Bengaluru Metro: 3ನೇ ಹಂತದ ಡಿಪಿಆರ್‌ ಸಿದ್ಧ, ಬೆಂಗಳೂರಿಗರ ಸರಾಗ ಸಂಚಾರಕ್ಕೆ ಮತ್ತಷ್ಟು ಅನುಕೂಲ

ನಮ್ಮ ಮೆಟ್ರೋ ಮೂರನೇ ಹಂತದ ಪ್ರಾಜೆಕ್ಟ್ ರಿಪೋರ್ಟ್ ಸಿದ್ದವಾಗಿದ್ದು, ಇದರಿಂದ ಬೆಂಗಳೂರಿಗರ ಸಂಚಾರಕ್ಕೆ ಅನುಕೂಲವಾಗಲಿದೆ.

Bengaluru Metro: 3ನೇ ಹಂತದ ಡಿಪಿಆರ್‌ ಸಿದ್ಧ, ಬೆಂಗಳೂರಿಗರ ಸರಾಗ ಸಂಚಾರಕ್ಕೆ ಮತ್ತಷ್ಟು ಅನುಕೂಲ
ಮೆಟ್ರೋ ರೈಲು (ಸಂಗ್ರಹ ಚಿತ್ರ)
TV9kannada Web Team

| Edited By: TV9 SEO

Sep 24, 2022 | 12:48 PM

ಬೆಂಗಳೂರು: ಸಿಲಿಕಾನ್ ಸಿಟಿ ಜನರ ನೆಚ್ಚಿನ ಸಂಚಾರ ನಾಡಿಯಾಗಿರುವ ನಮ್ಮ ಮೆಟ್ರೋ (Namma Metro) ಅಭಿವೃದ್ಧಿಯತ್ತ ಮತ್ತೊಂದು ಹೆಜ್ಜೆ ಇಡ್ತಾಯಿದೆ.‌ ಮೊದಲನೇ ಹಂತವನ್ನ ಯಶಸ್ವಿಯಾಗಿ ಪೂರೈಸಿ, ಎರಡನೇ ಹಂತವನ್ನು ಅರ್ಧ ಕಂಪ್ಲೀಟ್ ಮಾಡಿದೆ. ಇದರ ಜೊತೆ ಜೊತೆಗೆ ಮೂರನೇ ಹಂತ ಡಿಪಿಆರ್(DPR) ಸಿದ್ದಪಡಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ ಬೆಂಗಳೂರಿಗೆ ಸರಾಗ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲಿದೆ. ಇನ್ನು ಈ ಪ್ರಾಜೆಕ್ಟ್ ನ ಕಂಪ್ಲೀಟ್ ಡೀಟೆಲ್ಸ್ ಈ ಕೆಳಿಗಿನಂತಿದೆ.

ನಮ್ಮ ಮೆಟ್ರೋ ಮೂರನೇ ಹಂತದ ಪ್ರಾಜೆಕ್ಟ್ ರಿಪೋರ್ಟ್ ಸಿದ್ದ..! ಮೆಟ್ರೋ ನಿಗಮ (BMRCL) ಎರಡನೇ ಹಂತದ ಸುರಂಗ ಮಾರ್ಗ ಹಾಗೂ ಎಲಿವೆಟೆಡ್ ಕಾಮಗಾರಿ ಜೊತೆ ಜೊತೆಗೆ ಮೂರನೇ ಹಂತದ ಮೆಟ್ರೋ ಡೀಟೆಲ್ ಪ್ರಾಜೆಕ್ಟ್ ರಿಪೋರ್ಟ್​ನ್ನು ಸಿದ್ದಪಡಿಸಿ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ‌. ಮೆಟ್ರೋ ನಿಗಮ ನೀಡಿರುವ ಡಿಪಿಆರ್ ಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿದ ನಂತರ ಕೇಂದ್ರದ ಮಿನಿಸ್ಟ್ರಿ ಆಫ್ ಹೌಸಿಂಗ್ ಅಫೇರ್ಸ್ ಗೆ ಕಳುಹಿಸಲಾಗುತ್ತದೆ.‌ ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಗ್ರೀನ್ ಸಿಗ್ನಲ್ ಕೊಟ್ರೆ ಮೆಟ್ರೋ ನಿಗಮ ಮೂರನೇ ಹಂತದ ಮೆಟ್ರೋ ಕಾಮಗಾರಿಯನ್ನ ಕೈಗೆತ್ತಿಗೊಳ್ಳಲಿದೆ.‌

ಮೆಟ್ರೊ ಮೂರನೇ ಹಂತದಲ್ಲಿವೆ 2 ಕಾರಿಡಾರ್​ಗಳು 1. ಮೊದಲನೇ ಕಾರಿಡಾರ್ ಜೆಪಿ ನಗರ 4th ಫೇಸ್ ನಿಂದ – ಹೆಬ್ಬಾಳದವರೆಗೆ ಒಟ್ಟು 32 ಕಿಲೊಮೀಟರ್ ಉದ್ದವಿದ್ದು, ರಾಜಕುಮಾರ್ ಸಮಾಧಿ, ಯಶವಂತಪುರ , ನ್ಯೂ ಬಿಇಎಲ್ ಸರ್ಕಲ್ ಮಾರ್ಗವಾಗಿ ಹೆಬ್ಬಾಳ ಸೇರಲಿದ್ದು ಒಟ್ಟು 22 ನಿಲ್ದಾಣಗಳನ್ನ ಹೊಂದಿದೆ. ಇನ್ನು ಮೊದಲನೇ ಕಾರಿಡಾರ್ ನಲ್ಲಿ ಮೈಸೂರು ರಸ್ತೆಯಲ್ಲಿ ಇಂಟರ್ಚೇಂಜ್ ನಿಲ್ದಾಣ ಬರಲಿದೆ.‌

2. ಎರಡನೇ ಕಾರಿಡಾರ್ ಮಾಗಡಿ ರಸ್ತೆಯ ಹೊಸಹಳ್ಳಿ ನಿಲ್ದಾಣದಿಂದ – ಕಡಬಗೆರೆಯವರೆಗಿದ್ದು ಒಟ್ಟು 12 ಕಿಲೋ ಮೀಟರ್ ಉದ್ದದ ಮಾರ್ಗ ಇದಾಗಿದೆ. ಕೆಹೆಚ್ ಬಿ ಕಾಲೋನಿ, ಸುಂಕದಕಟ್ಟೆ, ಬ್ಯಾಡರಹಳ್ಳಿ ಮಾರ್ಗವಾಗಿ ಕಡಬಗೆರೆಗೆ ಸಾಗಲಿದ್ದು ಒಟ್ಟು 9 ನಿಲ್ದಾಣಗಳನ್ನ ಹೊಂದಿದೆ.‌

ಮೆಟ್ರೋ 3ನೇ ಹಂತದ ಒಟ್ಟು ಕಾಮಗಾರಿ ವೆಚ್ಚ ಎಷ್ಟು? ರೈಲ್ವೆ ಸಚಿವಾಲಯದ ಸಲಹಾ ಸಂಸ್ಥೆಯಾದ ರೈಲ್‌ ಇಂಡಿಯಾ ಟೆಕ್ನಿಕಲ್‌ ಆ್ಯಂಡ್‌ ಎಕನಾಮಿಕ್‌ ಸರ್ವಿಸ್‌ ಲಿಮಿಟೆಡ್‌ (ಆರ್‌ಐಟಿಇಎಸ್‌) ಈ ಕುರಿತು ವರದಿ ಸಲ್ಲಿಸಿದೆ. 44.65 ಕಿ.ಮೀ.ನ ಯೋಜನೆಗೆ 13,000 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಪ್ರತಿ ದಿನ 6.35 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ.

2028ಕ್ಕೆ ಕಂಪ್ಲೀಟ್ ಮಾಡುವ ಗುರಿ ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳ ಪ್ರಕಾರ 2028ರೊಳಗೆ ಮೂರನೇ ಹಂತದ ಯೋಜನೆಯೂ ಕಾರ್ಯಗತಗೊಳ್ಳಲಿದೆ. 2025ರೊಳಗೆ ಏರ್‌ಪೋರ್ಟ್‌ ಲೈನ್‌(Airport Line) (2ಎ ಮತ್ತು 2ಬಿ) ಸೇರಿದಂತೆ ಎರಡನೇ ಹಂತದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಿ ಆ ಬಳಿಕ ಮೂರನೇ ಹಂತದ ಯೋಜನೆಯನ್ನು ಮೂರು ವರ್ಷದೊಳಗೆ ಜನ ಬಳಕೆಗೆ ಲಭ್ಯವಾಗುವಂತೆ ಮಾಡುವ ಗುರಿ ಇಟ್ಟುಕೊಂಡಿದೆ.

ಮೆಟ್ರೋ 3ನೇ ಹಂತದಲ್ಲಿ ಸುರಂಗ ಮಾರ್ಗವಿಲ್ಲ. ಮೆಟ್ರೋ ಮೂರನೇ ಹಂತದ ಆರಂಭಕ್ಕೆ ಎಲ್ಲಾ ತಯಾರಿಗಳು ನಡೆಯುತ್ತಿದ್ದು ಸರ್ವೆ ಮಾಡಿ ಸ್ಟೇಷನ್ ಜಾಗ ಫಿಕ್ಸ್ ಮಾಡಲಾಗ್ತಾಯಿದೆ.‌ ಮೆಟ್ರೋ ಮಾರ್ಗದ ಅಲೈನ್ಮೆಂಟ್ ನಲ್ಲಿ ಖಾಲಿಜಾಗ, ಸರ್ಕಾರಿ ಜಾಗ ಗಮನಿಸಿ ಭೂಸ್ವಾಧಿನಕ್ಕೂ ತಯಾರಿ ಮಾಡಲಾಗುತ್ತಿದೆ.‌ ಜೊತೆಗೆ ಮೆಟ್ರೋ ಸಾಗುವ ಮಾರ್ಗದಲ್ಲಿ ಜಲಮಂಡಳಿ, ಬೆಸ್ಕಾಂ ಲೈನ್ ಇದ್ಯಾ ಎಂಬುದ‌ನ್ನ ಚೆಕ್ ಮಾಡುವುದರ ಜೊತೆಗೆ ಟ್ರಾಫಿಕ್ ಸರ್ವೆ ಮಾಡಿ ನಿತ್ಯ ಪ್ರಯಾಣಿಕರು ಸಂಚರಿಸಬಹುದಾದ ರೈಡರ್ ಶಿಫ್ ಅಂದಾಜು ಮಾಡಲಾಗ್ತಾಯಿದೆ.

ಒಟ್​ನಲ್ಲಿ ಟ್ರಾಫಿಕ್ ನಗರ ಬೆಂಗಳೂರಿನ ಜನರ ಅವಶ್ಯಕತೆಗೆ ತಕ್ಕಂತೆ ಮೆಟ್ರೊ ಸಂಚಾರ ಮಾಡಲು ಸಿದ್ದವಾಗ್ತಾಯಿದ್ದು ಆದಷ್ಟು ಬೇಗ ಸಿಲಿಕಾನ್ ಸಿಟಿಯ ಸುತ್ತ ಮೆಟ್ರೋ ಸಂಚರಿಸಲಿ ಅನ್ನೋದೆ ಬೆಂಗಳೂರಿಗರ ಆಶಯ.

ಕಿರಣ್ ಸೂರ್ಯ ಟಿವಿ9 ಬೆಂಗಳೂರು..

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada