Bengaluru Metro: 2025ರ ವೇಳೆಗೆ ಬೆಂಗಳೂರು 314 ಕಿಮೀ ಮೆಟ್ರೋ ರೈಲು ಸಂಪರ್ಕವನ್ನು ಹೊಂದಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 19, 2022 | 11:04 AM

ಬೆಂಗಳೂರು ಮೆಟ್ರೋ 2025ರ ವೇಳೆಗೆ 175 ಕಿಮೀ ಸಂಪರ್ಕವನ್ನು ಹೊಂದಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಶುಕ್ರವಾರ ಹೇಳಿದ್ದಾರೆ.

Bengaluru Metro: 2025ರ ವೇಳೆಗೆ ಬೆಂಗಳೂರು 314 ಕಿಮೀ ಮೆಟ್ರೋ ರೈಲು ಸಂಪರ್ಕವನ್ನು ಹೊಂದಲಿದೆ
ಬೆಂಗಳೂರು ನಮ್ಮ ಮೆಟ್ರೋ
Follow us on

ಬೆಂಗಳೂರು: ಬೆಂಗಳೂರು ಮೆಟ್ರೋ 2025ರ ವೇಳೆಗೆ 175 ಕಿಮೀ ಸಂಪರ್ಕವನ್ನು ಹೊಂದಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಶುಕ್ರವಾರ ಹೇಳಿದ್ದಾರೆ. ನಗರದಲ್ಲಿ ನಡೆದ ಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಜೂನ್ 2025 ರ ವೇಳೆಗೆ ಬೆಂಗಳೂರು ಮೆಟ್ರೋ 175 ಕಿಲೋಮೀಟರ್‌ ಸಂಪರ್ಕವನ್ನು ಕ್ರಮಿಸಲಿದೆ. ಎರಡನೇ ಮತ್ತು ಮೂರನೇ ಹಂತದ ಮೆಟ್ರೋ ಯೋಜನೆಗಳು ನಗರದಾದ್ಯಂತ ಮೆಟ್ರೋ ಸಂಪರ್ಕವನ್ನು ಹೆಚ್ಚಿಸಲಿವೆ ಮತ್ತು 2041 ರ ವೇಳೆಗೆ ಬೆಂಗಳೂರು 314 ಕಿಮೀ ಮೆಟ್ರೋ ರೈಲು ಸಂಪರ್ಕವನ್ನು ಹೊಂದುವ ಗುರಿಯನ್ನು ಹೊಂದಿದೆ.

ಬೆಂಗಳೂರಿನ ದೇವನಹಳ್ಳಿ ಪ್ರದೇಶದಲ್ಲಿ ಲೈನ್‌ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಗರಕ್ಕೆ ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ. ಪ್ರಯಾಣಿಕರು ತಮ್ಮ ಪ್ರದೇಶಗಳಿಗೆ ಮೆಟ್ರೋ ಸಂಪರ್ಕವನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಚಲನಶೀಲ ಸ್ಟಾರ್ಟ್-ಅಪ್‌ಗಳಿಂದ BMRCL ಮೂಲಕ ತಿಳಿಸುತ್ತಿದೆ. ಪ್ರಯಾಣಿಕರು ನೋಡಲ್ ಪಾಯಿಂಟ್ ತಲುಪಲು ಮತ್ತು ಅವರ ಕೆಲಸದ ಸ್ಥಳಗಳಿಗೆ ಪ್ರಯಾಣಿಸಲು ನಾವು ಚಲನಶೀಲತೆ ಸ್ಟಾರ್ಟ್-ಅಪ್​ ಕಂಪನಿಗಳೊಂದಿಗೆ ಸಹ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ಇದನ್ನು ಓದಿ: Bengaluru Metro: 3ನೇ ಹಂತದ ಡಿಪಿಆರ್‌ ಸಿದ್ಧ, ಬೆಂಗಳೂರಿಗರ ಸರಾಗ ಸಂಚಾರಕ್ಕೆ ಮತ್ತಷ್ಟು ಅನುಕೂಲ

ನಗರದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ದೊಡ್ಡ ಸವಾಲುವಾಗಿರುವ ಟ್ರಾಫಿಕ್​ಗಳನ್ನು ಕಡಿಮೆ ಮಾಡಲು ಮತ್ತು ಮೆಟ್ರೋದಿಂದ ತಮ್ಮ ನಗರಗಳಿಗೆ ಪ್ರಯಾಣಿಸಲು ಸಾರಿಗೆ ವ್ಯವಸ್ಥೆಗಳನ್ನು ಪೂರಕವಾಗಿ ಮಾಡಲಾಗಿದೆ. ಜತೆಗೆ ಬಹು-ಮಾದರಿ ವೈಯಕ್ತಿಕ ಸಾರಿಗೆ ವಿಧಾನಗಳಿಂದ ಸಾರ್ವಜನಿಕ ಸಾರಿಗೆಗೆ ಜನರನ್ನು ಸ್ಥಳಾಂತರಿಸುವುದು ಎಂದು ಅವರು ಹೇಳಿದರು. ಬೆಂಗಳೂರು ಮೆಟ್ರೋ ಇತ್ತೀಚೆಗೆ ಪ್ರಯಾಣಿಕರಿಗೆ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿಸುವ ಆಯ್ಕೆಯನ್ನು ಅನುಮತಿಸಿದೆ. ಈ ಕ್ರಮಕ್ಕೆ ಮೆಟ್ರೋ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಪರ್ವೇಜ್ ಹೇಳಿದ್ದಾರೆ.