ನೆಲಮಂಗಲ, ಮಾ.25: ಬೇಸಿಗೆಯಲ್ಲಿ ಹನಿ ಹನಿ ನೀರಿಗಾಗಿ ಆಹಾಕಾರ(Water Crisis) ಎದ್ದಿದೆ. ಕುಡಿಯುವ ನೀರಿನ ದುರ್ಬಳಕೆ ಮಾಡಿದರೆ ದಂಡ ವಿಧಿಸುವುದಾಗಿ ಬೆಂಗಳೂರು (Bengaluru) ಜಲಮಂಡಳಿ ಎಚ್ಚರಿಕೆ ನೀಡಿದ್ದು, ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದೆ. ಈ ನಡುವೆ, ಟಿ.ದಾಸರಹಳ್ಳಿಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀಡಬೇಕಿದ್ದ ನೀರನ್ನು ಹೊಟೇಲ್, ಅಂಗಡಿಗಳಿಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಸಾರ್ವಜನಿಕರಿಗೆ ಉಚಿತವಾಗಿ ಹಂಚಬೇಕಿದ್ದ ನೀರನ್ನು ಟಿ.ದಾಸರಹಳ್ಳಿಯಲ್ಲಿ ಖಾಸಗಿ ಅಂಗಡಿ ಹಾಗೂ ಹೋಟೆಲ್‌ಗಳಿಗೆ ನೀರು ಮಾರಾಟ ಮಾಡಲಾಗುತ್ತಿದೆ. ಅಂಗಡಿ ಹಾಗೂ ಹೊಟೇಲ್ಗಳಿಗೆ ನೀರು ಬಿಟ್ಟು 500 ರೂಪಾಯಿ ಪಡೆಯುತ್ತಿದ್ದಾರೆ ಎಂದು ಅರೋಪಿಸಲಾಗಿದೆ. ನೀರು ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಸಾರ್ವಜನಿಕರು BWSSB ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Bangalore Water Crisis: ಕುಡಿಯಲು ಯೋಗ್ಯ ನೀರಿನ ದುರ್ಬಳಕೆ, 1 ಲಕ್ಷ ರೂಪಾಯಿಗೂ ಹೆಚ್ಚು ದಂಡ ಸಂಗ್ರಹಿಸಿದ ಜಲ ಮಂಡಳಿ
ಈ ಬಗ್ಗೆ ಟಿವಿ9 ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ BWSSB, ಟಿ.ದಾಸರಹಳ್ಳಿಯಲ್ಲಿ ನೀರು ಮಾರಾಟ ಮಾಡಿದ್ದ ಸಿಬ್ಬಂದಿ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೋಳಿ ಸಂಭ್ರಮದ ವೇಳೆ ಬೆಂಗಳೂರು ಜಲಮಂಡಳಿಯ ನಿಯಮಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ನಗರದ ಸರ್ಜಾಪುರ ಚಿಕ್ಕನಾಯಕನಹಳ್ಳಿಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಹೋಳಿ ಆಚರಿಸಿದ್ದಾರೆ. ಮನ ಟ್ರೋಪಿಕಲ್ ಅಪಾರ್ಟ್ಮೆಂಟ್ ಅಸೋಸಿಯೇಷನ್, ಡ್ರೈ ಡೇ ಹೋಲಿ ಬಿಟ್ಟು ರೈನ್ಸ್ ಡ್ಯಾನ್ಸ್ ಆಯೋಜಿಸಿದೆ. ನಗರದಲ್ಲಿ ನೀರಿಲ್ಲದ್ದರೂ ಕ್ಯಾರೇ ಎನ್ನದೆ ಹೋಲಿ ಆಚರಿಸಿದ್ದಾರೆ. ವರ್ತೂರಿನ ಖಾಸಗಿ ರೆಸಾರ್ಟ್ನಲ್ಲೂ ಹೋಳಿ ಆಚರಿಸಲಾಗಿದೆ.
ಹೋಳಿ ಹಬ್ಬದ ಪ್ರಯುಕ್ತ ರೈನ್ ವಾಟರ್ ಡ್ಯಾನ್ಸ್ ಮಾಡದಂತೆ ಜಲಮಂಡಳಿ ಸೂಚನೆ ನೀಡಿದೆ. ಆದರೂ ನಿಯಮವನ್ನು ಗಾಳಿಗೆ ತೂರಿ ಸ್ವಿಮ್ಮಿಂಗ್ ಪೂಲ್ಗಳನ್ನು ಹೋಳಿ ಆಚರಣೆ ಮಾಡಲಾಗಿದೆ. ನಗರದ ಪ್ರತಿಷ್ಠಿತ ಹೋಟೆಲ್, ರೆಸಾರ್ಟ್ಗಳಲ್ಲಿ ರೈನ್ ವಾಟರ್ ಡ್ಯಾನ್ಸ್ ಮಾಡಲಾಗಿದೆ. ಈ ಕುರಿತು ಜಲಮಂಡಳಿ ಮಾಹಿತಿ ಪಡೆಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ