Amit Shah: ಅಕ್ಟೋಬರ್‌ನಲ್ಲಿ ಅಮಿತ್ ಶಾ ಜಮ್ಮು- ಕಾಶ್ಮೀರಕ್ಕೆ ಭೇಟಿ, ಪಹಾರಿ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡುವ ಸಾಧ್ಯತೆ

ಉತ್ತರ ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಹಾರಿ ಸಮುದಾಯಕ್ಕೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನ ನೀಡುವ ಕುರಿತು ಶಾ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.

Amit Shah: ಅಕ್ಟೋಬರ್‌ನಲ್ಲಿ ಅಮಿತ್ ಶಾ ಜಮ್ಮು- ಕಾಶ್ಮೀರಕ್ಕೆ ಭೇಟಿ, ಪಹಾರಿ ಸಮುದಾಯಕ್ಕೆ ವಿಶೇಷ  ಸ್ಥಾನಮಾನ ನೀಡುವ ಸಾಧ್ಯತೆ
Amit Shah
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 24, 2022 | 12:07 PM

ಗೃಹ ಸಚಿವ ಅಮಿತ್ ಶಾ ಮುಂದಿನ ವಾರ ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಈ ಸಮಯದಲ್ಲಿ ಪ್ರಮುಖ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಇದು ಕಾಶ್ಮೀರಕ್ಕೆ ಗೃಹ ಸಚಿವರ ಎರಡನೇ ಭೇಟಿಯಾಗಿದೆ. ಇದಕ್ಕೂ ಮುನ್ನ ಅವರು ಕಳೆದ ವರ್ಷ ಪುಲ್ವಾಮಾ ಮತ್ತು ಶ್ರೀನಗರಕ್ಕೆ ಭೇಟಿ ನೀಡಿದ್ದರು.

ಯುಟಿಗೆ ಷಾ ಅವರ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಹಾರಿ ಸಮುದಾಯಕ್ಕೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನ ನೀಡುವ ಕುರಿತು ಶಾ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಗುಜ್ಜರರಂತೆಯೇ ಪಹಾರಿ ಸಮುದಾಯವೂ ವಿಶೇಷ ಸ್ಥಾನಮಾನ ನೀಡುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಗುಜ್ಜರ್ ಸಮುದಾಯದ ಮುಖಂಡರು ಈ ಬೇಡಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ರಾಜ್ಯ ವಕ್ತಾರ ಅಲ್ತಾಫ್ ಠಾಕೂರ್ ಮಾತನಾಡಿ, ಗೃಹ ಸಚಿವರು ಬಾರಾಮುಲ್ಲಾದ ಡಿಗ್ರಿ ಕಾಲೇಜಿನಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಈ ರ್ಯಾಲಿಯಲ್ಲಿ ಪಹಾರಿ ಮತ್ತು ಒಬಿಸಿಗಳ ಬಗ್ಗೆ ಪ್ರಮುಖ ಘೋಷಣೆ ಮಾಡಲಿದ್ದಾರೆ. ಅಕ್ಟೋಬರ್ 1 ರಂದು ಶ್ರೀನಗರಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.

J&K ನಲ್ಲಿ ಅಮಿತ್ ಶಾ ಅವರು ವ್ಯಾಪಾರ ಸಮುದಾಯದ ಸದಸ್ಯರೊಂದಿಗೆ, ವಿಶೇಷವಾಗಿ ಹೋಟೆಲ್ ಮಾಲೀಕರು ಮತ್ತು ಪ್ರವಾಸೋದ್ಯಮ ಮತ್ತು ಇತರ ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿದ ಉದ್ಯಮಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. ಶಾ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಪಂಚಾಯತ್ ಪ್ರತಿನಿಧಿಗಳನ್ನು ಭೇಟಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಅಮಿತ್ ಶಾ ಕಾಶ್ಮೀರದ ಶಾಲೆಯೊಂದರಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಿದ್ದಾರೆ. ಭದ್ರತಾ ಕಾರಣಗಳಿಗಾಗಿ ಆಯ್ಕೆಯಾದ ಶಾಲೆಗಳನ್ನು ಮುಂದಿನ ಭಾನುವಾರ ಅಂತಿಮಗೊಳಿಸಲಾಗುತ್ತದೆ. ಜಮ್ಮುವಿನಲ್ಲಿ ಮತ್ತೊಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವುದರ ಜೊತೆಗೆ ಷಾ ಯುಟಿಗೆ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಅಮಿತ್ ಶಾ ಮೂರು ದಿನಗಳ ಕಾಲ ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಿದ್ದರು ಅವರು ಯುಟಿಯಲ್ಲಿ ಹಲವಾರು ಯೋಜನೆಗಳಿಗೆ ಅಡಿಗಲ್ಲು ಹಾಕಿದರು. ಆ ಸಮಯದಲ್ಲಿ ಶಾ ಯಾವುದೇ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ನಾಯಕರ ಜೊತೆ ಯಾವುದೇ ಸಭೆ ನಡೆಸಿರಲಿಲ್ಲ. ಯುಟಿಯಲ್ಲಿ ಚುನಾವಣೆಗಳು ನಡೆಯುತ್ತಿದ್ದಂತೆ ಶಾ ಅವರ ಜಮ್ಮು- ಕಾಶ್ಮೀರ ಭೇಟಿ ಮಹತ್ವ ಪಡೆದುಕೊಂಡಿದೆ. ಯುಟಿ ಸರ್ಕಾರವು ಚುನಾವಣೆಗೆ ಬಹುತೇಕ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಈಗಾಗಲೇ ಹೇಳಿದೆ ಮತ್ತು ಚುನಾವಣೆಯ ದಿನಾಂಕವನ್ನು ನಿರ್ಧರಿಸುವುದು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಬಿಟ್ಟದ್ದು. ಎಲ್ಲಾ ರಾಜಕೀಯ ಪಕ್ಷಗಳು ಸಹ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಚುನಾವಣೆಗೆ ತಯಾರಿ ಆರಂಭಿಸಿವೆ.

Published On - 12:06 pm, Sat, 24 September 22