ಬೆಂಗಳೂರು: ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿ ಆರೋಪ: 15 PFI ನಾಯಕರ ಬಂಧನ- ಡಿಸಿಪಿ ಭೀಮಾಶಂಕರ ಗುಳೇದ್

ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪಿಎಫ್​​ಐ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಯಕರು ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಖಾಸಗಿ ಮಾಹಿತಿ ಮೇರೆಗೆ ಬೆಂಗಳೂರು ಸೇರಿದಂತೆ 17 ಕಡೆ ದಾಳಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್​ ತಿಳಿಸಿದ್ದಾರೆ.

ಬೆಂಗಳೂರು: ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿ ಆರೋಪ: 15 PFI ನಾಯಕರ ಬಂಧನ- ಡಿಸಿಪಿ ಭೀಮಾಶಂಕರ ಗುಳೇದ್
ಡಿಸಿಪಿ ಭೀಮಾಶಂಕರ್​ ಗುಳೇದ
TV9kannada Web Team

| Edited By: Vivek Biradar

Sep 24, 2022 | 4:14 PM

ಬೆಂಗಳೂರು: ಕೆ.ಜಿ.ಹಳ್ಳಿ (KG Halli) ಠಾಣಾ ವ್ಯಾಪ್ತಿಯಲ್ಲಿ ಪಿಎಫ್​​ಐ (PFI) ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಯಕರು ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಖಾಸಗಿ ಮಾಹಿತಿ ಮೇರೆಗೆ ಬೆಂಗಳೂರಿನ (Bengaluru) 17 ವಿವಿಧ ಪ್ರದೇಶಗಳಲ್ಲಿ ದಾಳಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ (DCP Bhimashankar) ಗುಳೇದ್​ ತಿಳಿಸಿದ್ದಾರೆ. ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಸೇರಿದಂತೆ 15 ಜನರನ್ನು ವಶಕ್ಕೆ ಪಡೆಯಲಾಗಿದೆ. ಒಬ್ಬ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿದೆವು ಎಂದು ಹೇಳಿದರು.

15 ಜನರನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 15 ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಅವರ ಬಳಿ ಇದ್ದ ಮೊಬೈಲ್, ಲ್ಯಾಪ್​ಟಾಪ್​, ಪೆನ್​ಡ್ರೈವ್​ನ್ನು ವಶಕ್ಕೆ ಪಡೆದು ​ ಕೋರ್ಟ್​ಗೆ ಒಪ್ಪಿಸುತ್ತೇವೆ. ಬಂಧಿತರು ದೇಶದ್ರೋಹ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡಲಾಗುವುದು ಎಂದು ಹೇಳಿದ್ದಾರೆ.

ಆರೋಪಿಗಳು ಪಿಎಫ್ ಐ ಕಚೇರಿಗಳಿಗೆ ಹಾಗೂ ಪಿಎಫ್ ಐ ಹಿರಿಯ ನಾಯಕರುಗಳಿಗೆ ನೇರ ಲಿಂಕ್ ಇರುವುದು ಪತ್ತೆಯಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವವರು ಕರ್ನಾಟಕದಾದ್ಯಂತ ನೆಟ್ ವರ್ಕ್ ಹೊಂದಿರೋದು ಪತ್ತೆಯಾಗಿದೆ. ಬೃಹತ್ ಪ್ರಮಾಣದಲ್ಲಿ ಮುಸ್ಲೀಂ ಯುವಕರನ್ನ ಸೆಳೆದು ಸಮಾಜ ಘಾತುಕ ಚಟುವಟಿಕೆಗಳಿಗೆ ಪ್ರಚೋದನೆ ಮಾಡಿ ಸಮಾಜದಲ್ಲಿ ಧರ್ಮ ಧರ್ಮಗಳ ನಡುವೆ ಗಲಭೆ ಸೃಷ್ಠಿಸಲು ಯತ್ನಿಸಿರುವುದು ಬಹಿರಂಗವಾಗಿದೆ. ದೇಶದ ಒಳಗೆ ಕ್ರೂರ ಕೃತ್ಯಗಳನ್ನು ನಡೆಸುವುದು, ದೇಶದ ವಿರುದ್ಧ ಸಮರ ಸಾರುವುದು. ಅನ್ಲೈನ್ ನಲ್ಲಿ ಹಾಗೂ ನೇರವಾಗಿ ಪ್ರಚೋದನೆ ನೀಡುವುದು. ಪ್ರಚೋದನಕಾರಿ ವಿಡಿಯೋ ಮಾಡುವುದು.

ವಿವಿಧ ರೀತಿಯಲ್ಲಿ ಯುವಸಮುದಾಯವನ್ನ ದೇಶದ ವಿರುದ್ಧ ಎತ್ತಿ ಕಟ್ಟಿ ದುಷ್ಕ್ರತ್ಯಗಳನ್ನ ಎಸಗುವುದು. ಪಿಎಫ್ ಐ ರಾಜ್ಯದ ಹಲವೆಡೆ ಟ್ರೈನಿಂಗ್ ಕ್ಯಾಂಪ್ ಗಳನ್ನ ಆಯೋಜನೆ ಮಾಡುವುದು. ಟ್ರೈನಿಂಗ್ ಕ್ಯಾಂಪ್ ನಲ್ಲಿ ಮಾರಕಾಸ್ತ್ರಗಳನ್ನ ಬಳಸುವ ಬಗ್ಗೆ ತರಬೇತಿ. ನಂತರ ಹಿಂದೂ ಧರ್ಮದಲ್ಲಿ ಗುರುತಿಸಿ ಕೊಂಡಿರುವ ಲೀಡರ್ ಗಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುವುದು. ಈ ಮೂಲಕ ಭಾರತದಲ್ಲಿ ಅಶಾಂತಿ ಹಾಗೂ ಭಯೋತ್ಪಾದನೆ ರೀತಿಯಲ್ಲಿ ಭೀತಿ ಸೃಷ್ಠಿ ಮಾಡುವುದು. ಹೀಗೆ ಅನೇಕ ಕೃತ್ಯಗಳಿಗೆ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಕೆಲ ರಾಜಕಾರಣಿಗಳ ಮೇಲೆ ಅಟ್ಯಾಕ್ ಮಾಡಲು ಸಹ ಟ್ರೈನಿಂಗ್ ನೀಡಲಾಗುತ್ತಿತ್ತು.

PFI ಕಚೇರಿ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ; 51 ಜನರ ವಿರುದ್ಧ ಕೇಸ್: 14 ಮುಖಂಡರ ಬಂಧನ 

ರಾಷ್ಟ್ರೀಯ ತನಿಖಾ(NIA) ತಂಡ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ‘ಆಪರೇಷನ್​ ಆಕ್ಟೋಪಸ್​’ ಸೀಕ್ರೆಟ್​ ಕೋಡ್​ನಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಮೇಲೆ ದಾಳಿ ಮಾಡಿದೆ. ಹೊಂಚು ಹಾಕಿ ಸಂಚು ರೂಪಿಸ್ತಿದ್ದವರು ಕೇಂದ್ರ ಸರ್ಕಾರದ ಮಾಸ್ಟರ್ ಸ್ಟ್ರೋಕ್​ಗೆ ಪತರಗುಟ್ಟುತ್ತಿದ್ದಾರೆ. ಪಿಎಫ್​ಐ ನಾಯಕರ ಜನ್ಮ ಜಾಲಾಡ್ತಿರುವ ಎನ್​ಐಎ ಸ್ಫೋಟಕ ಮಾಹಿತಿಯನ್ನೇ ಕಲೆ ಹಾಕಿದೆ.

15 ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದ ಎನ್‌ಐಎ, PFI ವಿರುದ್ಧದ ಇದುವರೆಗಿನ ಅತೀ ದೊಡ್ಡ ದಾಳಿ ಇದಾಗಿದೆ. ಸುಮಾರು 106 ಪಿಎಫ್​ಐ ಮುಖಂಡರನ್ನ ಬಂಧಿಸಲಾಗಿದೆ. ಇನ್ನು PFI ಕಚೇರಿಗಳ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ ಮಾಡಿದ್ದವರ ವಿರುದ್ಧ ಕೇಸ್ ದಾಖಲಾಗಿದೆ. ಹುಬ್ಬಳ್ಳಿ ಕಮರಿಪೇಟೆ ಠಾಣೆ ಪಿಎಸ್​ಐ ದೂರಿನನ್ವಯ 51 ಜನರ ವಿರುದ್ಧ ಕೇಸ್ ದಾಖಲಾಗಿದೆ. 2 ದಿನಗಳ ಹಿಂದೆ ಪಿಎಫ್​ಐ ಕಾರ್ಯಕರ್ತರು PFI ಧ್ವಜ ಹಿಡಿದು ಕೌಲ್‌ಪೇಟೆ ಬಳಿ ಪ್ರತಿಭಟನೆ ಮಾಡಿದ್ರು. ಅನುಮತಿ ಪಡೆಯದೆ ಪ್ರತಿಭಟನೆ ಹಿನ್ನೆಲೆಹುಬ್ಬಳ್ಳಿಯ ಕಮರಿಪೇಟೆ ಠಾಣೆಯಲ್ಲಿ ಸೆಕ್ಷನ್​ 143, 145, 341,149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada