Crime News: ಪೊಲೀಸ್ ಹಲ್ಲೆಯಿಂದ ವ್ಯಕ್ತಿ ಸಾವು? ಮಾದನಾಯಕನಹಳ್ಳಿ ಠಾಣೆ ಪಿಸಿಗಳ ವಿರುದ್ಧ ಮೃತನ ಕುಟುಂಬಸ್ಥರ ಆರೋಪ

ಲಾಠಿಯಿಂದ ಬಲರಾಮ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾಗಿದ್ದ ಬಲರಾಮನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ನಿನ್ನೆ ಬಲರಾಮ ಮೃತಪಟ್ಟಿದ್ದಾರೆ.

Crime News: ಪೊಲೀಸ್ ಹಲ್ಲೆಯಿಂದ ವ್ಯಕ್ತಿ ಸಾವು? ಮಾದನಾಯಕನಹಳ್ಳಿ ಠಾಣೆ ಪಿಸಿಗಳ ವಿರುದ್ಧ ಮೃತನ ಕುಟುಂಬಸ್ಥರ ಆರೋಪ
ಮೃತನ ಕುಟುಂಬಸ್ಥರು
TV9kannada Web Team

| Edited By: Ayesha Banu

Sep 25, 2022 | 12:12 PM

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ಗ್ರಾಮದಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಲರಾಮ(35) ಮೃತಪಟ್ಟಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸೆ.19ರಂದು ಬಲರಾಮ ದೇವಸ್ಥಾನಕ್ಕೆ ಹೋಗಿಬರೋದಾಗಿ ಹೇಳಿ ಮನೆಯಿಂದ ಹೊರಟಿದ್ದ. ಈ ವೇಳೆ ಪೊಲೀಸರು ಬಲರಾಮ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. 112 ERSS ವಾಹನದಲ್ಲಿ ಬಂದಿದ್ದ ಪೊಲೀಸರು ಹಲ್ಲೆ ನಡೆಸಿದ್ದಾರಂತೆ. ERSS ಪೊಲೀಸ್ ವಾಹನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾಠಿಯಿಂದ ಬಲರಾಮ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾಗಿದ್ದ ಬಲರಾಮನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ನಿನ್ನೆ ಬಲರಾಮ ಮೃತಪಟ್ಟಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನಡೆಸಿದ ಹಲ್ಲೆಯಿಂದಲೇ ಬಲರಾಮ ಮೃತಪಟ್ಟಿದ್ದಾನೆ ಎಂದು ಪೊಲೀಸರ ವಿರುದ್ಧ ಮೃತ ಬಲರಾಮ ಕುಟುಂಬಸ್ಥರು ಆರೋಪಿಸಿದ್ದಾರೆ. ಮಾದನಾಯಕನಹಳ್ಳಿ ಠಾಣೆಯ ಪಿಸಿಗಳಾದ ವಿಜಯ್​ಕುಮಾರ್, ಜನಾರ್ದನ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಮಗಳ ಬಾಯ್​ಫ್ರೆಂಡ್ ನೊಂದಿಗೆ ಜಗಳ ಮಾಡುತ್ತಿದ್ದ ವ್ಯಕ್ತಿ  ಬಿಡಿಸಲು ಬಂದ ಮಗಳ ಮೇಲೆ ಎರಡು ಬಾರಿ ಕಾರು ಹತ್ತಿಸಿ ಕೊಂದುಬಿಟ್ಟ!

ಸರಣಿ ಕೇಬಲ್ ಕಳ್ಳತನಕ್ಕೆ ರೈತರ ಆತಂಕ

ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜುಂಜರಾಮನಹಳ್ಳಿ ಗ್ರಾಮದಲ್ಲಿ 9ನೇ ಬಾರಿ ಕೇಬಲ್ ಕಳ್ಳತನವಾಗಿದೆ. ಗ್ರಾಮದ ನೀರಿನ ಕೊಳವೆ ಬಾವಿಯ ಮೋಟಾರ್ ಗೆ ಅಳವಡಿಸಿದ್ದ ವಿದ್ಯುತ್ ಕೇಬಲ್‌ ಕಳ್ಳತನ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇದೇ ಕೊಳವೆ ಬಾವಿಯಿಂದ 9 ಸಲ ಕಳ್ಳತನವಾಗಿದೆ. ಜೊತೆಗೆ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಹೊಲ್ತಾಳು ಹಾಗೂ ಕುರುಬರಹಳ್ಳಿ, ಗೊಲ್ಲರಹಟ್ಟಿಯ ಕುಡಿಯುವ ನೀರಿನ ಕೊಳವೆ ಬಾವಿಗಳಲ್ಲಿ ಕೇಬಲ್ ಕಳವು ನಡೆದಿದೆ. ಲಕ್ಷಾಂತರ ರೂ ಬೆಲೆ ಬಾಳುವ ಕೇಬಲ್ ಕಳವು ಆಗುತ್ತಿದ್ದು. ಸರಣಿ ಕಳ್ಳತನಕ್ಕೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರವಾರ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು ಬಂಧಿತನಿಂದ ಸುಮಾರು ಒಂದೂವರೆ ಕೆಜಿ ಗಾಂಜಾ ಹಾಗೂ ಸ್ಕೂಟಿ ವಶಕ್ಕೆ ಪಡೆಯಲಾಗಿದೆ. ಸಿಪಿಐ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಿ ಓರಿಸ್ಸಾ ಮೂಲದ ರಾಕೇಶಕುಮಾರ್ ದಾಸ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶ: ಕಾಲೇಜು ಪ್ರಿನ್ಸಿಪಾಲ್ ಮೇಲೆ ವಿದ್ಯಾರ್ಥಿಯಿಂದ ಗುಂಡಿನ ದಾಳಿ

ವಿಜಯಪುರದಲ್ಲಿ ಮಟ್ಕಾ ಬುಕ್ಕಿಗಳ ಹಾವಳಿ

ವಿಜಯಪುರ ಜಿಲ್ಲೆಯಲ್ಲಿ ಮಟ್ಕಾ ಬುಕ್ಕಿಗಳ ಹಾವಳಿ ಹೆಚ್ಚಾಗಿದೆ. ದೇವರಹಿಪ್ಪರಗಿ ಪಟ್ಟಣದ ಗಲ್ಲಿಗಳಲ್ಲಿ ಮಟ್ಕಾ ದಂಧೆ ಹೆಚ್ಚಿದೆ. ಕಿಂಗ್​ಪಿನ್​ ಅಶೋಕ ದಾದರ್ ಮನೆಯಲ್ಲಿ ಮಟ್ಕಾ ದಂಧೆ ನಡೆದಿದ್ದು ಇಡೀ ಕುಟುಂಬವೇ ಅದರಲ್ಲಿ ಭಾಗಿಯಾಗಿದೆ. ಮಟ್ಕಾ ಬರೆಯಲು ಹತ್ತಾರು ಏಜೆಂಟ್​​​​​, ಬುಕ್ಕಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ತಾಲೂಕಿನ ಹಳ್ಳಿಗಳಲ್ಲಿ ಏಜೆಂಟ್​ಗಳಿಂದ ಮಟ್ಕಾ ದಂಧೆ ನಡೆಯುತ್ತಿದ್ದು ಮಟ್ಕಾ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಪೊಲೀಸರ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಅಪರಾಧಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada