ಸಚಿವ ತಂಗಡಗಿ ಜಿಲ್ಲೆಯಲ್ಲಿ ಸಂಸ್ಕ್ರತಿ ಇಲಾಖೆ ಅಧಿಕಾರಿಗಳ ವಿರುದ್ಧ ಕಮಿಷನ್ ವ್ಯವಹಾರ ಆರೋಪ, ಏನಿದು ಪ್ರಕರಣ?
Minister Shivraj Thangadagi : ಹೌದು ರಾಜ್ಯದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಸ್ವಜಿಲ್ಲೆಯಾಗಿರುವ ಕೊಪ್ಪಳ ಜಿಲ್ಲೆಯ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧಿಕಾರಿಗಳ ವಿರುದ್ದ ಕೆಲ ಕಲಾವಿದರು ಗಂಭೀರ ಆರೋಪವನ್ನು ಮಾಡಿದ್ದಾರೆ. ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮಗಳಿಗೆ ಕಲಾವಿದರ ಆಯ್ಕೆಯಲ್ಲಿ ತಾರತಮ್ಯ ಮಾಡ್ತಿದ್ದಾರೆ. ಯಾರು ಕಮಿಷನ್ ನೀಡ್ತಾರೋ ಅವರಿಗೆ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡ್ತಿದ್ದಾರೆ ಅಂತ ಆರೋಪಿಸಿದ್ದಾರೆ.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ (Kannada and Culture Department) ಸಚಿವ ಶಿವರಾಜ್ ತಂಗಡಗಿ ಅವರ (Shivraj Thangadagi) ಸ್ವಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ (Bribe) ಆರೋಪ ಕೇಳಿ ಬಂದಿದೆ. ಹೌದು ಕೊಪ್ಪಳ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಕನಕಗಿರಿ ಮತ್ತು ಆನೆಗೊಂದಿಯಲ್ಲಿ, ಎರಡೂ ಕಡೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಉತ್ಸವ ಮಾಡಲಾಗಿದೆ. ಆದ್ರೆ ಉತ್ಸವದ ಕಾರ್ಯಕ್ರಮಕ್ಕೆ ಕಲಾವಿದರ ಆಯ್ಕೆಯಲ್ಲಿ ಅಧಿಕಾರಿಗಳು ಕಮಿಷನ್ ವ್ಯವಹಾರ ಮಾಡಿದ್ದಾರೆ ಅಂತ ಕೆಲ ಕಲಾವಿದರು ಆರೋಪಿಸಿದ್ದಾರೆ.
ಹೌದು ರಾಜ್ಯದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಸ್ವಜಿಲ್ಲೆಯಾಗಿರುವ ಕೊಪ್ಪಳ ಜಿಲ್ಲೆಯ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧಿಕಾರಿಗಳ ವಿರುದ್ದ ಕೆಲ ಕಲಾವಿದರು ಗಂಭೀರ ಆರೋಪವನ್ನು ಮಾಡಿದ್ದಾರೆ. ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮಗಳಿಗೆ ಕಲಾವಿದರ ಆಯ್ಕೆಯಲ್ಲಿ ತಾರತಮ್ಯ ಮಾಡ್ತಿದ್ದಾರೆ. ಯಾರು ಕಮಿಷನ್ ನೀಡ್ತಾರೋ ಅವರಿಗೆ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡ್ತಿದ್ದಾರೆ. ಕಮಿಷನ್ ನೀಡದೆ ಇರೋರಿಗೆ ಅನ್ಯಾಯ ಮಾಡ್ತಿದ್ದಾರೆ ಅಂತ ಆರೋಪಿಸುತ್ತಿದ್ದಾರೆ.
ಕೊಪ್ಪಳ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿರೋ ಬಾಷಾ ಹಿರೇಮನಿ ಸೇರಿದಂತೆ ಕೆಲ ಕಲಾವಿಧರು, ಇಲಾಖೆಯ ಅಧಿಕಾರಿಗಳ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಗಂಭೀರ ಆರೋಪಕ್ಕೆ ಕಾರಣವಾಗಿರುವುದು ಇದೇ ತಿಂಗಳು ಕೊಪ್ಪಳ ಜಿಲ್ಲೆಯಲ್ಲಿ ನಡೆದಿದ್ದ ಎರಡು ಉತ್ಸವಗಳು. ಹೌದು ಮಾರ್ಚ್ 1 ಮತ್ತು 2 ರಂದು ಕನಕಗಿರಿ ಉತ್ಸವ ನಡೆದ್ರೆ, ಮಾರ್ಚ11 ಮತ್ತು 12 ರಂದು ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಆನೆಗೊಂದಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು.
ಸಚಿವರ ಸ್ವಜಿಲ್ಲೆ ಆಗಿರೋದರಿಂದ ಸಚಿವ ಶಿವರಾಜ್ ತಂಗಡಗಿ ಮುತುವರ್ಜಿ ವಹಿಸಿ ಎರಡು ಉತ್ಸವಗಳನ್ನು ಅದ್ದೂರಿಯಾಗಿ ನಡೆಸಿದ್ದಾರೆ. ಎರಡು ಉತ್ಸವದಲ್ಲಿ ಸ್ಥಳೀಯ ಕಲಾವಿದರು ಸೇರಿದಂತೆ ರಾಜ್ಯದ ವಿವಿಧಡೆಯಿಂದ ಬಂದಿದ್ದ ಕಲಾವಿದರು, ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನೀಡಿ, ಜನರನ್ನು ರಂಜಿಸಿದ್ದಾರೆ. ಆದ್ರೆ ಈ ಎರಡು ಉತ್ಸವದಲ್ಲಿ ಒಂದೇ ಕುಟುಂಬದ ಮೂವರಿಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಯಾರು ಕಮಿಷನ್ ನೀಡ್ತಾರೋ ಅವರಿಗೆ ಎರಡು ಉತ್ಸವದಲ್ಲಿ ಅವಕಾಶ ಮಾಡಿಕೊಡಲಾಗಿದೆ ಅಂತ ಕೆಲ ಕಲಾವಿದರು ಇಲಾಖೆಯ ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡುತ್ತಿದ್ದಾರೆ.
ಹೌದು ಉತ್ಸವದಲ್ಲಿ ಭಾಗಿಯಾಗಿರೋ ಸ್ಥಳೀಯ ಕಲಾವಿದರಿಗೆ ಒಂದು ಕಾರ್ಯಕ್ರಮಕ್ಕೆ 20-30 ಸಾವಿರ ಗೌರವಧನ ನೀಡಲಾಗಿದೆ. ಆದ್ರೆ ಜಿಲ್ಲೆಯಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ. ಪ್ರತಿಯೊಬ್ಬರಿಗೂ ಅವಕಾಶ ಸಿಗುವಂತೆ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು. ಆದ್ರೆ ಕೆಲವೆ ಕೆಲವರಿಗೆ ಹೆಚ್ಚಿನ ಕಾರ್ಯಕ್ರಮಗಳು ಸಿಗುತ್ತಿವೆ. ಇನ್ನು ಕೆಲ ಕಲಾವಿದರಿಗೆ ಇಡೀ ವರ್ಷಕ್ಕೆ ಒಂದೂ ಕಾರ್ಯಕ್ರಮ ಸಿಗ್ತಿಲ್ಲಾ.
ಇದರ ಹಿಂದೆ ಕಮಿಷನ್ ವ್ಯವಹಾರ ಇದೆ. ಈ ಬಗ್ಗೆ ತನಿಖೆ ನಡೆಸಿದ್ರೆ ಅಧಿಕಾರಿಗಳ ಅಸಲಿಯತ್ತು ಬಯಲಿಗೆ ಬರಲಿದೆ ಅಂತ ಆರೋಪಿಸಿದ್ದಾರೆ. ಇನ್ನು ಕೆಲ ಕಲಾವಿದರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಅವರು ಕನಕಗಿರಿ ಮತ್ತು ಆನೆಗೊಂದಿ ಉತ್ಸವಕ್ಕೆ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಸಮಿತಿ ರಚಿಸಿತ್ತು. ಸಮಿತಿಯೇ ಕಲಾವಿದರ ಆಯ್ಕೆ ಮಾಡಿದೆ. ಇನ್ನು ಕಮಿಷನ್ ಪಡೆಯಲಾಗುತ್ತಿದೆ ಅನ್ನೋದು ಸುಳ್ಳು. ಬೇಕಾದ ತನಿಖೆಯಾಗಲಿ, ತಾವು ತನಿಖೆಗೆ ಸಿದ್ದ ಅಂತ ಹೇಳುತ್ತಿದ್ದಾರೆ.
ಸಚಿವರ ಸ್ವಜಿಲ್ಲೆಯಲ್ಲಿಯೇ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಅಧಿಕಾರಿಗಳ ವಿರುದ್ದ ಇದೀಗ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆದ್ರೆ ಸತ್ಯಾಸತ್ಯಾತೆ ಬಯಲಾಗಲಿದೆ.