ಕೊಪ್ಪಳ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಅಂತ ಹರಕೆ ಹೊತ್ತ ಯುವಕ

ಕೊಪ್ಪಳ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಅಂತ ಹರಕೆ ಹೊತ್ತ ಯುವಕ

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ವಿವೇಕ ಬಿರಾದಾರ

Updated on: Mar 26, 2024 | 3:04 PM

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಹಾಗೂ ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ್ ಅವರಿಗೆ ಜಯವಾಗಲೆಂದು ಬಾಳೆ ಹಣ್ಣಿನ ಮೇಲೆ ಬರೆದು, ಕಾರಟಗಿ ತಾಲೂಕಿನ ಯರಡೋಣಾ ಗ್ರಾಮದ ಮುರುಡಬಸವೇಶ್ವರ ದೇವರ ರಥಕ್ಕೆ ಅಭಿಮಾನಿ ಎಸೆದಿದ್ದಾನೆ.

ಕೊಪ್ಪಳ, ಮಾರ್ಚ್​​ 26: ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ಪ್ರಧಾನಿಯಾಗಲಿ ಹಾಗೂ ಕೊಪ್ಪಳದಲ್ಲಿ ಬಿಜೆಪಿ (BJP) ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ್ ಅವರಿಗೆ ಜಯವಾಗಲೆಂದು ಬಾಳೆ ಹಣ್ಣಿನ ಮೇಲೆ ಬರೆದು, ಕಾರಟಗಿ (Kartagi) ತಾಲೂಕಿನ ಯರಡೋಣಾ ಗ್ರಾಮದ ಮುರುಡಬಸವೇಶ್ವರ ದೇವರ ರಥಕ್ಕೆ ಯುವಕನೋರ್ವ ಎಸೆದಿದ್ದಾನೆ. ಸೋಮವಾರ (ಮಾ.25) ಸಾಯಂಕಾಲ ಯರಡೋಣಾ ಗ್ರಾಮದ ಮುರುಡಬಸವೇಶ್ವರ ದೇವರ ರಥೋತ್ಸವ ಜರುಗಿತು. ಈ ವೇಳೆ ಯುವಕ ರಥಕ್ಕೆ ಬಾಳೆಹಣ್ಣು ಎಸೆದು ಮೋದಿ ಪ್ರಧಾನಿಯಾಗಲಿ ಎಂದು ಹರಕೆ ಹೊತ್ತುಕೊಂಡಿದ್ದಾನೆ.

ಮೋದಿ ಪ್ರಧಾನಿಯಾಗಲೆಂದು 102 ವರ್ಷದ ಅಜ್ಜಿಯ ಪಾರ್ಥನೆ

ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ ಶಿವಮ್ಮ ಎಂಬ 102 ವರ್ಷದ ಅಜ್ಜಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಮಠದವರೆಗು ಭೇಟಿ ನೀಡಿದ್ದರು. ದೇಶಕ್ಕೆ ಒಳ್ಳೆದಾಗಬೇಕು, ಮಳೆ-ಬೆಳೆ ಚೆನ್ನಾಗಿ ಆಗಬೇಕು. ಮೋದಿ ಮತ್ತೆ ಪ್ರಧಾನಿಯಾಗಬೇಕು. ಮೋದಿ ದೇಶಕ್ಕೆ ಒಳ್ಳೆದು ಮಾಡ್ತಾನೆ, ಅವನು ಬಂದ್ರೆ ಒಳ್ಳೆದಾಗುತ್ತೆ ಎನ್ನುತ್ತಾ ರಂಭಾಪುರಿ ಶ್ರೀಗಳ ದರ್ಶನ ಮಾಡಿ ಆಶೀರ್ವಾದ ಪಡೆದರು.

ಮಳೆ-ಬೆಳೆ ಇಲ್ಲ, ದೇಶದ ಜನ ಸಮಸ್ಯೆಯಲ್ಲಿದ್ದಾರೆ. ಕಾಡು ಪ್ರಾಣಿಗಳು ಕುಡಿಯೋಕೆ ನೀರಿಲ್ಲದೆ ಪರದಾಡುತ್ತಿವೆ. ದೇಶಕ್ಕೆ ಮೋದಿ ಪ್ರಧಾನಿಯಾದರೆ ಮಳೆ-ಬೆಳೆ ಆಗಿ ದೇಶ ಸುಭಿಕ್ಷವಾಗಿರುತ್ತೆ. ನನ್ನ ಸ್ವಾರ್ಥಕ್ಕಾಗಿ ಏನೂ ಇಲ್ಲ ಎಂದು ಶತಾಯುಷಿ ಶಿವಮ್ಮ ಹೇಳಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ