ಮದ್ಯದ ಅಮಲಿನಲ್ಲಿ ಮಗಳ ಬಾಯ್ಫ್ರೆಂಡ್ ನೊಂದಿಗೆ ಜಗಳ ಮಾಡುತ್ತಿದ್ದ ವ್ಯಕ್ತಿ ಬಿಡಿಸಲು ಬಂದ ಮಗಳ ಮೇಲೆ ಎರಡು ಬಾರಿ ಕಾರು ಹತ್ತಿಸಿ ಕೊಂದುಬಿಟ್ಟ!
ನ್ಯಾಯಾಧೀಶರು ನಿಜೆಲ್ ಮಾಲ್ಟ್‌ಗೆ ಕನಿಷ್ಠ 18 ವರ್ಷಗಳ ಜೀವಾವಧಿ ಸೆರೆವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ, ಇದು ಅವನನ್ನು ಬಿಡುಗಡೆಗೆ ಪರಿಗಣಿಸುವ ಮೊದಲು ಸೆರೆಮನೆಯಲ್ಲಿ ಕಳೆಯಬೇಕಾದ ಸಮಯವಾಗಿದೆ ಎಂದು ಅವರು ಹೇಳಿದ್ದಾರೆ.
ಮರ್ಯಾದೆ ಹತ್ಯೆ ಭಾರತದಲ್ಲಿ ಮಾತ್ರ ಅಲ್ಲ ಅಮೆರಿಕದಲ್ಲೂ ನಡೆಯುತ್ತವೆ ಮಾರಾಯ್ರೇ. ಬಾಯ್ ಫ್ರೆಂಡ್ ನನ್ನು ರಕ್ಷಿಸಲು ಪ್ರಯತ್ನಿಸಿದ ತನ್ನ ಸ್ವಂತ ಮಗಳ ಮೇಲೆಯೇ ಅಮೆರಿಕನ್ ತಂದೆಯೊಬ್ಬ ಎರಡು ಬಾರಿ ಕಾರು ಹತ್ತಿಸಿ ಕೊಂದು ಹಾಕಿದ್ದಾನೆ. ಅವನನ್ನು ಜೀವಾವಧಿ ಸೆರೆವಾಸದ ಶಿಕ್ಷೆಗೊಳಪಡಿಸಲಾಗಿದೆ.
ವರ್ಜೀನಿಯಾದ ನಾರ್ಫಾಕ್ ನಲ್ಲಿರುವ ವೆಸ್ಟ್ ವಿಂಚ್ ನಲ್ಲಿ ಇದೇ ವರ್ಷ ಜನವರಿ 23ರಂದು 45-ವರ್ಷ-ವಯಸ್ಸಿನ ನಿಜೆಲ್ ಮಾಲ್ಟ್ ಹೆಸರಿನ ವ್ಯಕ್ತಿ ಕಾರನಿಂದ ತನ್ನ 19-ವರ್ಷ-ವಯಸ್ಸಿನ ಮಗಳು ಲಾರೆನ್ ಮಾಲ್ಟ್ ಗೆ ರಿವರ್ಸ್ ಗೇರ್ ನಲ್ಲಿ ಡಿಕ್ಕಿ ಹೊಡೆದು ಬೀಳಿಸಿ ಅವಳನ್ನು ನೆಲಕ್ಕೆರ ಬೀಳಿಸಿ ಅದೇ ರಿವರ್ಸ್ ಗೇರ್ನಲ್ಲಿ ಅವಳ ಮೇಲೆ ಕಾರು ಹತ್ತಿಸಿದ ನಂತರ ಕಾರನ್ನು ಮುಂದಕ್ಕೆ ಓಡಿಸಿಕೊಂಡು ಬಂದು ಅವಳ ಮೈಮೇಲೆ ಎರಡನೇ ಬಾರಿ ಕಾರು ಹತ್ತಿಸಿ ಕೊಂದು ಹಾಕಿದ್ದಾನೆ. ಅದಕ್ಕೂ ಮೊದಲು ಅವನು ಮಗಳ ಬಾಯ್ ಫ್ರೆಂಡ್ ನನ್ನು ಸುತ್ತಿಗೆಯಿಂದ ಹೊಡೆದು ಕೊಲ್ಲುವ ಬೆದರಿಕೆ ಹಾಕಿದ್ದ.
ಬಳಿಕ ಮಗಳ ಮೃತದೇಹವನ್ನು ತನ್ನ ಮರ್ಸಿಡಿಸ್ ಕಾರಿನ ಪ್ಯಾಸೆಂಜರ್ ಸೈಡ್ ನಲ್ಲಿಟ್ಟು ಬಾಲಕಿಯ ತಾಯಿ ಮತ್ತು ತನ್ನ ವಿಚ್ಛೇದಿತ ಪತ್ನಿ ಕರೆನ್ ಮಾಲ್ಟ್ ಕೆಲಸ ಮಾಡುತ್ತಿದ್ದ ಕಚೇರಿಗೆ ಹೋಗಿದ್ದಾನೆ.
ಆ ಸಮಯದಲ್ಲಿ, ಅವನು ಮಾರ್ಚ್ ಮತ್ತು ಏಪ್ರಿಲ್ 2021 ರಲ್ಲಿ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ.
ಮಗಳನ್ನು ಕೊಂದ ಪ್ರಕರಣದಲ್ಲಿ ಅವನಿಗೆ ಕನಿಷ್ಠ 18 ವರ್ಷ ಶಿಕ್ಷೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಕರೆನ್ ಮಾಲ್ಟ್, ನಾರ್ವಿಚ್ ಕ್ರೌನ್ ಕೋರ್ಟ್‌ನಲ್ಲಿ ತನ್ನ ಮಾಜಿ ಪತಿಯ ಹುಚ್ಚು ಆವೇಶಕ್ಕೆ ಬಲಿಯಾದ ಮಗಳನ್ನು ನೆನಸಿಸಿಕೊಂಡಿ ಒತ್ತರಿರಸಿಕೊಂಡು ಬರುತ್ತಿದ್ದ ದುಃಖವನ್ನು ತಡೆಯಲಾಗದೆ ಗದ್ಗದಿತ ಸ್ವರದಲ್ಲ್ಲಿ ತನ್ನ ಸಾಕ್ಷ್ಯದ ಹೇಳಿಕೆಯನ್ನು ಓದಿದ್ದರು: ‘ನಾನು ನಿನ್ನ ಮಗಳನ್ನು ಕರೆದುಕೊಂಡು ಬರುತ್ತಿದ್ದೇನೆ, ಅವಳು ಬದುಕಿಲ್ಲ, ಸತ್ತಿದ್ದಾಳೆ. ಎಂದು ನಿಜೆಲ್ ನನಗೆ ಕರೆ ಮಾಡಿ ಹೇಳಿದ್ದು ನೆನಪಿದೆ. ನಾನು ಅವನಿಗೆ ಯಾವ ಮಗಳು ಎಂದು ಕಿರುಚುತ್ತಾ ಕೇಳಿದ್ದೆ. ಆದರೆ ಅವನು ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ.
ನಿಜೆಲ್ ನನ್ನಲ್ಲಿಗೆ ಬರುವಾಗ ಮಗಳು ಸೌಖ್ಯವಾಗಿದ್ದಾಳೆ ಅಂತಲೇ ನಾನು ಭಾವಿಸಿದ್ದೆ,’ ಎಂದು ಕರೆನ್ ಕೋರ್ಟ್ ನಲ್ಲಿ ಹೇಳಿದ್ದರು.
ಆದರೆ ಕಾರು ತಾನಿದ್ದ ಸ್ಥಳಕ್ಕೆ ಬಂದ ಮೇಲೆ ಪ್ಯಾಸೆಂಜರ್ ಡೋರನ್ನು ಓಪನ್ ಮಾಡಿ ಅಲ್ಲಿದ್ದ ಮಗಳ ರಕ್ತಸಿಕ್ತ ದೇಹ ನೋಡಿ, ವಿಹ್ವಲಗೊಂಡು ಕೈಕಾಲುಗಳು ಕಂಪಿಸಲಾರಂಭಿಸಿದ್ದವು ಬಾಯೊಳಗಿನೆ ಪಸೆ ಆರಿಹೋಗಿತ್ತು, ಎಂದು ಅವರು ಹೇಳಿದ್ದಾರೆ.
‘ಆಕೆ ಬದುಕಿರಬಹುದೆಂಬ ಎಂಬ ಭಾವನೆಯೇ ನನ್ನಲ್ಲಿ ಮೂಡಲಿಲ್ಲ. ಅವಳ ದೇಹವನ್ನು ಕಾರಿನ ಫುಟ್ ವೆಲ್ ಜಾಗದಲ್ಲಿ ತೂರಿಸಲಾಗಿತ್ತು. ಆಕೆಯ ಮುಖವನ್ನು ನೋಡಿ ನಾನು ಮೂರ್ಛೆ ಹೋದವಳಂತಾಗಿದ್ದೆ. ಮಗಳ ಮೇಲೆ ಕಾರು ಹರಿಸಲಾಗಿದೆ ಎಂದು ಕೇಳಿಸಿಕೊಂಡಿದ್ದಕ್ಕಿಂತ ಅವಳನ್ನು ಆ ಸ್ಥಿತಿಯಲ್ಲಿ ನೋಡುವುದು ನನಗೆ ದುಸ್ಸಾಧ್ಯವಾಗಿತ್ತು,’ ಎಂದು ಕರೆನ್ ಕೋರ್ಟ್ ನಲ್ಲಿ ಹೇಳಿದರು.
‘ಅವಳನ್ನು ಸೀಟಿನ ಮೇಲೆ ಕೂರಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗದೆ ಹೋಯಿತು, ನಿಜೆಲ್ ನನ್ನ ನೆರವಿಗೆ ಬರಲಿಲ್ಲ. ತನಗೆ ಹುಟ್ಟಿದ ಮಗಳನ್ನೇ ಒಬ್ಬ ತಂದೆ ಕೊಂದು ಹಾಕುತ್ತಾನೆ ಎಂಬ ಅಂಶವನ್ನು ನನಗೆ ಅರಗಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಅವನನ್ನು ಕ್ಷಮಿಸುವುದಾದರೂ ಹೇಗೆ?’ ಎಂದು ಕರೆನ್ ಕೋರ್ಟ್ನಲ್ಲಿ ಹೇಳಿದರು.
ಲಾರೆನ್ ತನ್ನ ಉಳಿದ ಒಡಹುಟ್ಟಿದವರೊಂದಿಗೆ ಬೆಳೆದ ಮನೆ ಆವರಣದಲ್ಲೇ ನಿಜೆಲ್ ಅವಳ ಮೇಲೆ ಹತ್ತಿಸಿ ಕೊಂದು ಹಾಕಿದ.
ನಿಜೆಲ್ ಮಗಳನ್ನು ಕಿಂಗ್ಸ್ ಲಿನ್ ಆಸ್ಪತ್ರೆಗೆ ಕರೆದೊಯ್ದನಾದರೂ ಅಲ್ಲಿನ ವೈದ್ಯರು ಅವಳು ಮೃತಪಟ್ಟಿರುವರೆಂದು ಘೋಷಿಸಿದರು.
ಮದ್ಯದ ಅಮಲಿನಲ್ಲಿ ನಿಜೆಲ್ ಮಾಲ್ಟ್ ತನ್ನ ಕಾರನ್ನು ಅಪಾಯಕಾರಿ ಆಯುಧದಂತೆ ಬಳಿಸಿದ್ದಾನೆ, ಎಂದು ನ್ಯಾಯಾಧೀಶ ಅಂತೋಣಿ ಬೇಟ್ ಹೇಳಿದ್ದಾರೆ.
‘ನಿನ್ನ ಸುಪರ್ದಿಯಲ್ಲಿದ್ದ ಮಗಳು ಸುರಕ್ಷಿತವಾಗಿರಬೇಕಿತ್ತು,’ ಅಂತ ಜಡ್ಜ್ ನಿಜೆಲ್ ಗೆ ಹೇಳಿದರು.
ನ್ಯಾಯಾಧೀಶರು ನಿಜೆಲ್ ಮಾಲ್ಟ್‌ಗೆ ಕನಿಷ್ಠ 18 ವರ್ಷಗಳ ಜೀವಾವಧಿ ಸೆರೆವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ, ಇದು ಅವನನ್ನು ಬಿಡುಗಡೆಗೆ ಪರಿಗಣಿಸುವ ಮೊದಲು ಸೆರೆಮನೆಯಲ್ಲಿ ಕಳೆಯಬೇಕಾದ ಸಮಯವಾಗಿದೆ ಎಂದು ಅವರು ಹೇಳಿದ್ದಾರೆ.
ಕೊಲೆ ಮಾಡಿದ ಸಂದರ್ಭದಲ್ಲಿ ನಿಜೆಲ್ ಅನ್ನು ಪೊಲೀಸರು ತಪಾಸಣೆ ಮಾಡಿದ್ದಾರೆ. ಅವನ ದೇಹದಲ್ಲಿ 100 ಮಿಲಿ ಲೀಟರ್ ರಕ್ತದಲ್ಲಿ 170 ಮಿಲಿಗ್ರಾಂ ಆಲ್ಕೋಹಾಲ್ ಅಂಶ ಇರುವುದು ಕಂಡುಬಂದಿದೆ. ಇದು ಕಾನೂನು ವಿಧಿಸಿರುವ ಮಿತಿಗಿಂತ 80 ಮಿಲಿಗ್ರಾಂ ಹೆಚ್ಚಾಗಿದೆ.
ಕೂದಲನ್ನು ಚಿಕ್ಕದಾಗಿ ಕ್ರಾಪು ಮಾಡಿಸಿಕೊಂಡು ಊರುಗೋಲಿನ ಸಹಾಯದಿಂದ ನಡೆದು ಕೋರ್ಟಿಗೆ ಬಂದ ನಿಜೆಲ್ ಬುಧವಾರ ವಿಚಾರಣೆ ನಡೆಯುವಾಗ ತಲೆ ತಗ್ಗಿಸಿಕೊಂಡೇ ನಿಂತಿದ್ದ ಮತ್ತು ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಓದಿದಾಗ ನಿರ್ವಿಕಾರನಾಗಿದ್ದ.
ವಕೀಲ ಆಂಡ್ರ್ಯೂ ಜಾಕ್ಸನ್, ತಮ್ಮ ವಾದ ಮಂಡಿಸುವಾಗ, ನಿಜೆಲ್ ಮಾಲ್ಟ್ ತನ್ನ ಮಗಳೊಂದಿಗೆ ಜಗಳ ಮಾಡಿದ್ದ ಮತ್ತು ಆಕೆಯ ಬಾಯ್ ಫ್ರೆಂಡ್ ಆರ್ಥರ್ ಮಾರ್ನೆಲ್‌ಗೆ ಲೀಟೆ ವೇಯಲ್ಲಿ ಸುತ್ತಿಗೆಯಿಂದ ಹೊಡೆಯುವ ಬೆದರಿಕೆ ಹಾಕಿದ್ದ ಎಂದು ಹೇಳಿದರು.
ಇದಕ್ಕೂ ಮೊದಲು ನಡೆದ ವಿಚಾರಣೆಯಲ್ಲಿ ನಿಜೆಲ್ ತಾನು ನಿರಪರಾಧಿ, ಮಗಳು ಸತ್ತಿದ್ದು ಆಕಸ್ಮಿಕವಾಗಿ ನಡೆದ ಅಪಘಾತದಿಂದ ಅಂತ ವಾದಿಸಿದ್ದ. ಆದರೆ ನಂತರದ ವಿಚಾರಣೆಯಲ್ಲಿ ಅವನ ಅಪರಾಧ ಸಾಬೀತಾಯಿತು.