್ ಸಿಕ್ಕಿಲ್ಲ. ಇವರ ಯೋಗ್ಯತೆ ಬಹಳ ಗೊತ್ತಿದೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Tue, 26 March 24

ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್