Shocking News: ಗ್ರಾಮೀಣ ಭಾಗದ ಯುವಕರೇ ಎಚ್ಚರ… ಒಳ್ಳೇ ಸಂಬಳ ಸಿಗುತ್ತೆ ಎಂದು ಈ ಖೆಡ್ಡಾಕ್ಕೆ ಬೀಳಬೇಡಿ
ಐಟಿ ಉದ್ಯೋಗದ ನೆಪದಲ್ಲಿ ಮ್ಯಾನ್ಮಾರ್‌ಗೆ ಕರೆದೊಯ್ಯಲಾಗಿದ್ದ 32 ಭಾರತೀಯರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಇನ್ನೂ 60 ಮಂದಿ ಭಾರತೀಯರು ಈ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ಭಾರತ ಸರ್ಕಾರದ ಅಧಿಕಾರಿಗಳು ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ಸರ್ಕಾರದ ಅಧಿಕಾರಿಗಳೊಂದಿಗೆ ನಿಕಟವಾದ ಸಂಪರ್ಕವನ್ನು ಮಾಡಿಕೊಂಡು ಆ 60 ವಿದ್ಯಾರ್ಥಿಗಳನ್ನು ಪತ್ತೆ ಮಾಡುವ ಕಾರ್ಯವನ್ನು ಮಾಡುತ್ತಿದೆ.
ಸಂಶಯಾಸ್ಪದ ಐಟಿ ಸಂಸ್ಥೆಗಳು 100 ಕ್ಕೂ ಹೆಚ್ಚು ಭಾರತೀಯ ಯುವಕರಿಗೆ ಉದ್ಯೋಗದ ಆಮಿಷವೊಡ್ಡಿ ಮ್ಯಾನ್ಮಾರ್‌ಗೆ ಕರೆದುಕೊಂಡು ಹೋಗಿರುವ ಪ್ರಕರಣ ಹೊರ ಬೀಳುತ್ತಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ನಕಲಿ ಉದ್ಯೋಗ ದ ನೆಪದಲ್ಲಿ ಮ್ಯಾನ್ಮಾರ್‌ಗೆ ಕರೆದೊಯ್ಯಲಾಗಿದ್ದ 32 ಭಾರತೀಯರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಲಾಭದಾಯಕ ಐಟಿ ಉದ್ಯೋಗ ಕೊಡಿಸುವ ಆಸೆ ಹುಟ್ಟಿಸಿ ಕೊರೆದುಕೊಂಡು ಹೋಗಿರುವ ಇನ್ನೂ 60 ಮಂದಿ ಭಾರತೀಯರು ಈ ಪ್ರದೇಶದಲ್ಲಿ ಸಿಲುಕಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಇದೀಗ ಭಾರತ ಸರ್ಕಾರದ ಅಧಿಕಾರಿಗಳು ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ಸರ್ಕಾರದ ಅಧಿಕಾರಿಗಳೊಂದಿಗೆ ನಿಕಟವಾದ ಸಂಪರ್ಕವನ್ನು ಸಾಧಿಸಿ 60 ವಿದ್ಯಾರ್ಥಿಗಳನ್ನು ಪತ್ತೆ ಮಾಡಲು ಮುಂದಾಗಿವೆ.
ಈ ಕುರಿತಂತೆ ವಿವರವಾದ ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಥಾಯ್ಲೆಂಡ್ ಮತ್ತು ಮ್ಯಾನ್ಮಾರ್‌ನಲ್ಲಿರುವ ದೇಶದ ತನಿಖಾ ಸಂಸ್ಥೆಗಳು ಥೈಲ್ಯಾಂಡ್‌ನಲ್ಲಿನ ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಭಾರತೀಯ ಯುವಕರನ್ನು ಸೆಳೆಯುತ್ತಿವೆ. ಲಾಭದಾಯಕ ಉದ್ಯೋಗ ಕೊಡಿಸುವ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಉದ್ಯೋಗ ಜಾಲದ ಮೂಲಕ ಹಗರಣ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಕಾಲ್ ಸೆಂಟರ್ ಹಗರಣಗಳು ಮತ್ತು ಕ್ರಿಪ್ಟೋ-ಕರೆನ್ಸಿ ವಂಚನೆಯಲ್ಲಿ ತೊಡಗಿರುವ ಸಂಶಯಾಸ್ಪದ ಐಟಿ ಸಂಸ್ಥೆಗಳು ಈ ಕೆಲಸವನ್ನು ಮಾಡುತ್ತಿದೆ ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಇತರ ಮೂಲಗಳ ಮೂಲಕ ಹರಡುತ್ತಿರುವ ಇಂತಹ ನಕಲಿ ಉದ್ಯೋಗ ಆಫರ್‌ಗಳಲ್ಲಿ ಭಾರತೀಯ ಪ್ರಜೆಗಳು ಸಿಲುಕಿಕೊಳ್ಳದಂತೆ ಸೂಚಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಸಂಶಯಾಸ್ಪದ ಸಂಸ್ಥೆಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಾರೆ. ಆ ನಂತರ ದುಬೈ ಮತ್ತು ಭಾರತದ ವಿವಿದೆಡೆ ಇರುವ ಏಜೆಂಟ್‌ರ ಮೂಲಕ ಈ ಯುವಕರನ್ನು ಸೆಳೆಯುತ್ತಾರೆ. ಅವರು ಥೈಲ್ಯಾಂಡ್‌ನಲ್ಲಿ ಲಾಭದಾಯಕ ಡೇಟಾ ಎಂಟ್ರಿ ಉದ್ಯೋಗದ ಹೆಸರಿನಲ್ಲಿ ನುರಿತ ಯುವಕರನ್ನು ವಂಚಿಸುತ್ತಾರೆ.
ಈ ಐಟಿ ಯುವಕರನ್ನು ಅಕ್ರಮವಾಗಿ ಗಡಿಯುದ್ದಕ್ಕೂ ಕರೆದೊಯ್ಯಲಾಗುತ್ತದೆ ಎಂದು ವರದಿಯಾಗಿದೆ, ಹೆಚ್ಚಾಗಿ ಮ್ಯಾನ್ಮಾರ್‌ಗೆ ಮತ್ತು ಇತರ ಪ್ರದೇಶಗಳಿಗೆ ಕೆಲಸ ಮಾಡಲು ಕರೆದುಕೊಂಡು ಹೋಗಲಾಗಿದೆ ಎಂದು ಸಚಿವಾಲಯ ಹೇಳಿದೆ. ಉದ್ಯೋಗದ ಉದ್ದೇಶಗಳಿಗಾಗಿ ಪ್ರವಾಸಿ ಅಥವಾ ಭೇಟಿ ವೀಸಾಗಳಲ್ಲಿ ಪ್ರಯಾಣಿಸುವ ಮೊದಲು, ಭಾರತೀಯ ಪ್ರಜೆಗಳು ವಿದೇಶದಲ್ಲಿರುವ ಉದ್ಯೋಗದಾತರ ರುಜುವಾತುಗಳನ್ನು ಪರಿಶೀಲಿಸಬೇಕು. ಅವರು ಉದ್ಯೋಗದ ಪ್ರಸ್ತಾಪವನ್ನು ತೆಗೆದುಕೊಳ್ಳುವ ಮೊದಲು ನೇಮಕಾತಿ ಏಜೆಂಟ್‌ಗಳು ಮತ್ತು ಯಾವುದೇ ಕಂಪನಿಯ ಸ್ವಾಮ್ಯತೆಯನ್ನು ಸಹ ಪರಿಶೀಲಿಸಬೇಕು.
ಥೈಲ್ಯಾಂಡ್ ಮೂಲದ ಸಂಸ್ಥೆಗಳಿಂದ ಆಮಿಷಕ್ಕೆ ಒಳಗಾದ ಹೆಚ್ಚಿನ ಭಾರತೀಯರನ್ನು ಅಕ್ರಮವಾಗಿ ಗಡಿಯ ಮೂಲಕ ಮ್ಯಾನ್ಮಾರ್‌ನ ಮೈವಾಡ್ಡಿ ಪ್ರದೇಶಕ್ಕೆ ಕರೆದೊಯ್ಯಲಾಯಿತು, ಆದರೆ ಅವರಿಗೆ ಸ್ಥಳೀಯ ಭದ್ರತಾ ಪರಿಶೀಲನೆಯಿಂದ ಆ ದೇಶದ ಪ್ರವೇಶಿಸಲು ಕಷ್ಟವಾಗಿದೆ. ಕೆಲವು ವರದಿಗಳ ಪ್ರಕಾರ ಸುಮಾರು 300 ಭಾರತೀಯ ಕಾರ್ಮಿಕರನ್ನು ಅಕ್ರಮವಾಗಿ ಮೈವಾಡ್ಡಿ ಪ್ರದೇಶಕ್ಕೆ ಕರೆದೊಯ್ದಿರಬಹುದು ಎಂದು ಹೇಳಿದೆ.
ಥಾಯ್ಲೆಂಡ್ ಮತ್ತು ಮ್ಯಾನ್ಮಾರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು ಈಗಾಗಲೇ ಹಗರಣದ ಬಗ್ಗೆ ಸಲಹೆಗಳನ್ನು ನೀಡಿದ್ದು, ಭಾರತವು ಎರಡೂ ದೇಶಗಳೊಂದಿಗೆ ಸಂಪರ್ಕದಲ್ಲಿದೆ. ನಿರ್ಬಂಧಿತ ಪ್ರವೇಶದೊಂದಿಗೆ ಮ್ಯಾನ್ಮಾರ್‌ನ ಪ್ರದೇಶದಿಂದ 32 ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲಾಗಿದ್ದು, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನ ರಾಯಭಾರ ಕಚೇರಿಗಳು ಸಹಾಯ ಕೋರಿರುವ 50 ರಿಂದ 60 ಭಾರತೀಯರೊಂದಿಗೆ ಸಂಪರ್ಕದಲ್ಲಿವೆ. ಇದೀಗ ಈ ಬಗ್ಗೆ ಸರ್ಕಾರವು ಎಚ್ಚರಿಕೆಯನ್ನು ವಹಿಸುವಂತೆ ಯುವಸಮೂಹಕ್ಕೆ ಹೇಳಿದೆ. ಫೇಕ್ ಉದ್ಯೋಗ ಮಾಹಿತಿ ಬಲಿಯಾದಂತೆ ಎಚ್ಚರಿಕೆಯನ್ನು ನೀಡಿದೆ.
Published On - 1:46 pm, Sat, 24 September 22