ಅಕ್ರಮವಾಗಿ ಆಧಾರ್ ಕಾರ್ಡ್​ ಮಾಡಿಕೊಡುತ್ತಿದ್ದ 6 ಜನರ ಬಂಧನ: ಸೀಲ್, ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ಜಪ್ತಿ

ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಶವ ಪತ್ತೆ ಆಗಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೈನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಕ್ರಮವಾಗಿ ಆಧಾರ್ ಕಾರ್ಡ್​ ಮಾಡಿಕೊಡುತ್ತಿದ್ದ 6 ಜನರ ಬಂಧನ: ಸೀಲ್, ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ಜಪ್ತಿ
ಆಧಾರ್ ಕಾರ್ಡ್​ (ಸಂಗ್ರಹ ಚಿತ್ರ)
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 24, 2022 | 4:23 PM

ಬೆಂಗಳೂರು: ಅಕ್ರಮವಾಗಿ ಆಧಾರ್ ಕಾರ್ಡ್ (Aadhaar card) ​ಮಾಡಿಕೊಡುತ್ತಿದ್ದ 6 ಜನರ ಬಂಧನ ಮಾಡಿದ್ದು, ಸೀಲ್, ಕಂಪ್ಯೂಟರ್, ಪ್ರಿಂಟರ್, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜಪ್ತಿ ಮಾಡಲಾಗಿದೆ. ಪ್ರವೀಣ್, ರಮೇಶ, ನಾಗರಾಜ್, ರೂಪಂ ಭಟ್ಟಾಚಾರ್ಜಿ, ರವಿ ಬಂಧಿತರು. ನಕಲಿ ವಿಳಾಸ, ಫೋಟೋ ಪಡೆದು ಆಧಾರ್ ಕಾರ್ಡ್​ ಮಾಡುತ್ತಿದ್ದರು. ಬೆಂಗಳೂರಿನ ಬೊಮ್ಮನಹಳ್ಳಿ ಠಾಣೆ ಪೊಲೀಸರು 6 ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಆರು ಜನರ ಪೈಕಿ ಒಬ್ಬೊಬ್ಬರು ಒಂದು ಜವಾಬ್ದಾರಿ ನಿರ್ವಹಿಸುತ್ತಿದ್ದರು. ವ್ಯವಸ್ಥಿತ ಜಾಲವನ್ನು ಬೊಮ್ಮನಹಳ್ಳಿ ಪೊಲೀಸರ ತಂಡ ಬಯಲಿಗೆಳೆದಿದೆ.

1 ಪ್ರವೀಣ್ – ಮೊಬೈಲ್ ಸೆಂಟರ್ ನಡೆಸುತ್ತಿದ್ದ ಆರೋಪಿ. ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಟ್ಟುಕೊಳ್ಳುತ್ತಿದ್ದ. ಆಧಾರ್ ಬೇಕಿರುವವರ ಮಾಹಿತಿ‌ ಪಡೆದು ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸುತ್ತಿದ್ದ. 2 ರಮೇಶ್ – ಆಟೋ ಚಾಲಕ. ಪ್ರವೀಣ್ ಕಳಿಸುತ್ತಿದ್ದ ಅರ್ಜಿದಾರನನ್ನ ಗೆಜೆಟೆಡ್ ಆಫೀಸರ್ ಬಳಿ‌ ಕರೆದೊಯ್ಯುತ್ತಿದ್ದ. 3 ಸುನಿಲ್.ಡಿ – ಪ್ರೈಮರಿ ಹೆಲ್ತ್ ಸೆಂಟರಿನ ನಿವೃತ್ತ ವೈದ್ಯ. ನಿವೃತ್ತಿ ನಂತರವೂ ಗೆಜೆಟೆಡ್ ಸೀಲ್​ನ್ನ ತನ್ನ ಬಳಿ‌ ಇಟ್ಟುಕೊಂಡಿದ್ದ. ಪ್ರವೀಣ್ ಕಳಿಸುವವರ ಅಪ್ಲಿಕೇಶನ್ ಪಡೆದು ಸೀಲ್ ಸಹಿ‌ ಹಾಕಿ ಕೊಡುತ್ತಿದ್ದ. 4- ನಾಗರಾಜ್ – ಖಾಸಗಿ ಬ್ಯಾಂಕ್ ಉದ್ಯೋಗಿ, ಅಧಿಕೃತವಾಗಿ ಆಧಾರ್ ಪಡೆಯಲು ಬೇಕಿರುವ ಈ ಸ್ಕ್ಯಾನರ್ ದುರ್ಬಳಕೆ ನಾಡಿಕೊಳ್ತಿದ್ದ. ಈ ಸ್ಕ್ಯಾನ್ ಮಾಡಿ ನಕಲಿ ದಾಖಲಾತಿಗಳ ಸಹಿತ ಆಧಾರ್ ಫಾರ್ಮ್ ಅಪ್‌ಲೋಡ್ ಮಾಡುತ್ತಿದ್ದ. 5 – ರೂಪಂ ಭಟ್ಟಾಚಾರ್ಜಿ – ಓರಿಸ್ಸಾ ಮೂಲದವನು. ಗಾರ್ಮೆಂಟ್ಸ್​ನಲ್ಲಿ ಸೂಪರ್ವೈಸರ್ ಕೆಪಸ ಮಾಡಿಕೊಂಡಿದ್ದ. ಸ್ಯಾಲರಿ ಪಡೆಯಲು ಕಡ್ಡಾಯವಾಗಿರುವುದರಿಂದ ಆಧಾರ್ ಬೇಕಿರುವವರನ್ನ ಪ್ರವೀಣ್​ಗೆ ರೆಫರ್ ಮಾಡುತ್ತಿದ್ದ. 6 ರವಿ – ಸರ್ಕಾರಿ ಆಸ್ಪತ್ರೆಯ ಉದ್ಯೋಗಿ, ಆಧಾರ್ ಅಗತ್ಯವಿರುವವರನ್ನ ಪ್ರವೀಣ್ ಬಳಿ ಕಳಿಸಿಕೊಡ್ತಿದ್ದ. ಪ್ರತಿ ಹಂತದಲ್ಲಿ‌ ನೂರಿನ್ನೂರು ರೂ. ಪಡೆದು ಆರೋಪಿಗಳು ಆಧಾರ್ ಪ್ರಕ್ರಿಯೆ ಕಂಪ್ಲೀಟ್ ಮಾಡಿಕೊಡ್ತಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿ  ಬೊಮ್ಮನಹಳ್ಳಿ‌ ಪೊಲೀಸರು ಜೈಲಿಗಟ್ಟಿದ್ದಾರೆ.

ಅನುಮಾನಾಸ್ಪದ ರೀತಿಯಲ್ಲಿ ಗರ್ಭಿಣಿ ಶವ ಪತ್ತೆ

ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಶವ ಪತ್ತೆ ಆಗಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೈನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಂದ್ರ ಮೂಲದ ಅನಿತಾ (28) ಮೃತ ಯುವತಿ. ಕುಟಂಬಸ್ಥರಿಂದಲೆ ಗರ್ಭಿಣಿಯ ಕೊಲೆ ಆರೋಪ ಕೇಳಿಬರುತ್ತಿದೆ. ಗಂಡ ಆನಂದ್ ಕುಮಾರ್​ನಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಒಂಬತ್ತು ವರ್ಷಗಳಿಂದೆ ಆನಂದ್ ಹಾಗೂ ಅನಿತಾ ಮದುವೆಯಾಗಿದ್ದರು. ಮದುವೆಯಾಗಿ ಆಂದ್ರದಿಂದ ಬೈನಹಳ್ಳಿ ಗ್ರಾಮದ ತೋಟದಲ್ಲಿ  ದಂಪತಿಗಳು ಕೆಲಸ ಮಾಡಿಕೊಂಡಿದ್ದರು. ತೋಟದ ಮಾಲೀಕರು ಕಿರುಕುಳ ನೀಡ್ತಿದ್ದರು ಅಂತ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆನಂದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಕ್ಕಳ ಕಳ್ಳರೆಂದು ಭಾವಿಸಿ ನಾಲ್ವರನ್ನು ಹಿಡಿದು ಥಳಿಸಿದ ಸಾರ್ವಜನಿಕರು

ವಿಜಯಪುರ: ಮಕ್ಕಳ ಕಳ್ಳರೆಂದು ಭಾವಿಸಿ ನಾಲ್ವರನ್ನು ಹಿಡಿದು ಸಾರ್ವಜನಿಕರು ಥಳಿಸಿರುವಂತಹ ಘಟನೆ ಜಿಲ್ಲೆಯ ಗ್ಯಾಂಗ್​ ಬಾವಡಿ ಪ್ರದೇಶದಲ್ಲಿ ನಡೆದಿದೆ. ಇಬ್ಬರು ಮಹಿಳೆಯರು, ಇಬ್ಬರು ಪುರುಷರನ್ನು ಹಿಡಿದು ಜನರಿಂದ ಹಲ್ಲೆ ಮಾಡಲಾಗಿದೆ.  ಹಲ್ಲೆಗೊಳಗಾದವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಾವು ದೆಹಲಿ ಮೂಲದವರಾಗಿದ್ದು, ಅಲಂಕಾರಿಕ ಪ್ಲಾಸ್ಟಿಕ್ ಹೂವು ಮಾರಲು ಬಂದಿದ್ದಾಗಿ ನಾಲ್ವರ ಹೇಳಿಕೆ ನೀಡಿದ್ದಾರೆ. ಒಂದು ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದಾಗಿ ಮಾಹಿತಿ ನೀಡಲಾಗಿದೆ. ಬಾಡಿಗೆ ನೀಡಿದವರು, ಇತರೆ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗಾಂಧಿಚೌಕ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada